ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ- ವಿಜ್ಞಾನವಿಲ್ಲದ ಜ್ಞಾನ ಅಂಧಕಾರಕ್ಕೆ ದಾರಿ: ಕಮಲಾಕ್ಷ ಪೈ

ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಸಿ.ವಿ. ರಾಮನ್ ರವರ ಕೊಡುಗೆಯಾದ ರಾಷ್ಟೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕ ಕಮಲಾಕ್ಷ ಪೈ ವಹಿಸಿ ಮೂಢನಂಬಿಕೆಯ ನಿವಾರಣೆಯಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ, ವಿಜ್ಞಾನವಿಲ್ಲದ ಜೀವನವನ್ನು ಊಹಿಸಲು ಅಸಾಧ್ಯ ಮತ್ತು ವಿಜ್ಞಾನವಿಲ್ಲದ ಜ್ಞಾನ ಅಂಧಕಾರಕ್ಕೆ ದಾರಿ ಎಂದರು.

ವಿದ್ಯಾರ್ಥಿಗಳಿಂದ ವಿಜ್ಞಾನಿಗಳ ವೇಷಭೂಷಣ ಮತ್ತು 55ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಸುರೇಶ ಆಚಾರ್ಯ ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 6ನೇ ತರಗತಿಯ ವಿದ್ಯಾರ್ಥಿನಿಯರಾದ ಸಹನಾ ಬಾಯರಿ ಸ್ವಾಗತಿಸಿ, ಸಾನಿಧ್ಯ ವಂದಿಸಿ, ಅನಘಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಸಿ.ವಿ. ರಾಮನ್ ರವರ ಕೊಡುಗೆಯಾದ ರಾಷ್ಟೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ  ಸುರೇಶ ಆಚಾರ್ಯ ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ ಇದ್ದರು.

Leave a Reply

Your email address will not be published. Required fields are marked *