ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಪಂಚವರ್ಣ ಸಂಘಟನೆ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನ ಸ್ವಚ್ಛತೆಯ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕು- ರಾಜೇಂದ್ರ ಸುವರ್ಣ

ಕೋಟ: ಸ್ವಚ್ಛತೆಯ ಬಗ್ಗೆ ಜಿಲ್ಲಾಡಳಿತವೇ ಕಠಿಣ ಕ್ರಮಗಳನ್ನು ಕೈಗೊಂಡರೆ ಎಸೆಯುವ ಹಾಗೂ ಮಲಿನಗೊಳಿಸುವ ಕೈಗೆ ಮುಕ್ತಿಗಾಣಿಸಬಹುದು ಎಂದು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು.

ಭಾನುವಾರ ಕೋಟದಿಂದ ಕೋಡಿಯವರೆಗೆ ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ರೋಟರಿ ಸಮುದಾಯದಳ ಮೂಡುಗಿಳಿಯಾರು, ಗೀತಾನಂದ ಫೌಂಡೇಶನ್ ಮಣೂರು ಸೇರಿದಂತೆ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೋಟತಟ್ಟು,ಕೋಡಿ ಗ್ರಾಮಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಂಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನದಲ್ಲಿ ಮಾತನಾಡಿ ಪರಿಸರಕ್ಕೆ ಹಾನಿಕರ ಆಗುವ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ,ಸ್ಥಳೀಯ ಮನೆಗಳ ಹಾಗೂ ಅಲ್ಲಿನ ಮಕ್ಕಳಿಗೆ ಕಸ ಎಸೆಯದಂತೆ ಗ್ರಾಮ ಆಡಳಿತ ಖಡಕ್ ಸೂಚನೆ ನೀಡಬೇಕು, ಪರಿಸರ ಮಲಿನಗೊಂಡರೆ ಮನುಕುಲಕ್ಕೆ ಸಂಕಷ್ಟ ತಪ್ಪಿದಲ್ಲ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ ರಾಮದಾಸ್ ಅಭಿಯಾನಕ್ಕೆ ಚಾಲನೆ ನೀಡಿ ಪರಿಸರ ಸ್ಚಚ್ಛವಾಗಿರಿಸಿಕೊಳ್ಳವ ಕುರಿತು ಮಾಹಿತಿ ನೀಡಿದರು.ತಾ.ಪಂ ಸಹಾಯಕ ಕಾರ್ಯನಿರ್ವಾಣಾಕಾರಿ ಮಹೇಶ್ ಅಭಿಯಾನದ ಪ್ರತಿಜ್ಞಾವಿಧಿ ಭೋದಿಸಿದರು. ಕೋಟತಟ್ಟು,ಕೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನ ಜಿಲ್ಲಾಡಳಿತದ ಕ್ರಮ ಹಾಗೂ ಜಿಲ್ಲಾಧ್ಯಂತ ಸ್ವಚ್ಛ ಪರಿಸರಕ್ಕೆ ಜಿಲ್ಲಾಡಳಿತ ಹಾಗೂ ಗ್ರಾಮ ಆಡಳಿತ ಕಠಿಣ ನಿಲುವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕೋಟತಟ್ಟು ತಡಕ್ಕಪ್ಪಳಿಸಿದ ಮೀನುಗಾರಿಕಾ ಬೋಟ್ ಅವಶೇಷ , ಮಲಿನ.ಪೂರ್ವಾಹ್ನ ಸ್ವಚ್ಛತೆಗಿಳಿದ ಸಂಘಸಂಸ್ಥೆಗಳಿಗೆ ಕೋಟತಟ್ಟು ಪಡುಕರೆಯಲ್ಲಿ ಇತ್ತೀಚಿಗೆ ದಡಕ್ಕೆ ಸೇರಿದ ಮೀನುಗಾರಿಕಾ ಬೋಟ್ ಅವಶೇಷದ ವಸ್ತುಗಳು ತಲೆನೋವಾಗಿ ಪರಿಣಮಿಸಿತು. ಸುಮಾರು ಒಂದು ಕೀ.ಮೀ ವ್ಯಾಪ್ತಿಯಲ್ಲಿ ಮಲಿನಗೊಂಡ ಬೋಟ್ ಬೆಂಡ್ ಆವರಿಸಿಕೊಂಡಿದ್ದು ಅದನ್ನು ಪೂರ್ಣಪ್ರಮಾಣದಲ್ಲಿ ಸ್ವಚ್ಛಗೊಳಿಸಿದ ಸ್ವಯಂಸೇವಕರು ಸುಮಾರು 100ಕ್ಕೂ ಅಧಿಕ ಚೀಲ ಬೋಟ್ ಅವಶೇಷದ ತ್ಯಾಜ್ಯಗಳನ್ನು ಸ್ಥಳಾಂತರಿಸಿತು.

ಅಲ್ಲದೆ ಇದೇ ವೇಳೆ ಸ್ಥಳದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೋಟ್ ಮಾಲಿಕರಿಗೆ ಮಲಿನಗೊಳಿಸಿದ ಬಗ್ಗೆ ಮಾಹಿತಿ ಪಡೆಯುವ ಮಾಹಿತಿ ಸಭೆಯಲ್ಲಿ ನೀಡಿದರು. ಅಭಿಯಾನದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ‌.ತಿಮ್ಮ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ರೋಟರಿ ಸಮುದಾಯದ ದಳದ ಗೋಪಾಲ್ ಗಿಳಿಯಾರು, ದಯಾನಂದ ಪೂಜಾರಿ, ಕೋಟತಟ್ಟು ಎಸ್ ಎಲ್ ಆರ್ ಎಂ ಘಟಕದ ರಂಜಿನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿ ವಂದಿಸಿದರು. ರವೀಂದ್ರ ಕೋಟ ಅಭಿಯಾನವನ್ನು ಸಂಯೋಜಿಸಿದರು.ಕೋಟತಟ್ಟು ಗ್ರಾಮಪಂಚಾಯತ್, ಕೋಡಿ ಗ್ರಾಮಪಂಚಾಯತ್,ಸಾಲಿಗ್ರಾಮ ಪಟ್ಟಣಪಂಚಾಯತ್ ಸಹಕಾರ ನೀಡಿತು. ಕೋಟದಿಂದ ಕೋಡಿಯವರೆಗೆ ವಿವಿಧ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಬೀಚ್ ಕ್ಲಿನಿಂಗ್ ಅಭಿಯಾನಕ್ಕೆ ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ ರಾಮದಾಸ್ ಅಭಿಯಾನಕ್ಕೆ ಚಾಲನೆ ನೀಡಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ‌.ತಿಮ್ಮ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸಹಾಯಕ ಕಾರ್ಯನಿರ್ವಾಣಾಕಾರಿ ಮಹೇಶ್ ಇದ್ದರು.

Leave a Reply

Your email address will not be published. Required fields are marked *