ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ : ಎಸ್‌ಪಿ ಕ್ರಿಯೇಷನ್ ಕ್ಲಬ್‌ನಲ್ಲಿ  ಇಸ್ಪಿಟ್ ಆಡುತ್ತಿದ್ದ 10 ಮಂದಿಯ ಬಂಧನ

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೇಕ್ಸ್‌ನ ಮೊದಲ ಮಹಡಿಯಲ್ಲಿರುವ ಎಸ್‌ಪಿ ಕ್ರಿಯೇಷನ್ ಕ್ಲಬ್‌ನಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಡುತ್ತಿದ್ದ ಆರೋಪದ ಮೇರೆಗೆ ಕೋಟ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಗಳಾದ ಸದಾಶಿವ ದೇವಾಡಿಗ, ಜಯರಾಮ, ರಾಘವೇಂದ್ರ, ಗಣೇಶ, ದಯಾನಂದ, ಪ್ರಬಾಕರ, ಸದಾಶಿವ, ಜಯರಾಜ್ ಶೆಟ್ಟಿ, ಆನಂದ ಮತ್ತು ಹರೀಶ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ₹65,664 ನಗದು, ಕಾಯಿನ್‌ಗಳು, 10 ಮೊಬೈಲ್ ಫೋನ್‌ಗಳು, 31 ಪ್ಲಾಸ್ಟಿಕ್ ಕುರ್ಚಿಗಳು, ಒಂದು ದೊಡ್ಡ ರೌಂಡ್ ಟೇಬಲ್, ಒಂದು ಸಣ್ಣ ರೌಂಡ್ ಟೇಬಲ್, ಕ್ಲಬ್‌ನ ಸಿಸಿ ಕ್ಯಾಮೆರಾ ಡಿವಿಆರ್, ಎರಡು ಲೆಜ್ಜರ್ ಪುಸ್ತಕಗಳು ಹಾಗೂ KA-20-ER-3444 ಸಂಖ್ಯೆಯ ಟಿವಿಎಸ್ ಮೋಟಾರ್ ಸೈಕಲ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *