ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ಜಿಲ್ಲಾ ಆರ್‌ಟಿಓ ಮತ್ತು ಅವರ ಸಹಾಯಕರವರ ಮೇಲೆ ದಾಖಲಾದ ಲೋಕಾಯುಕ್ತ ಪ್ರಕರಣ ಖುಲಾಸೆ ಆರೋಪಿಗಳು ದೋಷ ಮುಕ್ತಿ

ಉಡುಪಿ ಜಿಲ್ಲೆ ಮುಖ್ಯ RTO (ಪ್ರಾದೇಶಿಕ ಸಾರಿಗೆ ಅಧಿಕಾರಿ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ವರ್ಣೆಕರ್ ರವರು ಮಾನ್ಯ ವಿಷ್ನೆಶ್ ಸತೀಶ್ ಕುಮಾರ್ ಎಂಬವರ Volkswagen Vento Car ಬೆಂಗಳೂರಿನಲ್ಲಿ ನಡೆದ ಏರ್ ಶೋ ಸಮಯದಲ್ಲಿ ಅಗ್ನಿ ಅವಘಡಗೊಂಡು ಪೂರ್ತಿಯಾಗಿ ಸುಟ್ಟು ಹೋಗಿರುತ್ತದೆ. ಆ ಬಗ್ಗೆ ಅವರಿಗೆ ಸಂಪೂರ್ಣ ನಷ್ಟವಾಗಿದ್ದು, ಅವರು ಸದ್ರಿ ವಾಹನವನ್ನು ನೋಂದಣಿಗೊಳಿಸುವ ಸಮಯದಲ್ಲಿ ಸರಕಾರಕ್ಕೆ ಕಟ್ಟಿದ ನೋಂದಣಿ ಶುಲ್ಕ 65,000/- ವನ್ನು ವಾಪಾಸು ಅವರಿಗೆ ನೀಡುವಂತೆ ಆದೇಶ ಇರುತ್ತದೆ.

ಆ ಬಗ್ಗೆ ಹಣವನ್ನು ವಾಪಾಸು ನೀಡುವಂತೆ ಉಡುಪಿ ಖಖಿಔ ರವರನ್ನು ಸಂಪರ್ಕಿಸಿದಾಗ ಬೆಂಕಿಯಿoದ ಹಾನಿಗೊಳಗಾದ ವಾಹನದ ವಿಮೆ (ರೋಡ್ ಟ್ಯಾಕ್ಸ್) ಬಿಡುಗಡೆಗೊಳಿಸಲು ತನಗೆ ಹಣವನ್ನು ನೀಡಬೇಕಾಗಿ ವಾಹನದ ಮಾಲೀಕರನ್ನು RTOರವರು ಪೀಡಿಸಿದ್ದಾರೆನ್ನುವ ಹಿನ್ನೆಲೆಯಲ್ಲಿ ಮಾರ್ಚ್ 2019 ರ ಸಾಲಿನಲ್ಲಿ ಫಿರ್ಯಾದಿದಾರರು ಆರೋಪಿತರ ವಿರುದ್ಧ ಉಡುಪಿ ಎಸಿಬಿ ಪೊಲೀಸರ ಮುಂದೆ ಲಂಚದ ಹಣದ ಬೇಡಿಕೆ ಇಟ್ಟಿರುತ್ತಾರೆಂದು, ಲೋಕಾಯುಕ್ತ ಕಾನೂನಡಿರಲ್ಲಿ ದೂರು ದಾಖಲು ಮಾಡಿರುತ್ತಾರೆ.

ಸದ್ರಿ ಅವರ ದೂರಿನ ಆಧಾರದ ಮೇಲೆ ಎಸಿಬಿ ಪೋಲೀಸರು ತಂಡ ಮಾನ್ಯ RTO ರಮೇಶ್ ವರ್ಣೆಕರ್‌ರವರು 4,000/- ಹಣವನ್ನು ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಟ್ರಾಫ್ ಮಾಡಿದ್ದು, ನಂತರ ಲಂಚದ ಹಣದೊಂದಿಗೆ ಅವರನ್ನು ಬಂದಿಸಿದ್ದು ತದನಂತರ ನ್ಯಾಯಾಲಯ ಜಾಮೀನು ನೀಡಿರುತ್ತದೆ. ನಂತರ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ಎಸಿಬಿ ರದ್ದು ಗೊಂಡಿದ್ದು, ಪ್ರಕರಣದ ವಿಚಾರಣೆಯನ್ನು ಉಡುಪಿ ಲೋಕಾಯುಕ್ತ ಠಾಣೆಗೆ ಹಸ್ತಾಂತರ ಗೊಂಡಿರುತ್ತದೆ.

ಪ್ರಕರಣದ ತನಿಖೆಯಲ್ಲಿ ಹಣವನ್ನು ಪಡೆದ RTO ಅಧಿಕಾರಿ ಅದನ್ನು ತನ್ನ ಸಹಾಯಕನಿಗೆ ನೀಡಿರುದಾಗಿ ತಿಳಿಸಿದ ಮೇರೆಗೆ ಆತನ ಸಹಾಯಕ ಮುನಾಫ್ ಇವರ ಮೇಲೂ 2ನೇ ಆರೋಪಿಯಾಗಿ ಪ್ರಕರಣ ದಾಖಲಾಗಿರುತ್ತದೆ. ಅಂತಿಮ ವರದಿಯನ್ನು ಪುರಸ್ಕರಿಸಿದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಎಲ್ಲಾ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿರುತ್ತದೆ.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಮಾನ್ಯ ಉಡುಪಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಧೀಶರಾದ ಕಿರಣ್ ಎಸ್ ಗಂಗಣನವರ್ ಅಭಿಯೋಜನೆಯು ಆರೋಪಿತರ ಮೇಲಿನ ಆರೋಪನ್ನು ಸಂಶಯತೀತವಾಗಿ ಸಾಭಿತು ಪಡಿಸಲು ವಿಫಲವಾಗಿದೆ ಎಂದು ಪರಿಗಣಿಸಿ ಉಭಯ ಆರೋಪಿತರನ್ನು ಪ್ರಕರಣದಿಂದ ದೋಷ ಮುಕ್ತಿ ಗೊಳಿಸಿದೆ. ಆರೋಪಿತರ ಪರವಾಗಿ ಉಡುಪಿಯ ನ್ಯಾಯಾವಾದಿಗಳಾದ ಚೇರ್ಕಾಡಿ ಅಖಿಲ್ ಬಿ ಹೆಗ್ಡೆ ಮತ್ತು ಸಂಜೀವ ಎ ವಾದಿಸಿದ್ದರು.

Leave a Reply

Your email address will not be published. Required fields are marked *