ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ. ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರ – 2026 ಮಹಿಳೆಯರ ಸೂಚನೆಗೆ ಆಹ್ವಾನ

ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ ಇವರ ಸಾರಥ್ಯದಲ್ಲಿ ಕೊಡಮಾಡುವ ಶಿವರಾಮ ಕಾರಂತ ಮಹಿಳಾ ಸಾಧಕ ಪುರಸ್ಕಾರಕ್ಕೆ ಮಹಿಳೆಯರ ಸೂಚನೆಗೆ ಆಹ್ವಾನ ನೀಡಲಾಗಿದೆ. ಸೂಚನೆ ಮಾಡುವ ಪ್ರತಿನಿಧಿಗಳು ಸೂಚಿಸುವ ಹೆಸರು ಮತ್ತು 5 ಕಾರಣಗಳನ್ನು ಫೆ.20ರ ಒಳಗೆ ವಾಟ್ಸಪ್ ಮೂಲಕ ಈ ನಂಬರಿಗೆ 9663750499 ಕಳಿಸಬೇಕಾಗಿ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ ಕುಂದರ್, ಅಧ್ಯಕ್ಷ ಸತೀಶ್ ಬಾರಿಕೆರೆ, ಕಾರ್ಯದರ್ಶಿ  ನರೇಂದ್ರ ಕುಮಾರ್ ಕೋಟ, ಕಾರ್ಯಕ್ರಮದ ನಿರ್ಧೇಶಕರಾದ ಸುಶೀಲಾ ಸೋಮಶೇಖರ್, ಉಪಾಧ್ಯಕ್ಷ ಸರಸ್ವತಿ, ಪಂಚಾಯತ್ ಪಿಡಿಒ ರವೀಂದ್ರ ರಾವ್ , ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *