ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವೀಲ್‌ಚೇರ್ ವಿತರಣೆ ಮೂಲಕ ರೋಟರಿ ಕ್ಲಬ್ ಕೋಟ ಬ್ರಿಗೇಡ್‌ನಿಂದ ಮಾನವೀಯ ಸೇವೆ-ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ

ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವೀಲ್‌ಚೇರ್ ವಿತರಣೆ ಕಾರ್ಯಕ್ರಮ ಕೋಟೇಶ್ವರದ ಮಾರ್ಕೊಡಿನಲ್ಲಿ ನಡೆಯಿತು.ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ ಅವರು ಮಾರ್ಕೊಡಿನ ನಿವಾಸಿ ಭಾಸ್ಕರ ವೀಲ್‌ಚೇರ್ ಹಸ್ತಾಂತರಿಸಿ ಮಾತನಾಡಿ ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸಮಾಜಮುಖಿ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ವೀಲ್‌ಚೇರ್‌ಗಳಂತಹ ಅಗತ್ಯ ಸಾಧನಗಳನ್ನು ಒದಗಿಸುವುದು ಅವರ ಜೀವನದಲ್ಲಿ ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಮಾಜದ ಅಗತ್ಯವಿರುವ ವರ್ಗಗಳಿಗೆ ನಿರಂತರವಾಗಿ ನೆರವು ನೀಡುವ ಮೂಲಕ ಮಾನವೀಯ ಸೇವೆಯನ್ನು ಮುಂದುವರಿಸುವುದು ರೋಟರಿ ಕ್ಲಬ್ ಕೋಟ ಬ್ರಿಗೇಡ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಲಯ 2ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಹಾಗೂ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರಾದ ಡಾ. ಗಣೇಶ್ ಯು., ಸುರೇಶ್ ಆಚಾರ್ಯ, ವಿಷ್ಣುಮೂರ್ತಿ ಉರಾಳ, ಪ್ರಕಾಶ್ ಹಂದಟ್ಟು, ಅನಿಲ್ ಪೂಜಾರಿ, ರವಿನಾಥ್ ಪೂಜಾರಿ ಮತ್ತು ಪ್ರಥ್ವಿನ್ ಸಿ. ಮೆಂಡನ್ ಉಪಸ್ಥಿತರಿದ್ದರು.ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವೀಲ್‌ಚೇರ್ ವಿತರಣೆ ಕಾರ್ಯಕ್ರಮದಲ್ಲಿ ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ ಅವರು ಮಾರ್ಕೊಡಿನ ನಿವಾಸಿ ಭಾಸ್ಕರ ವೀಲ್‌ಚೇರ್ ಹಸ್ತಾಂತರಿಸಿದರು.

ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ, ವಲಯ 2ರ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಹಾಗೂ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಸದಸ್ಯರಾದ ಡಾ. ಗಣೇಶ್ ಯು ಇದ್ದರು.

Leave a Reply

Your email address will not be published. Required fields are marked *