1ರಿಂದ 10ನೇ ತರಗತಿ ಇರುವ ಖಾಸಗಿ ಶಾಲೆಗಳು ಹಾಗೂ 8–10ನೇ ತರಗತಿ ಇರುವ ಪ್ರೌಢಶಾಲೆಗಳಿಗೆ ಗಟ್ಟಿ ತಂಡ ಕಟ್ಟಲು ಹೆಚ್ಚಿನ ಅವಕಾಶ; 1–7ನೇ ತರಗತಿ ಮಾತ್ರ ಇರುವ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಆರಂಭದಿಂದಲೇ ಅನ್ಯಾಯ — ನಿಯಮ ಬದಲಾವಣೆಗೆ SDMC ಸಮನ್ವಯ ಕೇಂದ್ರ ವೇದಿಕೆ ಆಗ್ರಹ*“ನಮ್ಮ ಪ್ರಶ್ನೆ ಖಾಸಗಿ ಶಾಲೆಗಳ ಅಥವಾ ಪ್ರೌಢ ಶಾಲೆಗಳ ವಿರುದ್ಧವಲ್ಲ; ಅವಕಾಶದ ಅಸಮಾನತೆಯ ವಿರುದ್ಧ” — “ಸಣ್ಣ ಮಕ್ಕಳಿಗೆ ಅನ್ಯಾಯವಾಗುತ್ತಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ” ರಾಜ್ಯದಾದ್ಯಂತ ವಲಯ ಮಟ್ಟದ ಶಾಲಾ ಕ್ರೀಡಾಕೂಟಗಳು ಅದ್ದೂರಿಯಾಗಿ ನಡೆಯುತ್ತಿರುವ ಸಂದರ್ಭದಲ್ಲಿ, 14 ವರ್ಷದೊಳಗಿನ ಮಕ್ಕಳ ಗುಂಪು ಕ್ರೀಡೆಗಳ ಆಯ್ಕೆ ಪ್ರಕ್ರಿಯೆ ಹಾಗೂ ಮೈದಾನದೊಳಗಿನ ನಿಯಮಗಳ ಅನುಷ್ಠಾನದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.
ವಿಶೇಷವಾಗಿ 1ರಿಂದ 7ನೇ ತರಗತಿಯವರೆಗೆ ಮಾತ್ರ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಮತ್ತು 8–10ನೇ ತರಗತಿಗಳವರೆಗೆ ಇರುವ ಪ್ರೌಢಶಾಲೆಗಳು ಹಾಗೂ 1ರಿಂದ 10ನೇ ತರಗತಿಯವರೆಗೆ ಇರುವ ಖಾಸಗಿ ಶಾಲೆಗಳ ಮಕ್ಕಳನ್ನು ಒಂದೇ “Under-14” ವಿಭಾಗದಲ್ಲಿ ಸ್ಪರ್ಧೆಗೆ ಇಳಿಸುವ ವ್ಯವಸ್ಥೆ ನಿಜವಾದ ಸಮಾನ ಅವಕಾಶವನ್ನು ಕಲ್ಪಿಸುತ್ತಿದೆಯೇ? ಸಮಸ್ಯೆ ಕೇವಲ ಪಂದ್ಯ ನಡೆಯುವ ಸಂದರ್ಭದಲ್ಲಿ ಉಂಟಾಗುವುದಿಲ್ಲ. ತಂಡ ಆಯ್ಕೆ ಮಾಡುವ ಹಂತದಿಂದಲೇ ಅಸಮಾನತೆ ಆರಂಭವಾಗುತ್ತದೆ.ಒಂದೆಡೆ 1–10ನೇ ತರಗತಿಯ ಖಾಸಗಿ ಶಾಲೆಗಳು ಹಾಗೂ 8–10ನೇ ತರಗತಿಯ ಪ್ರೌಢಶಾಲೆಗಳು; ಮತ್ತೊಂದೆಡೆ 1–7ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳು!ಪ್ರಸ್ತುತ ವ್ಯವಸ್ಥೆಯಲ್ಲಿ 14 ವರ್ಷದೊಳಗಿನ ವಿಭಾಗಕ್ಕೆ ತಂಡ ಕಟ್ಟುವಾಗ 1ರಿಂದ 10ನೇ ತರಗತಿಯವರೆಗೆ ಇರುವ ಖಾಸಗಿ ಶಾಲೆಗಳು ತಮ್ಮ ಶಾಲೆಯಲ್ಲಿ ಲಭ್ಯವಿರುವ ದೊಡ್ಡ ವಿದ್ಯಾರ್ಥಿ ಸಮೂಹದಿಂದ ನಿಯಮಕ್ಕೆ ಒಳಪಡುವ ಮಕ್ಕಳಲ್ಲಿ ಉತ್ತಮ ದೈಹಿಕ ಸಾಮರ್ಥ್ಯ, ಎತ್ತರ, ತೂಕ, ವೇಗ, ಕ್ರೀಡಾ ಕೌಶಲ್ಯ ಮತ್ತು ಅನುಭವ ಹೊಂದಿರುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಗಟ್ಟಿ ತಂಡ ಕಟ್ಟುವ ಹೆಚ್ಚಿನ ಅವಕಾಶವನ್ನು ಹೊಂದಿವೆ.
ಅದೇ ರೀತಿ 8, 9 ಮತ್ತು 10ನೇ ತರಗತಿಗಳಿರುವ ಪ್ರೌಢಶಾಲೆಗಳಿಗೂ 14 ವರ್ಷದೊಳಗಿನ ವಿಭಾಗಕ್ಕೆ ತಮ್ಮಲ್ಲಿರುವ ವಿವಿಧ ತರಗತಿಗಳ ಮಕ್ಕಳಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡು ಬಲಿಷ್ಠ ತಂಡವನ್ನು ರೂಪಿಸುವ ಅವಕಾಶವಿದೆ.ಅವರು ತಮ್ಮಲ್ಲಿರುವ 8,9 ಮತ್ತು 10ನೇ ತರಗತಿಯ ಮಕ್ಕಳಲ್ಲಿ ನಿಯಮಕ್ಕೆ ಒಳಪಡುವವರನ್ನು ಪರಿಶೀಲಿಸಿ, ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಆದರೆ 1ರಿಂದ 7ನೇ ತರಗತಿಯವರೆಗೆ ಮಾತ್ರ ಇರುವ ಹಿರಿಯ ಪ್ರಾಥಮಿಕ ಶಾಲೆಗಳ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅವರು ತಮ್ಮಲ್ಲಿರುವ 6 ಮತ್ತು 7ನೇ ತರಗತಿಯ ಮಕ್ಕಳಲ್ಲಿಯೇ ತಂಡ ಕಟ್ಟಬೇಕಾಗುತ್ತದೆ. ಪ್ರೌಢ ಶಾಲೆಗಳಲ್ಲಿ 8,9,10 ನೇ ತರಗತಿ ಮಕ್ಕಳಿಂದ ಹಾಗೂ ಖಾಸಗಿ ಶಾಲೆಗಳೂ ಕೂಡ 6,7,8,9,10 ನೇ ತರಗತಿ ಮಕ್ಕಳಿಂದ ಕೂಡಿದ ತಂಡವನ್ನು ಕಟ್ಟುತ್ತಾರೆ. ಇಲ್ಲಿ ತಂಡ ಕಟ್ಟುವ ಮೊದಲ ಹಂತದಲ್ಲಿಯೇ ಆಯ್ಕೆ ಅವಕಾಶ ಸಮಾನವಾಗಿಲ್ಲ.ನಂತರ ಈ ತಂಡಗಳನ್ನೆಲ್ಲ ಒಂದೇ “Under-14” ವಿಭಾಗದಲ್ಲಿ ಮುಖಾಮುಖಿಯಾಗಿಸಿ “ಎಲ್ಲರೂ 14 ವರ್ಷದೊಳಗಿನವರೇ, ಆದ್ದರಿಂದ ಎಲ್ಲರಿಗೂ ಸಮಾನ ಅವಕಾಶವಿದೆ” ಎಂದು ಹೇಳುವುದು ನಿಜವಾದ ಸಮಾನತೆಯೇ?
ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ ಖಾಸಗಿ ಶಾಲೆಗಳ ವಿರುದ್ಧ ಅಥವಾ ಪ್ರೌಢ ಶಾಲೆ ಗಳ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ.ಖಾಸಗಿ ಶಾಲೆಗಳು ತಮ್ಮಲ್ಲಿರುವ ಮಕ್ಕಳಿಂದ ಉತ್ತಮ ತಂಡ ಕಟ್ಟಿಕೊಳ್ಳುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಅದೇ ರೀತಿ 8–10ನೇ ತರಗತಿಯಿರುವ ಪ್ರೌಢಶಾಲೆಗಳು ತಮ್ಮಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವುದೂ ತಪ್ಪು ಎಂದು ಹೇಳುತ್ತಿಲ್ಲ.ಅವರಿಗೆ ನೀಡಿರುವ ನಿಯಮದ ಅವಕಾಶವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ.
ಆದರೆ ಪ್ರಶ್ನೆ ಶಿಕ್ಷಣ ಇಲಾಖೆಯ ನಿಯಮದ ಬಗ್ಗೆ. ಒಂದು ಶಾಲೆಗೆ ಹೆಚ್ಚಿನ ವಿದ್ಯಾರ್ಥಿ ಸಮೂಹದಿಂದ ಗಟ್ಟಿ ತಂಡ ಕಟ್ಟುವ ಅವಕಾಶವಿದ್ದು, ಮತ್ತೊಂದು ಶಾಲೆಗೆ ಕೇವಲ 6–7ನೇ ತರಗತಿಯ ಮಕ್ಕಳಲ್ಲಿಯೇ ತಂಡ ಕಟ್ಟಬೇಕಾದ ಪರಿಸ್ಥಿತಿ ಇರುವಾಗ, ಎರಡನ್ನೂ ಒಂದೇ ರೀತಿಯಲ್ಲಿ ಸ್ಪರ್ಧೆಗೆ ಇಳಿಸುವುದು ನ್ಯಾಯಯುತವೇ? ಖಾಸಗಿ ಶಾಲೆಯ ಮಗು ಕೂಡ ನಮ್ಮ ಮಗು; ಸರ್ಕಾರಿ ಶಾಲೆಯ ಮಗು ಕೂಡ ನಮ್ಮ ಮಗು. ಆದರೆ ಯಾವುದೇ ಮಗುವಿಗೆ ಅನ್ಯಾಯವಾಗ ಬಾರದಲ್ಲವೇ?
ಇತ್ತೀಚೆಗೆ ಗ್ರಾಮೀಣ ಪ್ರದೇಶವೊಂದರಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಈ ಸಮಸ್ಯೆಯ ನೈಜ ಚಿತ್ರಣ ಕಂಡುಬಂದಿದೆ ಒಂದೆಡೆ ಹಿರಿಯ ಪ್ರಾಥಮಿಕ ಶಾಲೆಯ 6–7ನೇ ತರಗತಿಯ ಸಣ್ಣ ಮಕ್ಕಳು. ಮತ್ತೊಂದೆಡೆ ಪ್ರೌಢಶಾಲೆಯ 8–9ನೇ ತರಗತಿಯ ದೈಹಿಕವಾಗಿ ಹೆಚ್ಚು ಬೆಳೆದ ಮಕ್ಕಳು.ಸಣ್ಣ ಮಕ್ಕಳಲ್ಲಿ 30–35 ಕೆ.ಜಿ. ತೂಕ ಸಾಮಾನ್ಯವಾಗಿರಬಹುದಾದರೆ, ಹಿರಿಯ ಮಕ್ಕಳಲ್ಲಿ 45–50 ಕೆ.ಜಿ. ಅಥವಾ ಅದಕ್ಕಿಂತ ಹೆಚ್ಚಿನ ತೂಕ ಇರಬಹುದಾಗಿದೆ.ಇಂತಹ ದೈಹಿಕ ವ್ಯತ್ಯಾಸವಿರುವ ಮಕ್ಕಳನ್ನು ಕಬಡ್ಡಿಯಂತಹ ದೈಹಿಕ ಸಂಪರ್ಕವಿರುವ ಕ್ರೀಡೆಯಲ್ಲಿ ಕೇವಲ “ಇಬ್ಬರೂ 14 ವರ್ಷದೊಳಗಿನವರು” ಎಂಬ ಕಾರಣಕ್ಕೆ ಒಂದೇ ವಿಭಾಗದಲ್ಲಿ ಆಡಿಸುವುದು ಮಕ್ಕಳ ಸುರಕ್ಷತೆ, ನ್ಯಾಯಯುತ ಸ್ಪರ್ಧೆ ಮತ್ತು ಸಮಾನ ಅವಕಾಶದ ದೃಷ್ಟಿಯಿಂದ ಗಂಭೀರವಾಗಿ ಪರಿಶೀಲಿಸಬೇಕಾದ ವಿಷಯವಾಗಿದೆ.
ಮಕ್ಕಳ ಹಕ್ಕು ಎಂದರೆ ಸುರಕ್ಷಿತ ಮತ್ತು ನ್ಯಾಯಯುತ ಕ್ರೀಡಾ ಅವಕಾಶವೂ ಹೌದುಶಿಕ್ಷಣದ ಹಕ್ಕು ಕಾಯ್ದೆಯ ಆಶಯವು ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವುದಾಗಿದೆ. ಶಾಲಾ ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕ ಮತ್ತು ತರಗತಿ ಕೊಠಡಿ ಮಾತ್ರವಲ್ಲ. ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಯೂ ಶಿಕ್ಷಣದ ಪ್ರಮುಖ ಭಾಗವಾಗಿದೆ.
ಕ್ರೀಡಾ ಚಟುವಟಿಕೆಗಳು ಈ ಸರ್ವಾಂಗೀಣ ಬೆಳವಣಿಗೆಯ ಪ್ರಮುಖ ಭಾಗ. ಹೀಗಾಗಿ ಕ್ರೀಡೆಯಲ್ಲಿ ಮಕ್ಕಳಿಗೆ ಸುರಕ್ಷಿತ, ಗೌರವಯುತ ಮತ್ತು ನ್ಯಾಯಯುತ ವಾತಾವರಣ ಕಲ್ಪಿಸುವ ಜವಾಬ್ದಾರಿ ಶಿಕ್ಷಣ ವ್ಯವಸ್ಥೆಯ ಮೇಲಿದೆ. ಒಂದೇ ನಿಯಮವನ್ನು ಎಲ್ಲರಿಗೂ ಅನ್ವಯಿಸುವುದೇ ಸಮಾನತೆ ಅಲ್ಲ; ವಿಭಿನ್ನ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ನ್ಯಾಯಯುತ ಅವಕಾಶ ದೊರೆಯುವಂತೆ ನಿಯಮ ರೂಪಿಸುವುದೇ ನಿಜವಾದ ಸಮಾನತೆದೈಹಿಕ ಶಿಕ್ಷಕರ ಕರ್ತವ್ಯ ಕೇವಲ ತಮ್ಮ ಶಾಲೆಯ ತಂಡವನ್ನು ಗೆಲ್ಲಿಸುವುದಲ್ಲ.ಮಕ್ಕಳ ಸುರಕ್ಷತೆ, ಸರಿಯಾದ ತರಬೇತಿ, ಕ್ರೀಡಾ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ನ್ಯಾಯಯುತ ಸ್ಪರ್ಧೆಯನ್ನು ಕಾಪಾಡುವುದೂ ಅವರ ವೃತ್ತಿಪರ ಬದ್ಧತೆಯ ಭಾಗವಾಗಬೇಕು.
ಸಣ್ಣ ಮಕ್ಕಳಿಗೆ ಸ್ಪಷ್ಟವಾದ ಅನಾನುಕೂಲತೆ ಕಂಡುಬಂದರೂ “ಇದು ನಮ್ಮ ವಿಷಯವಲ್ಲ” ಎಂಬ ರೀತಿಯ ಮೌನ ವಹಿಸುವುದು ಸರಿಯೇ?ಒಬ್ಬ ದೈಹಿಕ ಶಿಕ್ಷಕ ತನ್ನ ಶಾಲೆಯ ಗೆಲುವಿಗಿಂತ ಮೊದಲು ಮಕ್ಕಳ ಹಿತ ಮತ್ತು ಕ್ರೀಡಾ ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ದೈಹಿಕ ಶಿಕ್ಷಕರು ಇಲ್ಲದ ಶಾಲೆಯ ಮಕ್ಕಳಿಗೆ ಪೂರ್ವನಿಗದಿತ ಹಾಗೂ ಆನ್‌ಲೈನ್‌ನಲ್ಲಿ ದಾಖಲಿಸಿರುವ ಒಬ್ಬ Manager/ಶಿಕ್ಷಕರಿಗೆ ಮಾತ್ರ ಮೈದಾನದೊಳಗೆ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಅವಕಾಶವಿದ್ದಲ್ಲಿ, ಕೆಲವು ಕಡೆಗಳಲ್ಲಿ 2–3 ಮಂದಿ ಸಹಾಯಕರು ಅಥವಾ ತರಬೇತುದಾರರು ಮೈದಾನದೊಳಗೆ ನಿಂತು ಸೂಚನೆ ನೀಡುತ್ತಿರುವುದು ಕಂಡುಬಂದಿದೆನಿಯಮ ಎಲ್ಲ ಶಾಲೆಗಳಿಗೂ ಒಂದೇನಾ?
ಒಂದು ಶಾಲೆಯ ಮಕ್ಕಳಿಗೆ ಒಬ್ಬ Manager/ಶಿಕ್ಷಕ ಮಾತ್ರ ಅವಕಾಶವಿದ್ದರೆ, ಮತ್ತೊಂದು ಶಾಲೆಗೆ ಹಲವು ಮಂದಿ ತರಬೇತುದಾರರು ಅಥವಾ ಸಹಾಯಕರು ಮೈದಾನದೊಳಗೆ ನಿಂತು ನಿರಂತರವಾಗಿ ಸೂಚನೆ ನೀಡುವುದು ಯಾವ ನಿಯಮದಡಿ?ಮಕ್ಕಳ ಮೇಲೆ ಕೂಗಾಡುವುದು, ಹೆದರಿಸುವುದು ಅಥವಾ ಎದುರಾಳಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಉಂಟುಮಾಡುವ ರೀತಿಯ ವರ್ತನೆಗೆ ಯಾವುದೇ ಕಾರಣಕ್ಕೂ ಅವಕಾಶ ಇರಬಾರದು.ಕ್ರೀಡಾ ಮೈದಾನವು ಮಕ್ಕಳ ಆತ್ಮವಿಶ್ವಾಸದ ಸ್ಥಳವಾಗಬೇಕು; ಭಯದ ಸ್ಥಳವಾಗಬಾರದು.
ಅದರಿಂದSDMC ಸಮನ್ವಯ ವೇದಿಕೆಯ ಪ್ರಮುಖ ಬೇಡಿಕೆಗಳು14 ವರ್ಷದೊಳಗಿನ ವಿಭಾಗದ ನಿಯಮವನ್ನು ಮರುಪರಿಶೀಲಿಸಬೇಕುಕೇವಲ ಜನ್ಮ ದಿನಾಂಕವನ್ನು ಆಧಾರವಾಗಿಟ್ಟುಕೊಳ್ಳದೆ, ಕ್ರೀಡೆಯ ಸ್ವರೂಪ, ತರಗತಿ, ದೈಹಿಕ ಬೆಳವಣಿಗೆ ಮತ್ತು ಮಕ್ಕಳ ಸುರಕ್ಷತೆಯನ್ನು ಪರಿಗಣಿಸಿ ಹೊಸ ವರ್ಗೀಕರಣ ರೂಪಿಸಬೇಕು.6–7ನೇ ತರಗತಿ ಮತ್ತು 8–9ನೇ ತರಗತಿಗೆ ಪ್ರತ್ಯೇಕ ವಿಭಾಗವಿಶೇಷವಾಗಿ ಕಬಡ್ಡಿ, ಖೋ-ಖೋ ಮುಂತಾದ ದೈಹಿಕ ಸಂಪರ್ಕವಿರುವ ಕ್ರೀಡೆಗಳಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧಾ ವಿಭಾಗ ರೂಪಿಸಬೇಕು.1–7 ಮತ್ತು 1–10/8–10 ಶಾಲೆಗಳ ನಡುವಿನ ಆಯ್ಕೆ ಅಸಮಾನತೆಯನ್ನು ಪರಿಗಣಿಸಬೇಕು1ರಿಂದ 10ನೇ ತರಗತಿ ಇರುವ ಖಾಸಗಿ ಶಾಲೆಗಳು ಹಾಗೂ 8–10ನೇ ತರಗತಿ ಇರುವ ಪ್ರೌಢಶಾಲೆಗಳಿಗೆ 14 ವರ್ಷದೊಳಗಿನ ತಂಡ ಕಟ್ಟಲು ಹೆಚ್ಚಿನ ವಿದ್ಯಾರ್ಥಿ ಸಮೂಹದಿಂದ ಆಯ್ಕೆ ಮಾಡುವ ಅವಕಾಶವಿದೆ.
ಆದರೆ 1ರಿಂದ 7ನೇ ತರಗತಿ ಮಾತ್ರ ಇರುವ ಶಾಲೆಗಳಿಗೆ ಅಂತಹ ಅವಕಾಶವಿಲ್ಲ. ಹೀಗಾಗಿ ಈ ಮೂಲಭೂತ ರಚನಾತ್ಮಕ ಅಸಮಾನತೆಯನ್ನು ಪರಿಗಣಿಸಿ ನ್ಯಾಯಯುತ ಆಯ್ಕೆ ವ್ಯವಸ್ಥೆ ರೂಪಿಸಬೇಕು. ಮೈದಾನದೊಳಗಿನ ತರಬೇತುದಾರರ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕುದೈಹಿಕ ಶಿಕ್ಷಕರು ಇರುವ ಶಾಲೆಯಲ್ಲಿ ಅಧಿಕೃತ ದೈಹಿಕ ಶಿಕ್ಷಕರಿಗೆ ಮತ್ತು ದೈಹಿಕ ಶಿಕ್ಷಕರು ಇಲ್ಲದ ಶಾಲೆಯಲ್ಲಿ ಪೂರ್ವನಿಗದಿತ ಒಬ್ಬ Manager/ಶಿಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು.ಅನಧಿಕೃತವಾಗಿ 2–3 ಮಂದಿ ಅಥವಾ ಹೆಚ್ಚಿನವರು ಮೈದಾನದೊಳಗೆ ಪ್ರವೇಶಿಸುವುದನ್ನು ತಡೆಯಬೇಕು.
ರಾಜ್ಯ ಮಟ್ಟದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಹೊಸ ಕ್ರೀಡಾ ಮಾರ್ಗಸೂಚಿದೈಹಿಕ ಶಿಕ್ಷಣ ತಜ್ಞರು, ಕ್ರೀಡಾ ತಜ್ಞರು, ಅನುಭವಿ ದೈಹಿಕ ಶಿಕ್ಷಕರು, ಶಿಕ್ಷಣಾಧಿಕಾರಿಗಳು ಮತ್ತು ಮಕ್ಕಳ/ಪೋಷಕರ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, 14 ವರ್ಷದೊಳಗಿನ ಕ್ರೀಡಾ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಮಕ್ಕಳ ಸುರಕ್ಷತೆ, ಸಮಾನ ಅವಕಾಶ ಮತ್ತು ಕ್ರೀಡಾ ನ್ಯಾಯವನ್ನು ಖಚಿತಪಡಿಸುವ ರಾಜ್ಯ ಮಟ್ಟದ ಮಾರ್ಗಸೂಚಿ ರೂಪಿಸಬೇಕು.“ನಿಯಮ ಒಂದೇ ಆಗಿರುವುದಕ್ಕಿಂತ, ನ್ಯಾಯ ಒಂದೇ ಆಗಿರಬೇಕು” “1ರಿಂದ 10ನೇ ತರಗತಿಯವರೆಗೆ ಇರುವ ಖಾಸಗಿ ಶಾಲೆಗಳು ಮತ್ತು 8–10ನೇ ತರಗತಿಯವರೆಗೆ ಇರುವ ಪ್ರೌಢಶಾಲೆಗಳು 14 ವರ್ಷದೊಳಗಿನ ವಿಭಾಗಕ್ಕೆ ತಮ್ಮಲ್ಲಿರುವ ದೊಡ್ಡ ವಿದ್ಯಾರ್ಥಿ ಸಮೂಹದಿಂದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಂಡು ಗಟ್ಟಿ ತಂಡ ಕಟ್ಟುವ ಅವಕಾಶ ಹೊಂದಿವೆ. ಆದರೆ 1ರಿಂದ 7ನೇ ತರಗತಿ ಮಾತ್ರ ಇರುವ ಹಿರಿಯ ಪ್ರಾಥಮಿಕ ಶಾಲೆಗಳು ತಮ್ಮಲ್ಲಿರುವ ಸೀಮಿತ ಮಕ್ಕಳಲ್ಲಿಯೇ ತಂಡ ಕಟ್ಟಬೇಕಾಗುತ್ತದೆ.
ಈ ಮೂಲಭೂತ ವ್ಯತ್ಯಾಸವನ್ನು ಕಡೆಗಣಿಸಿ ಎರಡೂ ತಂಡಗಳನ್ನು ಒಂದೇ ರೀತಿಯಲ್ಲಿ ಸ್ಪರ್ಧೆಗೆ ಇಳಿಸುವುದು ನ್ಯಾಯಯುತವೇ ಎಂಬುದನ್ನು ಶಿಕ್ಷಣ ಇಲಾಖೆ ಉತ್ತರಿಸಬೇಕು” “ನಮ್ಮ ಪ್ರಶ್ನೆ ಯಾವುದೇ ಖಾಸಗಿ ಶಾಲೆಯ ಪ್ರೌಢ ಶಾಲೆಗಳ ವಿರುದ್ಧವಲ್ಲ. ಖಾಸಗಿ ಶಾಲೆಯ ಮಗು ಕೂಡ ನಮ್ಮ ಮಗುವೇ. ಪ್ರೌಢಶಾಲೆಯ ಮಗು ಕೂಡ ನಮ್ಮ ಮಗುವೇ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಗು ಕೂಡ ನಮ್ಮ ಮಗುವೇ. ಆದರೆ ಯಾವ ಮಗುವಿಗೂ ಅನ್ಯಾಯವಾಗಬಾರದು. ಅವಕಾಶದ ಅಸಮಾನತೆಯನ್ನು ಸರಿಪಡಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು.”“ಕೇವಲ ತಾಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಗಟ್ಟಿ ತಂಡವನ್ನು ಆಯ್ಕೆ ಮಾಡುವ ಉದ್ದೇಶದಿಂದ ಸಣ್ಣ ಮಕ್ಕಳ ದೈಹಿಕ ಸುರಕ್ಷತೆ, ಮಾನಸಿಕ ಸ್ಥೈರ್ಯ ಮತ್ತು ಕ್ರೀಡಾ ಹಕ್ಕುಗಳನ್ನು ಕಡೆಗಣಿಸಬಾರದು. ಕ್ರೀಡಾಕೂಟದ ಉದ್ದೇಶ ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ, ಆತ್ಮವಿಶ್ವಾಸ ಮತ್ತು ದೈಹಿಕ ಸಾಮರ್ಥ್ಯ ಬೆಳೆಸುವುದಾಗಿರಬೇಕು.”
“ಇನ್ನಾದರೂ ಶಿಕ್ಷಣ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ 14 ವರ್ಷದೊಳಗಿನ ಕ್ರೀಡಾ ವಿಭಾಗದ ನಿಯಮಗಳನ್ನು ಮರುಪರಿಶೀಲಿಸಬೇಕು. 1ರಿಂದ 7ನೇ ತರಗತಿ ಮಾತ್ರ ಇರುವ ಶಾಲೆಗಳ ಮಕ್ಕಳಿಗೆ ನ್ಯಾಯಯುತ ಮತ್ತು ಸುರಕ್ಷಿತ ಸ್ಪರ್ಧಾ ಅವಕಾಶ ಕಲ್ಪಿಸಬೇಕು.”“ಮೈದಾನದೊಳಗಿನ ನಿಯಂತ್ರಣ ಸಂಪೂರ್ಣವಾಗಿ ರೆಫರಿಗಳದ್ದಾಗಿರಬೇಕು. ನಿಯಮಬದ್ಧವಾಗಿ ಅನುಮತಿಸಲ್ಪಟ್ಟ ಒಬ್ಬ ಅಧಿಕೃತ ತರಬೇತುದಾರ/Manager ಹೊರತುಪಡಿಸಿ ಹೆಚ್ಚುವರಿ ವ್ಯಕ್ತಿಗಳು ಮೈದಾನದೊಳಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಭಯ, ಒತ್ತಡ ಅಥವಾ ಮಾನಸಿಕ ಕಿರುಕುಳ ಉಂಟುಮಾಡುವ ಯಾವುದೇ ವರ್ತನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ.”
“ಸಣ್ಣ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ನೋಡಿ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ವಿಷಯದಲ್ಲಿ ತಕ್ಷಣ ನಿಯಮ ಪರಿಷ್ಕರಣೆ ಮತ್ತು ಸ್ಪಷ್ಟ ಮಾರ್ಗಸೂಚಿ ಹೊರಬರದಿದ್ದರೆ, ಸರ್ಕಾರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳ ಹಕ್ಕು ಮತ್ತು ಸಮಾನ ಕ್ರೀಡಾ ಅವಕಾಶಕ್ಕಾಗಿ ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ ರಾಜ್ಯ ಮಟ್ಟದಲ್ಲಿ ಪ್ರಬಲವಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಲಿದೆ” ಮೊಯ್ದಿನ್ ಕುಟ್ಟಿರಾಜ್ಯ ಅಧ್ಯಕ್ಷರುಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ (ರಿ.)📞 9743734020 / 7892531098












Leave a Reply