ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ವಿವೇಕ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ನಿನಾದ – 2026 ಸಂಭ್ರಮಕ್ಕೆ ಚಾಲನೆ

ಕೋಟ: ಜೀವನದಲ್ಲಿ ಮರೆಯಲಾಗದ ಕ್ಷಣ ಎಂದರೆ ಅದು ನಮ್ಮ ಬಾಲ್ಯದ ಶಿಕ್ಷಣ ಪಡೆದ ದಿನಗಳು ಅದರಲ್ಲೂ ಬಹುಮುಖ್ಯವಾಗಿ ನಾವು ಕಲಿತ ಶಾಲೆ,ಗುರುಗಳ ಪಾತ್ರ ತಂದೆ ತಾಯಿಯಷ್ಟೆ ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಯೆನೆಪೋಯ ವೈದ್ಯಕೀಯ ಕಾಲೇಜು ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ, ದೇರಳಕಟ್ಟೆ, ಮಂಗಳೂರು ಇದರ ಕುಲಪತಿ ​ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಹೇಳಿದರು.​

ಗುರುವಾರ ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ವಿದ್ಯಾಸಂಸ್ಥೆ ಕೋಟ ಇದರ ವಾರ್ಷಿಕ ವಾರ್ಷಿಕೋತ್ಸವ ನಿನಾದ-2026 ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ನಾನು ಇಂದು ಬಹು ಎತ್ತರಕ್ಕೆ ಬೆಳೆದಿರಬಹುದು ಅದಕ್ಕೆ ನಾನು ಕಲಿತ ಈ ವಿದ್ಯಾ ಕ್ಷೇತ್ರವೇ ಕಾರಣ ಎಂದರಲ್ಲದೆ ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನವನ್ನು ಮೌಲ್ಯಯುತವಾಗಿ ಉಪಯೋಗಿಸಿ ಕೊಂಡು ಸಾಧನೆಯ ಮಜಲುಗಳನ್ನೆರಬೇಕು, ಮೌಲ್ಯಭರಿತ ಶಿಕ್ಷಣ ಅದು ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ಪಡೆಯಲು ಸಾಧ್ಯ ಎಂಬುವುದಕ್ಕೆ ನಾವುಗಳೇ ಸಾಕ್ಷಿ ಎಂದರಲ್ಲದೆ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವುದರ ಜೊತೆಗೆ ನಾವು ಕಲಿತ ವಿದ್ಯಾಸಂಸ್ಥೆಗೆ ನಮ್ಮಿಂದಾದ ಅಳಿಲು ಸೇವೆಯನ್ನು ನೀಡೋಣ ಎಂದರು.

ಈ ಸಂದರ್ಭದಲ್ಲಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ, ದೇರಳಕಟ್ಟೆ, ಮಂಗಳೂರು ಇದರ ಕುಲಪತಿ ​ಡಾ. ಕೆ. ಎಸ್. ಗಂಗಾಧರ ಸೋಮಯಾಜಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ, ಸಂವಾದ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಬೆಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕಿ ಸಂಧ್ಯಾ ಕೋಟೇಶ್ವರ ಇವರುಗಳನ್ನು ಗೌರವಿಸಲಾಯಿತು.

ವಿವೇಕ ವಿದ್ಯಾಸಂಘದ ಅಧ್ಯಕ್ಷ ಪಿ.ಭಾಸ್ಕರ್ ಹಂದೆ ಅಧ್ಯಕ್ಷತೆ ವಹಿಸಿದರು. ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ್,ಜೊತೆ ಕಾರ್ಯದರ್ಶಿ ಮಂಜುನಾಥ್ ಉಪಾಧ್ಯಾ,ಹಿರಿಯ ಸಹಾಯಕ ಶಿಕ್ಷಕಿ ರತಿ ಬಾಯಿ,ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರೇಮಾನಂದ,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ ರಮಾನಂದ ಭಟ್,ನಿವೃತ್ತ ಶಿಕ್ಷಕ ಶ್ರೀಪತಿ ಹೇರ್ಳೆ,ಶಿಕ್ಷಕ ವಸಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿ ಪರಿಚಯಿಸಿದರು.

ವಿದ್ಯಾರ್ಥಿ ಮುಖಂಡ ನಿಶಾಂತ್ ಕಿಣಿ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಡಾ‌.ಬಾಲಕೃಷ್ಣ ನಕ್ಷತ್ರಿ,ಜಯಶ್ರೀ ನಿರೂಪಿಸಿದರೆ,ಶಿಕ್ಷಕ ಸಂಜೀವ ಗುಂಡ್ಮಿ ವಂದಿಸಿದರು. ಬಹುಮಾನ ವಿತರಣಾ ಕಾರ್ಯಕ್ರ‌ಮ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ವಿದ್ಯಾಸಂಸ್ಥೆ ಕೋಟ ಇದರ ವಾರ್ಷಿಕ ವಾರ್ಷಿಕೋತ್ಸವ ನಿನಾದ-2026 ಕಾರ್ಯಕ್ರಮದಲ್ಲಿ ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ, ದೇರಳಕಟ್ಟೆ, ಮಂಗಳೂರು ಇದರ ಕುಲಪತಿ ​ಡಾ. ಕೆ. ಎಸ್. ಗಂಗಾಧರ ಸೋಮಯಾಜಿ,ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ,ಸಂವಾದ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಬೆಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕಿ ಸಂಧ್ಯಾ ಕೋಟೇಶ್ವರ ಇವರುಗಳನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *