ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಶ್ರೀ ಗುರುನರಸಿಂಹ ಸಾನಿಧ್ಯದಲ್ಲಿ ಕೊನೆಯ ಶ್ರಾವಣ ಶನಿವಾರ ಸಂಭ್ರಮ, ವಿಜೃಂಭಣೆಯಿoದ ಜರಗಿದ ವಿಟ್ಲಪಿಂಡಿ ಉತ್ಸವ

ಕೋಟ:ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದಲ್ಲಿ ಶ್ರಾವಣ ಮಾಸದ 4ನೇ ಹಾಗೂ ಕೊನೆಯ ಶನಿವಾರದ ಸಂಭ್ರಮ ಅಂಗವಾಗಿ ಶ್ರೀದೇವಳಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದಂತಹ ದಾನಿಗಳಾದ ರತ್ನಮಾಲ ಕಾರಂತರು ಬೆಂಗಳೂರು ,ಭಾಸ್ಕರ ಕಾರಂತರು ಉಡುಪಿ ,ಪ್ರೊಫೆಸರ್ ರಾಘವೇಂದ್ರ ಭಟ್ ಸಾಲಿಗ್ರಾಮ,ವಾಸಂತಿ ನರಸಿಂಹ ಭಟ್ ಸಾಲಿಗ್ರಾಮ, ಡಾ. ಜನಾರ್ದನ ಐತಾಳ್ ಕೋಟ ಇವರೆಲ್ಲರನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯ, ಕೋಶಾಧಿಕಾರಿಗಳಾದ ಲಕ್ಷ್ಮಿನಾರಾಯಣ ಹೊಳ್ಳ ಸದಸ್ಯರಾದ ಕೆ.ತಾರಾನಾಥ ಹೊಳ್ಳರು, ಚಂದ್ರಶೇಖರ ನಾವಡ ಮತ್ತು ಪ್ರಸನ್ನ ತುಂಗ ಉಪಸ್ಥಿತರಿದ್ದರು. ಬೆಳಗ್ಗಿನಿಂದ ಸಂಜೆಯವರೆಗೆ ಸುಮಾರು 35 ಸಾವಿರಕ್ಕೂ ಮಿಕ್ಕಿ ಜನ ಭಕ್ತಾದಿಗಳು ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು.

ಮಧ್ಯಾಹ್ನ ಸುಮಾರು ಎಂಟು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಬೋಜನ ಪ್ರಸಾದವನ್ನು ಸ್ವೀಕರಿಸಿದರು. ಸಾಂಸಕೃತಿಕ ಕಾರ್ಯಕ್ರಮಬೆಳಿಗ್ಗೆ ವಿದುಷಿ ಡಾ . ರಾಗಿಣಿ ಸನತ್ ಮತ್ತು ಕುಮಾರಿ ರಚನಾ ಶರ್ಮ ಬೆಂಗಳೂರು ಇವರಿಂದ ಭಕ್ತಿ ಸಂಗೀತ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘ ಸಂಘ ಮಂಗಳೂರು ಇವರಿಂದ ಭಕ್ತಿ ಸಂಗೀತ ಲಹರಿ, ಓಂಕಾರ ನಾಟ್ಯ ಬಳಗ ಕುಂದಾಪುರ ಇವರಿಂದ ನೃತ್ಯ ವೈಭವ ನಂತರ ಸಾಲಿಗ್ರಾಮ ಮೇಳದದವರಿಂದ ಯಕ್ಷಗಾನ ಕೃಷ್ಣಾರ್ಜುನ ಕಾರ್ಯಕ್ರಮ ನಡೆಯಿತು.

ವಿಜೃಂಭಣೆಯಿoದ ಜರಗಿದ ವಿಟ್ಲಪಿಂಡಿ ಉತ್ಸವ ಶ್ರೀ ದೇಗುಲದಲ್ಲಿ ವಿಟ್ಲಪಿಂಡಿ ಉತ್ಸವವು ಸಂಜೆ 4:30ರಿಂದ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಎಡಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಗ್ರಾಮಸ್ಥರಿಂದ ಪೂಜೆಗೊಂಡು ನಂತರ ಆಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆಗಳನ್ನು ಪೂರೈಸಿ ಶ್ರೀ ಗುರು ನರಸಿಂಹ ದೇವಳಕ್ಕೆ ಮೆರವಣಿಗೆಯು ಮರಳಿತು.

ಭಕ್ತ ಸಾಗರವು ಮೊಸರು ಕುಡಿಕೆ ಉತ್ಸವದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡು ಧನ್ಯತೆಯನ್ನು ಪಡೆದರು .ಶ್ರೀದೇವಳದ ಅರ್ಚಕರಾದ ವೇ .ಮೂ. ಜನಾರ್ಧನ ಅಡಿಗ ಪೂಜೆಯನ್ನು ನೆರವೇರಿಸಿದರು. ಪಲ್ಲಕ್ಕಿ ಉತ್ಸವವನ್ನು ತಂತ್ರಿವರ್ಯರಾದ ವೇ .ಮೂ. ಕೃಷ್ಣ ಸೋಮಯಾಜಿ ನೆರವೇರಿಸಿಕೊಟ್ಟರು.

ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು, ಕಾರ್ಯದರ್ಶಿ ವೇ . ಮೂ. ಪರಶುರಾಮ ಭಟ್ಟರು ಕೋಶಾಧಿಕಾರಿ ಲಕ್ಷ್ಮಿನಾರಾಯಣ ಹೊಳ್ಳ ಸದಸ್ಯರಾದ ಕೆ.ತಾರಾನಾಥ ಹೊಳ್ಳ, ಚಂದ್ರಶೇಖರ ನಾವಡ ಮತ್ತು ಪ್ರಸನ್ನ ತುಂಗ, ಕೂಟ ಮಹಾಜಗತ್ತು ಸಾಲಿಗ್ರಾಮ ವಿಪ್ರ ಮಹಿಳಾ ಬಳಗ ಮತ್ತು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ಸಾನಿಧ್ಯದಲ್ಲಿ ಕೊನೆಯ ಶ್ರಾವಣ ಶನಿವಾರ ಸಂಭ್ರಮದಲ್ಲಿ ದಾನಿಗಳಾದ ರತ್ನಮಾಲ ಕಾರಂತರು ಬೆಂಗಳೂರು ,ಭಾಸ್ಕರ ಕಾರಂತರು ಉಡುಪಿ , ಪ್ರೊಫೆಸರ್ ರಾಘವೇಂದ್ರ ಭಟ್ ಸಾಲಿಗ್ರಾಮ, ವಾಸಂತಿ ನರಸಿಂಹ ಭಟ್ ಸಾಲಿಗ್ರಾಮ, ಡಾ. ಜನಾರ್ದನ ಐತಾಳ್ ಕೋಟ ಇವರೆಲ್ಲರನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *