ಕಾನೂನು ಕಾಲೇಜಿನಲ್ಲಿ ಸಾಂವಿಧಾನ ದಿನ ಆಚರಣೆ ಸಂವಿಧಾನದ ಮೂಲಭೂತ ತತ್ವಗಳಿಗೆ ಗೌರವ ನೀಡುವುದು ಮತ್ತು ಸಂವಿಧಾನದ ದೃಷ್ಟಿಕೋನ ಹಾಗೂ ಆಶಯಗಳನ್ನು ಆರ್ಧಮಾಡಿಕೊಳ್ಳುವುದು ಇಂದಿನ ದಿನದಲ್ಲಿ ಮಹತ್ವ ಹೊಂದಿದೆ ಎಂದು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.(ಡಾ.) ವೇಣುಗೋಪಾಲ್ ಹೇಳಿದರು.
ಉಡುಪಿಯ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀಯುತರು ಸಂವಿಧಾನದಲ್ಲಿನ ಪ್ರತಿಯೊಂದು ಪದವನ್ನು ಉದ್ದೇಶಪೂರ್ವಕವಾಗಿ ಮತ್ತು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಸಂವಿಧಾನವು ಅಂತಿಮ ಮತ್ತು ಬದಲಿಸಲಾಗದ ದಾಖಲೆಯಲ್ಲ, ಕಾಲ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ ಹಾಗೂ ಸಮಸ್ಯೆಗಳನ್ನು ಸಂವಿಧಾನ ಮಾರ್ಗಗಳ ಹಾಗೂ ಪ್ರಜಾಪ್ರಭುತ್ವ ವಿಧಾನದಲ್ಲಿ ಪರಿಹರಿಸಬೇಕಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಖಾ ಕೆ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸರಾದ ಪ್ರೊ ರೋಹಿತ್ ಎಸ್. ಅಮೀನ್ ಉಪಸ್ಥಿತರಿದ್ದರು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಕೀಲರಾದ ಶ್ರೀಮತಿ ಅಪರ್ಣ ಭಟ್ ನ್ಯಾಯಾಂಗ ಸೇವಾ ಪರೀಕ್ಷೆಗೆ ಸಂಬಧಿಸಿದ ಪುಸ್ತಕಗಳನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿನಿ ಶ್ರೀಶಾ ಪೈ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಭೋದಿಸಿದರು. ವೈಭವಿ ಪ್ರಾರ್ಥನೆ ಸಲ್ಲಿಸಿದರು ವಿನ್ಯಾಸ ಪೈ ಸ್ವಾಗತಿಸಿದರು. ಆಸ್ಮಿಯಾ ಅತಿಥಿಗಳನ್ನು ಪರಿಚಯಿಸಿದರು. ಸಿಂಚನಾ ವಂದನಾರ್ಪಣೆ ಸಲ್ಲಿಸಿದರು ಮಾರ್ಕಸ್ ನಿರೂಪಿಸಿದರು.












Leave a Reply