ಕೋಟ: ಹಿರೇಮಹಾಲಿಂಗೇಶ್ಚರ ದೇಗುಲ ತನ್ನದೆ ಆದ ಐತಿಹಾಸಿ ಪುರಾಣ ಪ್ರಸಿದ್ಧ ದೇಗುಲವಾಗಿದ್ದು ಇಲ್ಲಿನ ಮಿತ್ರವೃಂದ ಸಂಸ್ಥೆ ಸಾಂಸ್ಕೃತಿಕವಾಗಿ ಜನಮನದಲ್ಲಿ ಪಸರಿಸಿಕೊಂಡಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಹೇಳಿದರು.
ಗುರುವಾರ ಗೀತಾನಂದ ವೇದಿಕೆಯಲ್ಲಿ ಮಹತೋಭಾರ ಶ್ರೀಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಇದರ ವಾರ್ಷಿಕ ರಥೋತ್ಸವದ ಅಂಗವಾಗಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಕೋಟ ಇವರ ಸುವರ್ಣ ಮಹೋತ್ಸವದ ಹಿನ್ನಲ್ಲೆ ಯಲ್ಲಿ ಹಮ್ಮಿಕೊಂಡ ಏಳು ದಿನಗಳ ಸಾಂಸ್ಕೃತಿಕ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವಸ್ಥಾನದ ಉತ್ಸವದಲ್ಲಿ ಮಿತ್ರವೃಂದ ಸಂಸ್ಥೆ ತನ್ನ ಐವತ್ತು ಸಂವತ್ಸವ ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ, ದೇವಸ್ಥಾನದ ಅಭಿವೃದ್ಧಿಗೆ ಮಿತ್ರವೃಂದದ ಕೊಡುಗೆ ಅಪಾರವಾಗಿದೆ ಪ್ರಸ್ತುತ ವ್ಯವಸ್ಥಾಪನಾ ಸಮಿತಿಯೊಂದಿಗೆ ಕೈಜೋಡಿಸಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗಲಿ ಎಂದರು.
ಈ ಸಂದರ್ಭದಲ್ಲಿ 50ನೇ ಸುವರ್ಣ ಸಂಭ್ರಮದ ಅಂಗವಾಗಿ ಮಿತ್ರವೃಂದದ ಬೆಳವಣಿಗೆಗೆ ಸಹಕಾರ ನೀಡಿದ ಸ್ಥಳೀಯ ಉದ್ಯಮಿ ಕುಶಲ ಪೂಜಾರಿ ಬೆಂಗಳೂರು, ಗಿರಿಜಾ ದೇವಾಡಿಗ, ಕೃಷ್ಣ ದೇವಾಡಿಗ, ಮಹಾಲಿಂಗ ದೇವಾಡಿಗ, ನರಸಿಂಹ ದೇವಾಡಿಗ ನೆಲ್ಲಿಬೆಟ್ಟು,ವಿಜಯ ಕುಮಾರ್ ಶೆಟ್ಟಿ, ಆನಂದ್ ಬಿ ಶೆಟ್ಟಿ, ಮತ್ತಿತರರನ್ನು ಸನ್ಮಾನಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಅಧ್ಯಕ್ಷತೆ ವಹಿಸಿದ್ದರು.
ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಗೌರವಾಧ್ಯಕ್ಷ ಗಣೇಶ ಭಟ್ಟ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್, ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇಲ್ಲಿನ ಮನೋವೈದ್ಯ ಡಾ. ಪ್ರಕಾಶ ತೋಳಾರ್, ನ್ಯೂ ಕರ್ನಾಟಕ ಡೆವಲಪರ್ಸ್ ಬ್ರಹ್ಮಾವರದ ಮುಖ್ಯಸ್ಥ ಚೇತನ್ ಕುಮಾರ್ ಶೆಟ್ಟಿ , ಮಿತ್ರವೃಂದದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ ಉಪಸ್ಥಿತರಿದ್ದರು. ಸುವರ್ಣ ಮಹೋತ್ಸವ ಸಮಿತಿಯ ಚಂದ್ರ ಆಚಾರ್ ಕೋಟ ಸ್ವಾಗತಿಸಿ, ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿ , ಚಂದ್ರ ಪೂಜಾರಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈಭವ , ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ನೃತ್ಯರೂಪಕ ಪ್ರದರ್ಶನಗೊಂಡಿತು. ಸಮಿತಿಯ ಪ್ರಸಾದ ಬಿಲ್ಲವ, ಅಜಿತ್ ದೇವಾಡಿಗ, ಶಂಕರ್ ದೇವಾಡಿಗ ಸಹಕರಿಸಿದರು.
ಜ.31ರ ಶನಿವಾರ ಅಪರಾಹ್ನ 1ಗ ದೇಗುಲದ ಅರ್ಚಕರಾದ ಸದಾಶಿವ ಅಡಿಗ ಮತ್ತು ಮನೆಯವರಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ, ರಾತ್ರಿ 8ಕ್ಕೆ ಸನ್ಮಾನ ಸಮಾರಂಭ , ರಾತ್ರಿ 9.30ಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಶಮಿತಾ ಮಲ್ನಾಡ್ ತಂಡದವರಿAದ ಸಂಗೀತ ರಸಮಂಜರಿ, ಫೆ.1ರAದು ಅಪರಾಹ್ನ 12.30ಕ್ಕೆಮಿತ್ರವೃಂದವರಿoದ ಮಹಾಅನ್ನಸಂತರ್ಪಣೆ, ಮನ್ಮಹಾರಥೋತ್ಸವ, ವಿಶೇಷ ಆಕರ್ಷಣೆ, ವಯಲಿನ್, ಚಂಡೆ ಬಳಗ, ವಿಶೇಷ ವೇಷಗಳು, ಕೀಲು ಕುದುರೆ, ಡೊಳ್ಳು ಕುಣಿತ, ಚಂಡೆವಾದನ, ಭಜನಾ ತಂಡಗಳು ಭಾಗಿ, ರಾತ್ರಿ 8ಕ್ಕೆ ಸನ್ಮಾನ ಸಮಾರಂಭ, ರಾತ್ರಿ 9.30ಕ್ಕೆ ಪೆರ್ಡೂರು ಮೇಳದವರಿಂದ ಯಕ್ಷಗಾನ ಚದುರಂಗ ಜರಗಲಿದೆ.
ಗೀತಾನಂದ ವೇದಿಕೆಯಲ್ಲಿ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಇದರ ವಾರ್ಷಿಕ ರಥೋತ್ಸವದ ಅಂಗವಾಗಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಕೋಟ ಇವರ ಸುವರ್ಣ ಮಹೋತ್ಸವದ ಹಿನ್ನಲ್ಲೆ ಯಲ್ಲಿ ಹಮ್ಮಿಕೊಂಡ ಏಳು ದಿನಗಳ ಸಾಂಸ್ಕೃತಿಕ ಪರ್ವ ಕಾರ್ಯಕ್ರಮದಲ್ಲಿ ಉದ್ಯಮಿ ಕುಶಲ ಪೂಜಾರಿ ಬೆಂಗಳೂರು, ಗಿರಿಜಾ ದೇವಾಡಿಗ, ಕೃಷ್ಣ ದೇವಾಡಿಗ, ಮಹಾಲಿಂಗ ದೇವಾಡಿಗ, ನರಸಿಂಹ ದೇವಾಡಿಗ ನೆಲ್ಲಿಬೆಟ್ಟು, ವಿಜಯ ಕುಮಾರ್ ಶೆಟ್ಟಿ, ಆನಂದ್ ಬಿ ಶೆಟ್ಟಿ, ಮತ್ತಿತರರನ್ನು ಸನ್ಮಾನಿಸಲಾಯಿತು. ಹಿರೇಮಹಾಲಿಂಗೇಶ್ವರ ಮಿತ್ರವೃಂದದ ಗೌರವಾಧ್ಯಕ್ಷ ಗಣೇಶ ಭಟ್ಟ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್, ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಇಲ್ಲಿನ ಮನೋವೈದ್ಯ ಡಾ. ಪ್ರಕಾಶ ತೋಳಾರ್ ಇದ್ದರು.












Leave a Reply