ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಚೆ ಇಲಾಖೆಯಿಂದ ಗಣಪ ಪೂಜಾರಿ ಎಂಟಿಎಸ್ ಬಡ್ತಿ, ಬಿಳ್ಕೋಡುಗೆ ಸನ್ಮಾನ

ಕೋಟ: ಇಲ್ಲಿನ ಕೋಟದ ಅಂಚೆ ಕಛೇರಿಯಲ್ಲಿ ಸುಮಾರು 34 ವರ್ಷಗಳ ಕಾಲ ಮಣೂರು ಶಾಖಾ ಅಂಚೆ ಕಚೇರಿಯಲ್ಲಿ(ಉಪ ಅಂಚೆ ಕಚೇರಿ ಕೋಟ)ಅಂಚೇ ಸೇವಕರಾಗಿ ಸೇವೆ ಸಲ್ಲಿಸಿದ ಮಣೂರು ಪಡುಕರೆ ಗಣಪ ಪೂಜಾರಿ ಇದೀಗ ಕುಂದಾಪುರದ ಮುಖ್ಯ ಅಂಚೆ ಕಚೆರಿಯಲ್ಲಿ ಎಂಟಿಎಸ್ ಆಗಿ ಬಡ್ತಿ ಹೊಂದಿದ್ದು ಈ ಹಿನ್ನಲೆಯಲ್ಲಿ ಅವರನ್ನು ಕೋಟ ಅಂಚೆ ಪರಿವಾರದ ವತಿಯಿಂತ ಪ್ರೀತಿಯಿಂದ ಬಿಳ್ಕೋಡುಗೆ ನೀಡಿ ಗೌರವಿಸಲಾಯಿತು.

ಈ ವೇಳೆ ಕೋಟ ಅಂಚೆ ಕಚೇರಿಯ ಉಪ ಅಂಚೆ ಪಾಲಕರಾದ ಸೌಮ್ಯಾಶ್ರೀ ಮತ್ತು ಅಂಚೆ ಸಹಾಯಕರಾದ ರವಿಕಲಾ ಆಚಾರ ಮತ್ತು ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *