ಕೋಟ: ಸಾಹಿತ್ಯ, ಸಂಘಟನೆ, ರಂಗಭೂಮಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ಸಮಗ್ರ ಕಥೆಗಳು ಮತ್ತು ಕೃತಿ ಸಂಕೀರ್ಣ ಕೃತಿಗಳು ಸಾಹಿತ್ಯ ಕ್ಷೇತ್ರಕ್ಕೆ ಈ ಕೃತಿಗಳು ಅಮೂಲ್ಯ ಕೃತಿಗಳಾಗಿವೆ ಎಂದು ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಕೆ. ಎಸ್ ಕಾರಂತ ಅಭಿಪ್ರಾಯ ಪಟ್ಟರು.
ಇತ್ತೀಚಿಗೆ ಸಾಲಿಗ್ರಾಮದ ಗುರುನರಸಿಂಹ ದೇವಾಲಯದ ಜ್ಞಾನ ಮಂದಿರಲ್ಲಿ ಪುಸ್ತಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಸಂಯುಕ್ತ ವಾಗಿ ಆಯೋಜಿಸಿದ್ದ ಮೈಸೂರಿನ ಎಂ.ಎ ಶಶಿಕುಮಾರ್ ಪ್ರಕಟಿಸಿದ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತಾಡಿದರು.
ಖ್ಯಾತ ಸಾಹಿತಿಗಳಾದ ಬೆಳಗೋಡು ರಮೇಶ್ ಭಟ್ಟ ಸೋಮಯಾಜಿಯವರ ಕೃತಿ ಸಂಕೀರ್ಣದ ಕುರಿತು ಹಾಗೂ ಖ್ಯಾತ ವಿದ್ವಾಂಸರಾದ ಡಾ ಪಾದೇಕಲ್ಲು ವಿಷ್ಣುಭಟ್ಟ ಸಮಗ್ರ ಕಥಾ ಸಾಹಿತ್ಯದ ಕೃತಿಗಳ ಪರಿಚಯ ಮಾಡಿದರು. ಉಡುಪಿ ಜಿಲ್ಲಾ ಕಸಾಪದ ಸ್ಥಾಪಕ ಅಧ್ಯಕ್ಷ ಎಎಸ್‌ಎನ್ ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಆನಂದ ಸಿ ಕುಂದರ್, ನೀಲಾವರ ಸುರೇಂದ್ರ ಅಡಿಗ, ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.
ಮಾಲತಿ ರಮೇಶ್, ಕು .ಶ್ರಾವ್ಯ ಅವರಿಂದ ಭಾವಲಹರಿ ಕಾರ್ಯಕ್ರಮ ನಡೆಯಿತು.
ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ ಕುಂದರ್ ಅವರು ಡಾ.ಹರಿಕೃಷ್ಣ ಪುನರೂರು ಅವರಿಗೆ ಅನಂತ ಅಡಿಗ ಉದ್ಯಮ ಪ್ರಶಸ್ತಿ ನೀಡಿ ಗೌರವಿಸಿದರು. ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಸ್ವಾಗತಿಸಿದರು.
ಮಹಾಲಕ್ಷ್ಮೀ ಸೋಮಯಾಜಿ ಪರಿಚಯ ಮಾಡಿದರು.
ಸಾಹಿತ್ಯ ಪರಿಷತ್ ಗೌರವಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಸಾಹಿತ್ಯ ಪರಿಷತ್‌ನ ಜ್ಯೋತಿ ಪೂಜಾರಿ ವಂದಿಸಿದರು.
ಸಾಲಿಗ್ರಾಮದ ಗುರುನರಸಿಂಹ ದೇವಾಲಯದ ಜ್ಞಾನ ಮಂದಿರಲ್ಲಿ ಪುಸ್ತಕ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಸಂಯುಕ್ತ ವಾಗಿ ಆಯೋಜಿಸಿದ್ದ ಮೈಸೂರಿನ ಎಂ ಎ ಶಶಿಕುಮಾರ್ ಪ್ರಕಟಿಸಿದ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿದರು. ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ ಕುಂದರ್, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ಖ್ಯಾತ ಸಾಹಿತಿಗಳಾದ ಬೆಳಗೋಡು ರಮೇಶ್ ಭಟ್ಟ ಇದ್ದರು.












Leave a Reply