ಕೋಟ: ಇಲ್ಲಿನ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಕಲಾಪೀಠ ಕೋಟ ಸಂಸ್ಥೆ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಪ್ರಜ್ಞಾನಮ್ ಟ್ರಸ್ಟ್‍ನ ಸಂಚಾಲಕ ಜಿ.ಪಿ. ಪ್ರಭಾಕರ ತುಮರಿ ಹೊಸ ಮಾದರಿಯ ನಾಟಕ, ವೃತ್ತಿ ರಂಗಭೂಮಿ ನಾಟಕದ ಇತಿಹಾಸ, ಕಸಿ ಕಟ್ಟಿದ ಹೊಸ ರೀತಿಯಲ್ಲಿ ಹೊಸ ನಾಟಕಗಳು ಬೆಳೆಯುತ್ತಿವೆ ಎಂದು ರಂಗಭೂಮಿ ದಿನಾಚರಣೆಯ ಬಗ್ಗೆ ಸಂದೇಶ ನೀಡಿದರು. ರಂಗ ನಿರ್ದೇಶಕ ರೊಹಿತ್ ಬೈಕಾಡಿ ರಂಜನೆಯ ಜೊತೆಗೆ ಉದ್ದೇಶದ ವಿಸ್ತಾರವಾದ ಅರಿವನ್ನು ಕಲಾತ್ಮಕವಾಗಿ ರಂಗಭೂಮಿ ತಿಳಿಸುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ರಾಮಚಂದ್ರ ಐತಾಳ ರಂಗಗೀತೆಯನ್ನು ಹಾಡುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಹಿಮ್ಮೇಳದ ಕಲಾವಿದರಾದ ಉದಯ ಹೊಸಾಳ, ಗಣೇಶ ಶೆಣೈ, ಹಾಗೂ ವಾಗ್ವಿಲಾಸ ಭಟ್ಟರವರನ್ನು ಗೌರವಿಸಲಾಯಿತು. ಕಲಾಪೀಠದ ಕಾರ್ಯದರ್ಶಿ ಕೆ. ನರಸಿಂಹ ತುಂಗ ಸ್ವಾಗತಿಸಿದರು. ಸಂಸ್ಥೆಯ ಸದಸ್ಯೆ ಕುಮಾರಿ ವೃಂದ ವಂದಾನಾರ್ಪಣೆಗೈದರು. ನಂತರದಲ್ಲಿ ಕಲಾಪೀಠದ ಸದಸ್ಯರಿಂದ “ಸುಗ್ರೀವ ಸಖ್ಯ” ಎಂಬ ಪೌರಾಣಿಕ ಆಖ್ಯಾನವನ್ನು ಪ್ರದರ್ಶಿಸಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಕಲಾಪೀಠ ಕೋಟ ಸಂಸ್ಥೆ ನೇತೃತ್ವದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿಮ್ಮೇಳದ ಕಲಾವಿದರಾದ ಉದಯ ಹೊಸಾಳ, ಗಣೇಶ ಶೆಣೈ, ಹಾಗೂ ವಾಗ್ವಿಲಾಸ ಭಟ್ಟರವರನ್ನು ಗೌರವಿಸಲಾಯಿತು.












Leave a Reply