ಪಾಂಡೇಶ್ವರ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಹೇಳಿಕೆಕೋಟ: ಶಾರದೋತ್ಸವ ಕಾರ್ಯಕ್ರಮಗಳು ಗ್ರಾಮದ ಒಗ್ಗಟ್ಟಿನ ಪ್ರತೀಕವಾಗಿದೆ ಸಾಂಸ್ಕೃತಿಕ ಸಂಭ್ರಮದ ನಡುವೆ ಸಾಮಾಕಜಿಕ ಬದ್ಧತೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಿದೆ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.
ಮಂಗಳವಾರ ಪಾಂಡೇಶ್ವರ ಶಾಲಾ ಸಭಾಂಗಣದಲ್ಲಿ ೩೩ನೇ ವರ್ಷದ ಪಾಂಡೇಶ್ವರ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಧಾರ್ಮಿಕತೆಯ ಮೂಲಕ ಸಮಾಜ ಒಳಿತು ಕಾಣಲಿ ಎಂದು ಹಾರೈಸಿದರು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ಗಂಗಾಧರ್, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಮಿತಿಯ ಹಿರಿಯರಾದ ಕೆ.ವಿ ರಮೇಶ್ ರಾವ್, ಗಂಗಾಧರ ಆಚಾರ್, ನಾರಾಯಣ ಆಚಾರ್, ದೇವದಾಸ್ ಸಾಲಿಯಾನ್, ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ, ಉಷಾ ಗಣೇಶ್, ಜ್ಯೋತಿ, ಆಶಾ, ರವಿ.ಪಿ.ಜಿ, ಮೋಹನ್ ಪಾಂಡೇಶ್ವರ, ರವಿಕಿರಣ್, ಬ್ರಿಜೇಶ್, ವಿಘ್ನೇಶ್ವರ ಆಚಾರ್, ವಿಜೇತ ಆಚಾರ್, ವಿಜಯ ಆಚಾರ್, ಪ್ರಮೋದ್ ಪೂಜಾರಿ, ರಘುರಾಮ ಪೂಜಾರಿ, ಅಭಿಜಿತ್ ಪಾಂಡೇಶ್ವರ, ವೆಂಕಟೇಶ ಪೂಜಾರಿ, ರವಿ ಶ್ರೀಯಾನ್, ಗಣೇಶ್ ಆಚಾರ್ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಚಂದ್ರಶೇಖರ್ ಮಯ್ಯ ನಿರೂಪಿಸಿದರು. ಪಾಂಡೇಶ್ವರ ಶಾಲಾ ಸಭಾಂಗಣದಲ್ಲಿ ೩೩ನೇ ವರ್ಷದ ಪಾಂಡೇಶ್ವರ ಶಾರದೋತ್ಸವ ಆಮಂತ್ರಣ ಪತ್ರಿಕೆಯನ್ನು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು. ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ಗಂಗಾಧರ್, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಮಿತಿಯ ಹಿರಿಯರಾದ ಕೆ.ವಿ ರಮೇಶ್ ರಾವ್ ಇದ್ದರು.












Leave a Reply