ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನ.29ಕ್ಕೆ ಅಘೋರೇಶ್ವರ ಕನ್ನಡ ರಾಜ್ಯೋತ್ಸವ ಸಂಭ್ರಮ,ಸಾಹಿತಿ ನರೇಂದ್ರ ಕುಮಾರ್ ಕೋಟ ರಿಗೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕೋಟ: ಇಲ್ಲಿನ ಅಘೋರೇಶ್ವರ ಕಲಾರಂಗ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ-2026 ಅಘೋರೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.29ರಂದುಬೆಳಿಗ್ಗೆ 9.30ಕ್ಕೆ ಅಘೋರೇಶ್ವರ ದೇಗುಲದ ಸಭಾಂಗಣದಲ್ಲಿ ನಡೆಯಲಿದೆ.ಈ ಪ್ರಯುಕ್ತ ಸಾಹಿತಿ,ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರಿಗೆ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.

ಈ ಪ್ರಯುಕ್ತ ಪೂರ್ವಾಹ್ನ ವಾಹನ ಜಾಥಾ,ಧ್ವಜಾರೋಹಣ, ಸಭಾಕಾರ್ಯಕ್ರಮದಲ್ಲಿ ಹಿರಿಯ ಪಾಕತಜ್ಞ ಸುಬ್ರಹ್ಮಣ್ಯ ಕಾರಂತ,ಹಿರಿಯ ಕೃಷಿಕ ಸೀತಾರಾಮ ಭಟ್ ಹಂದಟ್ಟು, ಕರುನಾಡ ಬುಕ್ ಆಫ್ ರೇಕಾಡ್೯ ಖ್ಯಾತಿಯ ದರ್ಶನ್ ಜಿ.ಎನ್, ರಾಷ್ಟ್ರಮಟ್ಟದ ಕುಸ್ತಿಪಟು ಸೃಷ್ಠಿ ಆರ್ ಕೋಟ ಇವರಿಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ನಿತ್ಯಾನಂದ ನಾಯರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *