ಉಡುಪಿ ನವೆಂಬರ್ 03 ಪ್ರಸ್ತುತ ಕಾಲಘಟ್ಟದಲ್ಲಿ ಡಿಜಿಟಲ್ ಸಾಧನಗಳ ಬಳಕೆ ಅನಿವಾರ್ಯ ವಾಗಿದೆ. ಹಾಗಾಗಿ ಕಾನೂನು ಕ್ಷೇತ್ರದಲ್ಲಿಯೂ ಕೃತಕ ಬುದ್ದಿಮತ್ತೆ ಹಾಗೂ ಅಧುನಿಕ ತಂತ್ರಜ್ಞಾನಗಳ ಪ್ರಭಾವ ಹೆಚ್ಚಾಗಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಪೂರಕವಾದ ಡಿಜಿಟಲ್ ತಂತ್ರಜ್ಞಾನಗಳನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು ಹಾಗೂ ಇವುಗಳ ಬಳಕೆಯಿಂದ ಗಮನ ಬೇರೆಡೆಗೆ ಹರಿಯದಂತೆ ಹಾಗೂ ಅವುಗಳ ಮೇಲೆ ಅತಿಯಾಗಿ ಅವಲಂಬಿತರಾಗದಂತೆ ಎಚ್ಚರಿಕೆ ವಹಿಸಬೇಕೆಂದು ಉಡುಪಿಯ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶ್ರೀ ರಮೇಶ್ ಎಂ. ಹೇಳಿದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಜ್ರಮಹೋತ್ಸವದ ಉಧ್ಗಾಟನಾ ಸಮಾರಂಭವನ್ನು ಶ್ರೀಯುತರು ಉಧ್ಗಾಟಿಸಿ ಮಾತನಾಡುತ್ತಾ ಯುವಜನರು ತಮ್ಮ ಆಂತರಿಕ ಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡು ಶಿಸ್ತು ಮತ್ತು ನ್ಯೆತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಸೇವೆಗೆ ತಮ್ಮನ್ನು ಸಮರ್ಪಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಖಾ ಕೆ ರವರು ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಸುದೀರ್ಘ ಹಾಗೂ ಹೆಮ್ಮೆಯ ಇತಿಹಾಸವನ್ನು ಸ್ಮರಿಸಿ ಈ ಸಂಸ್ಥೆಯ ಶ್ರೀಮಂತ ಪರಂಪರೆಯಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಹಾಗೂ ವರ್ಷವಿಡಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.
ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸರಾದ ಪ್ರೊ ರೋಹಿತ್ ಎಸ್. ಅಮೀನ್ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಡಾ.ಪ್ರೀತಿ ಹರೀಶ್ ರಾಜ್ ವಿವಿಧ ಕ್ಲಬ್ ಗಳ ಬಗ್ಗೆ ಮಾಹಿತಿ ನೀಡಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಜಯಮೋಲ್ ಪಿ.ಎಸ್ ವಜ್ರಮಹೋತ್ಸವದ ಕಾರ್ಯಕ್ರಮದ ವಾರ್ಷಿಕ ಚಟುವಟಿಕೆಗಳ ರೂಪುರೇಷೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವೈಭವಿ ಪ್ರಾರ್ಥನೆ ಸಲ್ಲಿಸಿದರು, ಹರ್ಷಿತ ಸ್ವಾಗತಿಸಿದರು ಮಾರ್ಕಸ್ ಅತಿಥಿಗಳನ್ನು ಪರಿಚಯಿಸಿದರು, ದೀಪಿಕಾ ಸಾಗರ್ ವಂದನಾರ್ಪಣೆ ಸಲ್ಲಿಸಿದರು, ಸಂಜನಾ ನಿರೂಪಿಸಿದರು












Leave a Reply