ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕ್ರಿಕೆಟ್‌ನಲ್ಲಿ ಕೋಟ-ಸಾಲಿಗ್ರಾಮ ತಂಡದ ಐತಿಹಾಸಿಕ ಸಾಧನೆ;ಪೌಲ್ ಹ್ಯಾರಿಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯ ಚಾಂಪಿಯನ್

ಮೈಸೂರಿನಲ್ಲಿ ನಡೆದ ಅಂತರ್ ಜಿಲ್ಲಾ ರೋಟರಿ ಕ್ರಿಕೆಟ್ ಕಪ್ ಪೌಲ್ ಹ್ಯಾರಿಸ್ ಟ್ರೋಫಿ ಪಂದ್ಯಾವಳಿಯಲ್ಲಿ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ತಂಡ ಅಜೇಯವಾಗಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಯಿ ತು.ರಾಜ್ಯದ ವಿವಿಧ ಭಾಗಗಳ ಪ್ರತಿಷ್ಠಿತ ರೋಟರಿ ಕ್ಲಬ್‌ಗಳ ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಕೋಟ-ಸಾಲಿಗ್ರಾಮ ತಂಡ ಆರಂಭದಿಂದಲೇ ಉತ್ತಮ ಸಂಘಟಿತ ಆಟದ ಮೂಲಕ ಗಮನ ಸೆಳೆಯಿತು. ಎದುರಾಳಿ ತಂಡಗಳ ಸವಾಲನ್ನು ಸಮರ್ಥವಾಗಿ ಎದುರಿಸಿದ ಆಟಗಾರರು ಪ್ರತಿಯೊಂದು ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಿ ಎಲ್ಲ ಪಂದ್ಯಗಳಲ್ಲೂ ಜಯಭೇರಿ ಬಾರಿಸಿದರು.

ಯಾವುದೇ ಪಂದ್ಯದಲ್ಲಿ ಸೋಲನುಭವಿಸದೆ ಸತತ ಗೆಲುವು ದಾಖಲಿಸಿ ಪೌಲ್ ಹ್ಯಾರಿಸ್ ಟ್ರೋಫಿಯನ್ನು ಹಾಗೂ ಜೊತೆಗೆ ರೂಪಾಯಿ 50,000 ನಗದು ಬಹುಮಾನ ಪಡೆದುಕೊಂಡರು. ಈ ಸಾಧನೆಯ ಮೂಲಕ ಕ್ಲಬ್ ರಾಜ್ಯಮಟ್ಟದಲ್ಲಿ ತನ್ನ ಕ್ರೀಡಾ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು.ತಂಡದ ಆಟಗಾರರಾದ ಯೋಗೀಶ್ ಕುಮಾರ್, ಕರುಣಾಕರ ಕುಂದರ್, ವೆಂಕಟೇಶ್, ಪ್ರಸಾದ್, ಪ್ರಸಾದ್ ಮೆಂಡನ್, ಯೋಗೀಶ್ ಕಾಂಚನ್, ರಾಘವೇಂದ್ರ, ವಿಘ್ನೇಶ್, ಚವನ್ ಭಂಡಾರಿ, ಆದರ್ಶ, ಪ್ರಜ್ವಲ್, ರೋಹಿತ್, ಸುಚನ್, ಸೂರಜ್ ಹಾಗೂ ಶ್ರವಣ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರೋಟರಿ ಅಧ್ಯಕ್ಷ ಮಿಲ್ಟನ್ ಅಲ್ಮೆಡ, ಕಾರ್ಯದರ್ಶಿ ಕರುಣಾಕರ ಕುಂದರ್, ರೋಟರಿ ಪ್ರಮುಖರಾದ, ಸುರಕ್ಷಾ ಕುಂದರ್, ರಾಜೇಂದ್ರ ಸುವರ್ಣ, ತಿಮ್ಮ ಪೂಜಾರಿ, ಮಾಧವ ಪೂಜಾರಿ, ಬಸವರಾಜ್, ಚಂದ್ರ ಪೂಜಾರಿ, ಐರೋಡಿ ಬಸವ ಪೂಜಾರಿ, ಜೇಮ್ಸ್ ಹಾಗೂ ಬಸವ ಪೂಜಾರಿ ಪಾರಂಪಳ್ಳಿ ತಂಡದ ಸಾಧನೆಗೆ ಸಹಕರಿಸಿದರು.

Leave a Reply

Your email address will not be published. Required fields are marked *