ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನೇಪಾಳ, ವಯನಾಡಿನಂತೆ ನಮ್ಮಲ್ಲೂ ಪ್ರಾಕೃತಿಕ ವಿಕೋಪ ತಲೆದೂರಲಿದೆ ಕಾಲ ಮಿಂಚಿಲ್ಲ ಪ್ರಕೃತಿ ಉಳಿಸುವ ಕಾಯಕದಲ್ಲಿ ಕೈಜೋಡಿಸಿ- ನಟ ಪುನಿತ್ ಶೆಟ್ಟಿ

ಕೋಟ: ವಿಶ್ವದ ನಾನಾ ಕಡೆಗಳಲ್ಲಿ ಪ್ರಾಕೃತಿಕ ವಿಕೋಪಗಳು ನಡೆಯುತ್ತಿದ್ದು ಅಂತಹ ಸನ್ನಿವೇಶ ಕೆಲ ವರ್ಷಗಳಲ್ಲಿನಮ್ಮಲ್ಲು ಎದುರಾಗಬಹುದು ಈ ಬಗ್ಗೆ ಈಗಲೇ ಜಾಗೃತಿರಾಗಿ ಎಂದು ಚಿತ್ರನಟ ಪುನಿತ್ ಶೆಟ್ಟಿ ಹೇಳಿದರು. ಭಾನುವಾರ ಕೋಟದ ಕಾಸನಗುಂದು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಹಾಗೂ ಸ್ಥಳೀಯ ಸಂಘ ಸoಸ್ಥೆಗಳ ಸಹಯೋಗದೊಂದಿಗೆ 316ನೇ ಭಾನುವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಕೃತಿಯ ವಿರುದ್ಧ ಮನುಕುಲ ಆಧುನಿಕತೆಯ ನೆಪದಲ್ಲಿ ಹಾಳು ಕೆಡವುತ್ತಿದ್ದೇವೆ.

ಇದರ ಪರಿಣಾಮ ಸಾಕಷ್ಟು ತಾಪಮಾನ, ವಾತಾವರಣ ವ್ಯತ್ಯಯ ಉಂಟಾಗುತ್ತಿದೆ ಈ ರೀತಿಯ ಸನ್ನಿವೇಶಗಳು ಮನುಕುಲದ ನಿದ್ದೆಗೆಡಿಸಿದ್ದು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕ ಕ್ರಮಗಳ ಬಗ್ಗೆ ಮಕ್ಕಳಿಗೆ ಪರಿಸರದ ಜನರಿಗೆ ಕಿವಿಮಾತು ಹೇಳಿದರಲ್ಲದೆ ಪಂಚವರ್ಣ ಸಂಘಟನೆ ಮತ್ಕಾರ್ಯ ಸೇವೆ ಈ ಸಮಾಜಕ್ಕೆ ಧಾರೆ ಎರೆಯುತ್ತಿದೆ ಎಂದು ಉಪಸ್ಥಿತರಿದ್ದ ಮಕ್ಕಳಿಗೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿ ಭೋಧಿಸಿದರು.

ಇದೇ ವೇಳೆ ಕೋಟ ಪಂಚಾಯತ್ ಮಾಜಿ ಸದಸ್ಯ,ಹಿರಿಯ ಕೃಷಿಕ ಸುಧಾಕರ್ ಶೆಟ್ಟಿ ಮಕ್ಕಳಿಗೆ ಗಿಡ ಹಸ್ತಾಂತರಿಸಿ ಪರಿಸರ ಜಾಗೃತಿ ಮೂಡಿಸಿದರು. ಕಾಸನಗುಂದು ಯುವಕ ಮಂಡಲದ ಅಧ್ಯಕ್ಷ ಸತೀಶ್ ಮಡಿವಾಳ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಉಪಸ್ಥಿತರಿದ್ದರು.

ಪ್ರಭಾಕರ್ ಬಿಎಸ್ ಎನ್ ಎಲ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು. ಕೋಟದ ಕಾಸನಗುಂದು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ316ನೇ ಭಾನುವಾರದ ಪರಿಸರಸ್ನೇಹಿ ಹಸಿರು ಹೆಜ್ಜೆ ಕಾರ್ಯಕ್ರಮದಲ್ಲಿ ಚಿತ್ರನಟ ಪುನಿತ್ ಶೆಟ್ಟಿ ಮಾತನಾಡಿದರು.

ಕೋಟ ಪಂಚಾಯತ್ ಮಾಜಿ ಸದಸ್ಯ,ಹಿರಿಯ ಕೃಷಿಕ ಸುಧಾಕರ್ ಶೆಟ್ಟಿ, ಕಾಸನಗುಂದು ಯುವಕ ಮಂಡಲದ ಅಧ್ಯಕ್ಷ ಸತೀಶ್ ಮಡಿವಾಳ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಕೆ.ಮನೋಹರ್ ಪೂಜಾರಿ,ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *