ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಚಜನ್ಯ ಸಂಘ ಪಾರಂಪಳ್ಳಿ – ಹಂದಟ್ಟು ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಕೋಟ: ಪಾಂಚಜನ್ಯ ಸಂಘ ಪಾರಂಪಳ್ಳಿ – ಹಂದಟ್ಟು ಇವರ ನೇತೃತ್ವದಲ್ಲಿ ಚಿತ್ರಪಾಡಿ ಶಾಲಾ ವಠಾರ ಹಾಗೂ ಅಂಬಾಗಿಲ ಕೆರೆ ರಸ್ತೆ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಂಡಿತು.

ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ, ಚಿತ್ರಪಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಶಾಲಿನಿ ಎಸ್‌ಡಿಎಂಸಿ ಅಧ್ಯಕ್ಷ ಶಂಕರ ದೇವಾಡಿಗ, ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಸಹಶಿಕ್ಷಕರಾದ ಪ್ರಶಾಂತ, ಜ್ಯೋತಿ, ಶಾಲಾ ಶಿಕ್ಷಕ ಹಾಗೂ ಶಿಕ್ಷಕಿ ವೃಂದದವರು ಉಪಸ್ಥಿತರಿದ್ದರು. ಡಾ ಗಣೇಶ ಬೆಳಕು ಮನೆ ಹಾಗೂ ಅರುಣ ಐತಾಳ್ ಸಹಕಾರ ನೀಡಿದರು.

Leave a Reply

Your email address will not be published. Required fields are marked *