ಕೋಟ: ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ 13ನೇ ವಾರ್ಷಿಕ ಮಹಾಸಭೆಯು ಕೋಡಿ ಕನ್ಯಾಣದ ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು. ಸಂಸ್ಥೆಯ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 100 ಕೋಟಿಗೂ ಅಧಿಕ ವ್ಯವಹಾರ ನಡೆಸಿ ಸುಮಾರು 18 ಲಕ್ಷಕ್ಕೂ ಅಧಿಕ ಲಾಭ ಗಳಿಸಿ ಸದಸ್ಯರಿಗೆ ಶೇಕಡಾ 15 ರಷ್ಟು ಡಿವಿಡೆಂಡ್ ವಿತರಿಸಿರುಹುದಕ್ಕೆ ಹೆಮ್ಮೆ ಪಡುತ್ತಿದ್ದೇವೆ.
ಸದಸ್ಯರ ಸಹಕಾರವನ್ನು ಈ ವೇಳೆ ಸ್ಮರಿಸಿ ಸಂಸ್ಥೆಯ 3 ಶಾಖೆಗಳು ಲಾಭದಿಂದ ಯಶಸ್ವಿಯಾಗಿ ಸಾಗುತಿದ್ದು ಇನ್ನಷ್ಟು ಸೇವೆಗಳನ್ನು ನೀಡುವ ಮಹದಾಸೆ ವ್ಯಕ್ತಪಡಿಸಿದರು.ವಾರ್ಷಿಕ ಮಹಾಸಭೆಯನ್ನುದ್ದೇಶಿಷಿ ಮಾತನಾಡಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಇದರ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ರಾಮಾಂಜನೇಯ ಸೌಹಾರ್ದ ಆರ್ಥಿಕ ವ್ಯವಹಾರದೊಂದಿಗೆ ನೀಡುತ್ತಿರುವ ಸೇವಾ ಚಟುವಟಿಕೆ ಉಡುಪಿ ಜಿಲ್ಲೆಗೆ ಮಾದರಿಯಾಗಿದೆ.
ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಿ ಸದಸ್ಯರಿಗೆ ಮತ್ತು ಸಮಾಜಕ್ಕೆ ಮತ್ತಷ್ಟು ಸೇವೆ ನೀಡಿ ರಾಜ್ಯಕ್ಕೆ ಮಾದರಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಈ ವೇಳೆ ಸಂಸ್ಥೆಯ ಸಿಇಒ ರಾಘವೇಂದ್ರ ಕರ್ಕೇರ ಇವರಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಇವರನ್ನು ಅಭಿನಂದಿಸಲಾಯಿತು. ಕೋಡಿ ಶಾಲೆಯ ನಿವೃತ್ತ ಶಿಕ್ಷಕ ವಿಜಯ್ ಮಾಸ್ತರ್ ಮತ್ತು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕöÈತ ಕೊರಗ ಪೂಜಾರಿ ಯವರನ್ನು ಅಭಿಮಾನದಿಂದ ಸನ್ಮಾನಿಸಲಾಯಿತು.
ವಿಶೇಷ ಪ್ರತಿಭೆ ಸಿ ಎ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಗೊಂಡ ಅನುಷ್ಕಾ ಎ ಕುಂದರ್ ಇವರನ್ನು ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ವಿಭಾಗದಲ್ಲಿ ಶೇಕಡ 80 ಕ್ಕೂ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾರ್ಷಿಕ ಮಹಾಸಭೆಯ ಆಡಳಿತ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕಿ ಸ್ವಾತಿ ವಾಚಿಸಿದರು.
ಲೆಕ್ಕಪರಿಶೋಧನ ವರದಿ ಮತ್ತು ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ವಿವರವಾಗಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕರ್ಕೇರ ಮಂಡಿಸಿದರು. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ಮಹಾಬಲ ಕುಂದರ್ ನಿರ್ದೇಶಕರಾದ ಭಾಸ್ಕರ ಕಾಂಚನ್, ದಯಾನಂದ ಕರ್ಕೇರ, ಲಕ್ಶ್ಮಣ ಖಾರ್ವಿ, ರಾಘವೇಂದ್ರ ಸುವರ್ಣ, ಉದಯ ಕಾಂಚನ್, ಜಯಕುಮಾರ್.ಎ.ಎಸ್, ರೋನಾಲ್ಡ್ ಡಿ ಸೋಜಾ, ಆಶಾ ಉಪಾಧ್ಯ, ಜಯಂತಿ ಎಸ್ ಮೊಗವೀರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಂಜುನಾಥ್ ಕಾರ್ತಟ್ಟು ನಿರ್ವಹಿಸಿದರು. ಶ್ರೀ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ 13ನೇ ವಾರ್ಷಿಕ ಮಹಾಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ವಿಭಾಗದಲ್ಲಿ ಶೇಕಡ 80 ಕ್ಕೂ ಅಧಿಕ ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಂಭು ಪೂಜಾರಿ, ಉಪಾಧ್ಯಕ್ಷರಾದ ಮಹಾಬಲ ಕುಂದರ್ ನಿರ್ದೇಶಕರಾದ ಭಾಸ್ಕರ ಕಾಂಚನ್, ದಯಾನಂದ ಕರ್ಕೇರ, ಲಕ್ಷ್ಮಣ ಖಾರ್ವಿ, ರಾಘವೇಂದ್ರ ಸುವರ್ಣ ಇದ್ದರು.












Leave a Reply