ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಪ್ರೌಢ ಮತ್ತು ಪ್ರಾಥಮಿಕ ಶಾಲೆ : ಶೈಕ್ಷಣಿಕ ಪ್ರಾರಂಭೋತ್ಸವ

ಕೋಟ: ಉತ್ತಮ ಕಲಿಕೆ ಉಜ್ಜಲ ಭವಿಷ್ಯ ಎಂಬ ಶಿಕ್ಷಣ ಇಲಾಖೆಯ ದ್ಯೇಯ ವಾಕ್ಯವನ್ನು ಸಮುದಾಯಕ್ಕೆ ಪರಿಚಯಿಸುವ ಮಹತ್ತರ ಕಾರ್ಯಕ್ರಮ ಕೋಟದ ಮಣೂರು ಪಡುಕರೆ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಸಂಪನ್ನಗೊoಡಿತು. ದಾಖಲಾದ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿ ಮಕ್ಕಳ ಕೈಗಳಿಗೆ ಬಣ್ಣ ಬಣ್ಣದ ಬೆಲೂನ್ ಮತ್ತು ಲೇಖನಿ ನೀಡಿ ಬ್ಯಾಂಡ್ ಮೆರವಣಿಗೆಯೊಂದಿಗೆ ಅಲಂಕೃತಗೊoಡ ಶಾಲಾ ಸಭಾಂಗಣಕ್ಕೆ ಮೆರವಣಿಗೆ ಮೂಲಕವ ಪೋಷಕರೊಂದಿಗೆ ಸ್ವಾಗತಿಸಲಾಯಿತು.

ಸಮಾರಂಭದಲ್ಲಿ ಮಕ್ಕಳ ಕಲಿಕೆ ಸಂತಸದಾಯಕವಾಗಿ ಸಾಗುವಂತೆ ಶಾಲಾ ಭೌತಿಕ ವ್ಯವಸ್ಥೆ , ಶಾಲಾ ವಾಹನ ವ್ಯವಸ್ಥೆ, ಅಗತ್ಯತೆಗಳನ್ನು ಪೂರೈಸಿಕೊಂಡ ಬ್ರಹ್ಮಾರವರ ವಲಯದಲ್ಲಿಯೇ” ಎ” ಗ್ರೇಡ್ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆಯಾಗಿ ಮಣೂರು ಶಾಲೆ ಬಿಂಬಿತವಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡ ಅಕ್ಷರ ಕ್ರಾಂತಿಕಾರಿ, ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಇವರು ಮಾತನಾಡಿದರು.

ಶಾಲಾ ಎಸ್ ಎಸ್ ಎಲ್ ಸಿ ಫಲಿತಾಂಶ ಹಾಗೂ ಉತ್ತಮ ದಾಖಲಾತಿ, ಮೂಲ ಸೌಕರ್ಯ , ಪೌಷ್ಠಿಕವಾದ ಬಿಸಿಊಟ ಪಠ್ಯ ಪರಿಕರದ ಕುರಿತು ಪ್ರಾಸ್ತಾವಿಕವಾಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿವೇಕಾನಂದ ಗಾಂವಕಾರ ವಿದ್ಯಾರ್ಥಿ ಪೋಷಕರಿಗೆ ತಿಳಿಸಿಕೊಟ್ಟರು . ಶಾಲಾ ವಾಹನದ ಬಳಕೆಯ ಕುರಿತಾಗಿ ಶೈಕ್ಷಣಿಕ ಪ್ರೋತ್ಸಾಹಕ ರಮೇಶ್ ಕುಂದರ್ ಇವರು ಮಾತನಾಡಿದರು.

ಸಮಾರಂಭದಲ್ಲಿ ಪ್ರೌಢ ಶಾಲಾ ವಿಭಾಗ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ, ಪ್ರಾಥಮಿಕ ವಿಭಾಗದ ಅಧ್ಯಕ್ಷ ವಿನಯ್,ಕೋಟ ಪಂಚಾಯತ್ ಮಾಜಿ ಸದಸ್ಯ ಜಯರಾಮ ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಜಯ ಹಾಗೂ ಉಭಯ ಸಂಸ್ಥೆಗಳ ಎಸ್ ಡಿ ಎಂ ಸಿ ಸದಸ್ಯರು ಉಪಸ್ಥಿತರಿದ್ದರು. ಪ್ರೌಢವಿಭಾಗ ಹಿರಿಯ ಶಿಕ್ಷಕ ರಾಮ್ ದಾಸ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ನಾಗರತ್ನ ಜಿ ಶಾಲಾ ಚಟುವಟಿಕೆಯ ಕುರಿತು ಮಾತನಾಡಿದರು. ಹಿರಿಯ ಶಿಕ್ಷಕಿ ಲಲಿತಾ ವಂದಿಸಿದರು.

ಇದೇ ಸಂದರ್ಭದಲ್ಲಿ 8 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಕೋಟದ ಮಣೂರು ಪಡುಕರೆ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರಜರಗಿತು. ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿವೇಕಾನಂದ ಗಾಂವಕಾರ, ಪ್ರೌಢ ಶಾಲಾ ವಿಭಾಗ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ, ಪ್ರಾಥಮಿಕ ವಿಭಾಗದ ಅಧ್ಯಕ್ಷ ವಿನಯ್, ಕೋಟ ಪಂಚಾಯತ್ ಮಾಜಿ ಸದಸ್ಯ ಜಯರಾಮ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *