ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ : ಸರಕಾರಿ ಜಾಗ ಅಕ್ರಮ ಒತ್ತುವರಿ – ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕಾಗಿ  ಉಪಲೋಕಾಯುಕ್ತರಿಗೆ ಪತ್ರಕರ್ತ ಕಿರಣ್ ಪೂಜಾರಿಯಿಂದ ಮನವಿ

ವರದಿ : ಪುರುಷೋತ್ತಮ್ ಪೂಜಾರಿ

ಕುಂದಾಪುರ : ಹೊಸುರು ಗ್ರಾಮದ ಸ.ನಂ 141ರಲ್ಲಿ ಗಣಪು ಶೇಡ್ತಿಯವರು ಸರಕಾರಿ ಸ್ಥಳದ ಅಕ್ರಮ ಒತ್ತುವರಿ ಮತ್ತು ಸರಕಾರಿ ಜಾಗದಿಂದ ಕೆಂಪು ಮಣ್ಣನ್ನು ತೆಗೆದರು ಅವರ ಕಟ್ಟಡ ತೆರವು ಮಾಡದೇ, ಅವರ ಮೇಲೆ ಯಾವ ದೂರನ್ನು ದಾಖಲಿಸದೇ ಸರಕಾರಿ ಅಧಿಕಾರಿಗಳು ಕರ್ತವ್ಯ ಲೋಪ, ಕರ್ತವ್ಯ ನಿರ್ಲಕ್ಷತನ, ಕರ್ತವ್ಯ ದುರ್ಬಳಕೆ ಕುರಿತು ಲೋಕಾಯುಕ್ತದಲ್ಲಿ ಪತ್ರಕರ್ತ ಕಿರಣ್ ಪೂಜಾರಿಯಿಂದ ದೂರು ದಾಖಲಾಗಿರುತ್ತದೆ.

ಮರ್ಡಿ ಗ್ರಾಮದ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಾಣ ಸ್ಥಗಿತಗೊಳಿಸುವ ಕುರಿತು ಹಲವಾರು ಬಾರಿ ಲಿಖಿತ ಮತ್ತು ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡಿರುತ್ತೇನೆ. ತದಾನಂತರ ಅಧಿಕಾರಿಗಳು ಭೇಟಿ ನೀಡಿ ಇದು ಸರಕಾರಿ ಸ್ವತ್ತು ನೀವು ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು 8 ರಿಂದ 9 ಬಾರಿ ನೋಟಿಸ್ ನೀಡಿದರು ಸಹ ಕಾನೂನು ಉಲ್ಲಂಘನೆ ಮಾಡಿ ಕಾಮಗಾರಿಯನ್ನು ಮುಂದುವರಿಸಿರುತ್ತಾರೆ ಮತ್ತು ಅಲ್ಲದೆ ಕಂದಾಯ ಆಕ್ಟ್ 192(A)ಯಲ್ಲಿ ಪ್ರಕರಣ ಗಣಪು ಶೆಡ್ತಿ ಮೇಲೆ ಯಾವುದೇ ದೂರು ದಾಖಲಿಸಿರುವುದಿಲ್ಲ. ಅಲ್ಲದೇ ಮಾನ್ಯ ಉಚ್ಚ ನ್ಯಾಯಾಲಯವು ಯಥಾ ಸ್ಥಿತಿ ಕಾಪಾಡಬೇಕು ಎಂದು ಆದೇಶ ಮಾಡಿ ಅಧಿಕಾರಿಗಳಿಗೆ 4 ತಿಂಗಳಿನ ಒಳಗೆ ಉಚ್ಚ ನಾಯ್ಯಾಲಯಕ್ಕೆ 57ರಲ್ಲಿ ಅರ್ಜಿ ಇದೆಯೇ ಎನ್ನುವುದನ್ನು ವರದಿ ಸಲ್ಲಿಸಬೇಕು ಎಂದು ಆದೇಶ ಮಾಡಿದರು ಸಹ ಯಾವುದೇ ವರದಿಯನ್ನು ಸಲ್ಲಿಸದೆ ಅಕ್ರಮದಾರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗಣಪು ಶೇಡ್ತಿ ಮನೆ ನಿರ್ಮಾಣ ಮುಂದುವರಿಸಿದ್ದು ಈಗ ಮನೆ ಮುಕ್ತಾಯ ಹಂತಕ್ಕೆ ತಲುಪಿದೆ.

ದಿನಾಂಕ 7.8.25 ರಂದು ಕಂದಾಯ ನಿರೀಕ್ಷಕರು ಗಣಪು ಶೇಡ್ತಿ ಅಕ್ರಮವಾಗಿ ಕಟ್ಟಿದ ಮನೆಗೆ ನಿಮ್ಮ ಅರ್ಜಿ 57ರಲ್ಲಿ ಬಾಕಿ ಇರುವುದಿಲ್ಲ, ಇದು ಸರಕಾರದ ಸೊತ್ತು ಎಂದು ಬ್ಯಾನರ್ ಹಾಕಿ ಮಜರು ಪ್ರಕಿಯೆ ನಡೆಸಿರುವುದಿಲ್ಲ. ತದಾನಂತರವೂ ಮನೆ ನಿರ್ಮಾಣದ ಕಾರ್ಯ ಬಿರುಸಿನಿಂದ ಸಾಗುತ್ತಲಿದೆ. ದೂರುದಾರನಾದ ನಾನು ಇದನ್ನು ಲಿಖಿತವಾಗಿ, ಫೋನ್ ಕರೆ ಮಾಡಿ, ಮತ್ತು ಮುಖತವಾಗಿ ಭೇಟಿ ಮಾಡಿ ಆರ್ ಐ, ವಿ.ಎ., ತಹಶೀಲ್ದಾರರ ಗಮನಕ್ಕೆ ತಂದರೂ ಸಹ, ಅಧಿಕಾರಿಗಳು ನಾವು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ನಮಗೆ ರಾಜಕೀಯ ಒತ್ತಡವಿದೆ ಇನ್ನು ನಾವು ಏನು ಮಾಡಲು ಸಾಧ್ಯವಿಲ್ಲ, ನೀವು ಬೇಕಿದ್ದರೆ ನಮ್ಮ ಮೇಲೆ ಲೋಕಾಯುಕ್ತ ದೂರನ್ನು ನೀಡಿ, ಇಲ್ಲ ನೀವೇ ಉಚ್ಚ ನ್ಯಾಯಾಲಯದಲ್ಲಿ PLO ಹಾಕಿ ಎಂದು ಹೇಳುತ್ತಿದ್ದು. ಪತ್ರಕರ್ತರು ಇದರ ಬಗ್ಗೆ ವಿವರ ಕೇಳಿದರೆ ಹೈ ಕೋರ್ಟ್ ನಿಂದ ಸ್ಟೇ ಬಂದಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ದಿನಾಂಕ 31-03-2026 ರಂದು ಗಣಪು ಶೇಡ್ತಿ ಸ. ನಂ. 141 ರಿಂದ ಅಕ್ರಮವಾಗಿ ಅನುಮತಿ ಇಲ್ಲದೆ ಸರಕಾರಿ ಜಾಗದಿಂದ ಕೆಂಪು ಮಣ್ಣನ್ನು ಸಾಗಾಣಿಕೆ ಮಾಡಿರುವುದನ್ನು ತಹಸೀಲ್ದಾರ್, R.I, V.A, ಗಮನಕ್ಕೆ ತಂದರು ಇಲ್ಲಿಯವರೆಗೆ ಯಾವುದೇ ಪ್ರಕಾರದ ಕ್ರಮ ಜರುಗಿಸಿರುವುದಿಲ್ಲ.

ಈ ಪ್ರಕರಣದಲ್ಲಿ V.A, R. I, ತಹಶೀಲ್ದಾರರು ಸಂಪೂರ್ಣವಾಗಿ ಅಕ್ರಮ ಒತ್ತುವರಿದಾರರಿಗೆ ಬೆಂಬಲ ನೀಡುತ್ತಿದ್ದೂ, ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಇಲ್ಲಿಯವರೆಗೆ ಖಾಲಿ ಜಾಗದಿಂದ ಮನೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದು ನಿಂತರು ಸಹ ಕಾಮಗಾರಿಯನ್ನು ನಿಲ್ಲಿಸಲು ಅಧಿಕಾರಿಯವರಿಗೆ ನಿಲ್ಲಿಸಲು ಆಗಲಿಲ್ಲ. ಕಾಮಗಾರಿ ನಡೆಯುತ್ತಲೆ ಇದೆ. ತಹಸಿಲ್ದಾರ್ ಪ್ರದೀಪ್ ಕುರುಡೇಕರ್ ಇಲ್ಲಿಯ ತನಕ ಸ್ಥಳಕ್ಕೆ ವಿಸಿಟ್ ಮಾಡದೆ ನೋಡುವಾ? ಕ್ರಮ ಕೈಗೊಳ್ಳುತ್ತೇನೆ, ನಮ್ಮ ಕೆಲಸ ನಾವು ಮಾಡಿದ್ದೇವೆ ಅಮ್ಮ ಉಡಾಪೆ ಉತ್ತರ ನೀಡುತ್ತಾರೆ.

ಅಕ್ರಮ ಒತ್ತುವರಿ ಮಾಡಿ ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿರುವವರ ಪರ ವಹಿಸಿರುವ ಗ್ರಾಮ ಲೆಕ್ಕಿಗ (V.A) ರಾಜಸ್ವ ನಿರೀಕ್ಷಕ ( R. I), ತಹಸಿಲ್ದಾರ್ ರವರ ವಿರುದ್ಧ ಕರ್ತವ್ಯ ಲೋಪ, ಕರ್ತವ್ಯ ದುರ್ಬಳಕೆ, ಕರ್ತವ್ಯ ನಿರ್ಲಕ್ಷತನದ ಅಡಿಯಲ್ಲಿ ದೂರು ದಾಖಲಿಸಲಾಗಿದೆ .

ತಹಸೀಲ್ದಾರ್ ಮತ್ತು R. ರವರ ಇನ್ನಷ್ಟು ಕರ್ಮಕಾಂಡಗಳ ಸ್ಪೋಟಕ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ.

Leave a Reply

Your email address will not be published. Required fields are marked *