ಗೋವಾ. ನ.23 :- ಪ್ರಸಾದ್ ನೇತ್ರಾಲಯದ ವತಿಯಿಂದ ಕಳೆದ ತಿಂಗಳು ಗೋವಾದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಆಯ್ಕೆಗೊಂಡಿದ್ದ ಫಲಾನುಭವಿಗಳಿಗೆ ಗೋವಾದ ಶ್ರೀ ಶ್ರೀಪಾದ ಎಸ್ಸೋ ನಾಯಕ್ (ಭಾರತ ಸರಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವರು) ಇವರ ನಿವಾಸ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಕವನ್ನು ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆ ಯ ಮೆಡಿಕಲ್ ಡೈರೆಕ್ಟರ್ ಡಾ. ಕೃಷ್ಣ ಪ್ರಸಾದ್ ಕೂಡ್ಲು ಗೋವಾದ ವಿಧಾನ ಸಭೆಯ ಶಾಸಕರಾದ ಶ್ರೀ ಸಿದ್ದೇಶ್ , ಹಾಗೂ ಒನ್ಸೈಟ್ ಎಸ್ಸಿಲಾರ್ ಲಕ್ಸೊಟ್ಟಿಕಾ ಫೌಂಡೇಶನ್ನ ಮುಖ್ಯ ವ್ಯವಸ್ಥಾಪಕ ಶ್ರೀ ಧರ್ಮ ಪ್ರಸಾದ್ ರೈ ರವರು ವಿತರಿಸಿದರು. ಸುಮಾರು 260 ಪಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.












Leave a Reply