ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ಹೊಸಬೇಂಗ್ರೆ ಲೈಟ್ ಹೌದ್ ಕ್ಲಿನಿಂಗ್ ಅಭಿಯಾನ

ಕೋಟ: ಕೋಡಿ ಗ್ರಾಮಪಂಚಾಯತ್, ಸಂಜೀವಿನಿ ಒಕ್ಕೂಟ ಕೋಡಿ,ಸ್ತ್ರೀ ಶಕ್ತಿ ಸಂಘ ಕೋಡಿ ಹೊಸಬೇಂಗ್ರೆ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಸಂಘಟನೆ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಬೀಚ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕೋಡಿ ಗ್ರಾ.ಪಂ ಹೊಸಬೇಂಗ್ರೆ ಲೈಟ್ ಹೌಸ್ ಬೀಚ್ ನಲ್ಲಿ ಆಯೋಜಿಸಲಾಯಿತು. ಕೋಡಿ ಪಂಚಾಯತ್ ಪಿಡಿಒ ರವೀಂದ್ರ ರಾವ್ ಅಭಿಯಾನದ ಮಹತ್ವ ತಿಳಿಸಿದರು. ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಜಿ ರಾಮದಾಸ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅದರ ಮಹತ್ವ ಹಾಗೂ ಸಂದೇಶ ತಿಳಿಸಿದರು.

ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮಹೇಶ್ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಕೋಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಮೆಂಡನ್, ಗೀತಾ ಖಾರ್ವಿ ಸದಸ್ಯರಾದ ಕೃಷ್ಣ ಪೂಜಾರಿ.ಪಿ, ಸಂಜೀವಿನಿ ಒಕ್ಕೂಟ ಮಾಜಿ ಅಧ್ಯಕ್ಷೆ ದೀಪಾ ಖಾರ್ವಿ, ಅಧ್ಯಕ್ಷರೆ ಶಾಂತ ಮೆಂಡನ್, ಎಂಬಿಕೆ ಅನಿತಾ, ಸ್ತ್ರಿಶಕ್ತಿ ಸಂಘದ ಸದಸ್ಯರಾದ ಸುಜಾತಾ ಖಾರ್ವಿ, ಮಾಲತಿ ಕೆ, ಪಂಚಾಯತ್ ಎಸ್ ಎಲ್ ಆರ್ ಎಂ‌ ಘಟಕ ಸಿಬ್ಬಂದಿಗಳಾದ ಕಿರಣ್, ಗ್ರಾ. ಪಂ. ಸಿಬ್ಬಂದಿ ಜಯಕುಮಾರ್ ಉಪಸ್ಥಿತರಿದ್ದರು.

ಗ್ರಾಮಪಂಚಾಯತ್ ಕಾರ್ಯದರ್ಶಿ ಉಮೇಶ್ ಸ್ವಾಗತಿಸಿ ನಿರೂಪಿದರು. ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ವಂದಿಸಿದರು. ಕೋಡಿ ಗ್ರಾಮಪಂಚಾಯತ್, ಸಂಜೀವಿನಿ ಒಕ್ಕೂಟ ಕೋಡಿ,ಸ್ತ್ರೀ ಶಕ್ತಿ ಸಂಘ ಕೋಡಿ ಹೊಸಬೇಂಗ್ರೆ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಕೋಟದ ಪಂಚವರ್ಣ ಸಂಘಟನೆ ಮಾರ್ಗದರ್ಶನದಲ್ಲಿಅಂತಾರಾಷ್ಟ್ರೀಯ ಬೀಚ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಮಹೇಶ್ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

Leave a Reply

Your email address will not be published. Required fields are marked *