ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿ.ಬಿ.ಸಿ.ಎಲ್‌ ವಾರ್ಷಿಕ ಕ್ರೀಡಾಕೂಟ ಉಧ್ಘಾಟನೆ

ಉಡುಪಿ ನವೆಂಬರ್‌ 19, ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಮಾದಕವಸ್ತುಗಳ ಮೊರೆ ಹೋಗದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಉಡುಪಿಯ ವಕೀಲರಾದ ಶ್ರೀ ಅಖಿಲ್‌ ಪಿ ಹೆಗ್ದೆ ಹೇಳಿದರು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವತಿಯಿಂದ 2026-27ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉಧ್ಘಾಟಿಸಿ ಶ್ರೀಯುತರು ಮಾತನಾಡುತ್ತಾ ಕಾನೂನು ವಿದ್ಯಾರ್ಥಿಗಳು ಪದವಿ ನಂತರ ವಕೀಲ ವೃತ್ತಿಯಲ್ಲಿ ಕ್ರೀಡಾ ಮನೋಭಾವ ತುಂಬಾ ಅವಶ್ಯವಾಗಿದೆ.

ಸೋಲು ಮತ್ತು ಗೆಲುವನ್ನು ಒಂದೇ ರೀತಿ ಸ್ವೀಕರಿಸುವ ಮನೋಭಾವ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಬರುತ್ತದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಖಾ ಕೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವನದಲ್ಲಿ ಬೇರೆ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಿಕೊಳ್ಳದೆ ನಮ್ಮನ್ನು ನಾವು ಅರಿತುಕೊಂಡು ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಹೋಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರಕಾಶ್‌ ರಾವ್‌ ಡಿ, ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ದೀಲಿಪ್‌ ಮತ್ತು ಭರತ್‌ ಉಪಸ್ಥಿತರಿದ್ದರು, ವಿದ್ಯಾರ್ಥಿನಿ ಪವಿತ್ರ ಪ್ರಾರ್ಥನೆ ಸಲ್ಲಿಸಿದರು ಹಂಸಶ್ರೀ ಸ್ವಾಗತಿಸಿದರು, ಪ್ರಿಯಾಂಕ ವಂದನಾರ್ಪಣೆ ಸಲ್ಲಿಸಿದರು, ದೀಪಕ್‌ ಕಾಮತ್‌ ನಿರೂಪಿಸಿದರು.

Leave a Reply

Your email address will not be published. Required fields are marked *