ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸೇವಾಸಂಗಮ ಶಿಶುಮಂದಿರದಲ್ಲಿ ಪ್ರಾರಂಭೋತ್ಸವ

ಕೋಟ: ಇಲ್ಲಿನ ಕೋಟದ ಸೇವಾಸಂಗಮ ಶಿಶುಮಂದಿರ ಇದರ ಪ್ರಾರಂಭೋತ್ಸವ ಸೋಮವಾರ ಹಿಂದೂ ಸಂಪ್ರದಾಯದoತೆ ಪುಟಾಣಿಗಳನ್ನು ಸ್ವಾಗತಿಸಲಾಯಿತು. ಶಿಶುಮಂದಿರಕ್ಕೆ ಪುಟಾಣಿಗಳನ್ನು ಆಗಮಿಸುತ್ತಿದ್ದಂತೆ ಮಾತಾಜಿ ಸಹನಾ ಹಾಗೂ ಶಿಶುಮಂದಿರದ ಸ್ಥಾನೀಯ ಸಮಿತಿ ಪದಾಧಿಕಾರಿಗಳು ದೀಪ ಬೆಳಗಿಸಿ ಆರತಿ ಬೆಳಗಿದರು.

ಪೋಷಕರು ಪುಟಾಣಿಗಳಿಗೆ ಪುಷ್ಭ ಸಿಂಚನಗೈದರು. ನoತರ ಭಾರತಮಾತೆಗೆ ದೀಪ ಬೆಳಗಿಸಿ ಪುಟಾಣಿಗಳು ನಮಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಿಶುಮಂದಿರದ ಅಧ್ಯಕ್ಷ ಶ್ರೀಕಾಂತ್ ಶೆಣೈ ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆ ಸೇವಾಸಂಗಮ ಶಿಶುಮಂದಿರದಲ್ಲಿ ಸಂಪ್ರದಾಯಬದ್ಧವಾಗಿ ನೀಡಲಾಗುತ್ತಿದೆ. ಮಕ್ಕಳ ಪ್ರಾರಂಭಿಕ ದಿನಗಳ ಶಿಕ್ಷಣ ಸಂಸ್ಕಾರ ನೀಡುವಲ್ಲಿ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಪೋಷಕರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಹಿರಿಯ ಸದಸ್ಯೆ ವಸುಧಾ ಪ್ರಭು,ಪ್ರಮೀಳಾ,ಅಮೃತ್ ಜೋಗಿ,ರವೀಂದ್ರ ಕೋಟ, ರೇಣುಕಾ ಮಯ್ಯ, ಮಾತಾಜಿ ಸಹನಾ, ಸಹಾಯಕಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಿತಿ ಕಾರ್ಯದರ್ಶಿ ಕಲಾವತಿ ಅಶೋಕ್ ನಿರೂಪಿಸಿದರು. ಕೋಟದ ಸೇವಾಸಂಗಮ ಶಿಶುಮಂದಿರ ಇದರ ಪ್ರಾರಂಭೋತ್ಸವ ಸೋಮವಾರ ಹಿಂದೂ ಸಂಪ್ರದಾಯದoತೆ ಪುಟಾಣಿಗಳನ್ನು ಸ್ವಾಗತಿಸಲಾಯಿತು. ಶಿಶುಮಂದಿರದ ಅಧ್ಯಕ್ಷ ಶ್ರೀಕಾಂತ್ ಶೆಣೈ, ಸಮಿತಿಯ ಹಿರಿಯ ಸದಸ್ಯೆ ವಸುಧಾ ಪ್ರಭು, ಪ್ರಮೀಳಾ, ಅಮೃತ್ ಜೋಗಿ ಇದ್ದರು.

Leave a Reply

Your email address will not be published. Required fields are marked *