ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಇಎಸ್ಐಸಿಯಲ್ಲಿ ರಾಜ್ಯೋತ್ಸವ ಸಂಭ್ರಮ; ಕನ್ನಡ ನಾಡು, ನುಡಿ, ಸಂಸ್ಕೃತಿಯ ಅನಾವರಣ

ಬೆಂಗಳೂರು,ನ.26: ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜಾಜಿನಗರ ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂಟದಿಂದ ಮೆಡಿಕಲ್ ಕಾಲೇಜು ಮುಂಭಾಗ ಅದ್ಧೂರಿಯಾಗಿ ಆಯೋಜಿಸಲಾಗಿತ್ತು.

ಕನ್ನಡದ ಹಿರಿಮೆ, ಗರಿಮೆ, ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಸ್ಯ ಸಾಹಿತಿ ಪ್ರೊ. ಎಂ. ಕೃಷ್ಣೇಗೌಡ ಸೇರಿದಂತೆ ಗಣ್ಯರು ಕನ್ನಡದ ಕಂಪನ್ನು ಪಸರಿಸಿದರು. ನಾಡು-ನುಡಿಯ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಮನರಂಜನಾ ಚಟುವಟಿಕೆಗಳು ಗಮನ ಸೆಳೆದವು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಹಾಗೂ ಜಾಗೃತಿ ಮೂಡಿಸುವುದು ಈ ಸಮಾರಂಭದ ಪ್ರಮುಖ ಆಶಯವಾಗಿದೆ.

“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂಬ ಆಶಯದೊಂದಿಗೆ ನಡೆದ ನುಡಿ ಜಾತ್ರೆ ನಾಡಿನ ಜನಮಾನಸದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿತು.ಈ ವೇಳೆ ಕಾರ್ಯಕ್ರಮದಲ್ಲಿ ಇಎಸ್ಐಸಿ ಆಸ್ಪತ್ರೆಯ ಡೀನ್ ಡಾ ಜೀತೇಂದ್ರ ಕುಮಾರ್ ಜೆ .ಎಂ. ವೈದ್ಯಕೀಯ ಅಧೀಕ್ಷಕರಾದ ಡಾ ವಿ.ವಿಜಯ ಕುಮಾರಿ,ರೇಣುಕಾ ಪ್ರಸಾದ್,ಡಾ ಅಶಿಕ್ ಮುಲ್ಲಿಕ್ ,ಗೌರವ ಅಧ್ಯಕ್ಷರಾದ ಡಾ ಗಿರೀಶ್ ಎಂ.ಎಸ್, ಅಧ್ಯಕ್ಷ ರಾದ ಸುಧಾಕರ್, ಜಂಟಿ ಕಾರ್ಯದರ್ಶಿ ಶಿವಣ್ಣ .ಎಸ್, ಬ್ರಿಜೇಶ್,ರಾಮ್ ರಾಜ್ ಮೀನಾ, ಮನೋಜ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *