ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾವಡಿ- ಮತ್ತೆ ಮುನ್ನಲ್ಲೆಗೆ ಬಂದ ಮಲತ್ಯಾಜ್ಯ ಘಟಕ, ಗ್ರಾಮಸ್ಥರ ತೀವ್ರ ಆಕ್ರೋಶ ಪ್ರತಿಭಟನೆ

ಕೋಟ: ಇಲ್ಲಿನ ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಾವಡಿ ಸರಕಾರಿ ಆಸ್ಪತ್ರೆ ಸಮೀಪ ಸಾಲಿಗ್ರಾಮ ಪಟ್ಟಣಪಂಚಾಯತ್ ಉದ್ದೇಶಿತ ಮಲತ್ಯಾಜ್ಯ ಘಟಕ  ನಿರ್ಮಾಣ  ವಿಚಾರ ಮತ್ತೆ ಮುನ್ನಲ್ಲೆ ಬಂದಿದೆ. ಗುರುವಾರ ಇದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಸ್ಥಳಕ್ಕೆ ಜೆಸಿಬಿ ,ಹಿಟಾಚಿ ಮೂಲಕ ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ತಡೆದು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರು.

ಘಟಕ ನಿರ್ಮಿಸಿದರೆ ಜೀವ ಪಣಕ್ಕಿಡುತ್ತೇವೆ..!!!
ಬೇರೆ ಯಾವುದೋ ಗ್ರಾಮದ ಮಲತ್ಯಾಜ್ಯ ಘಟಕ ನಮ್ಮ ಗ್ರಾಮದಲ್ಲಿ ನಿರ್ಮಿಸಲು ಅವಕಾಶ ಕಲ್ಪಿಸಿದವರಾರು,ಇದು ಗೋಮಾಳ ಸಂಬಂಧಿಸಿದ ಸ್ಥಳವಾಗಿದ್ದು,ಪರಿಶುದ್ಧವಾದ ನಮ್ಮ ಗ್ರಾಮವನ್ನು ಮಲಿನಗೊಳಿಸಲು ಅವಕಾಶ ನೀಡಲಾರೆವು , ಶಾಲೆ,ಆಸ್ಪತ್ರೆ,ಅಂಗನವಾಡಿ ಒಂದು ಸಾವಿರಕ್ಕೂ ಅಧಿಕ ಮನೆಗಳಿದ್ದ ಈ ಭಾಗದಲ್ಲಿ ಇದಕ್ಕೆ ಅವಕಾಶ ನೀಡಲ್ಲ, ಬೇಕಿದ್ದರೆ ಜೀವವನ್ನು ಪಣಕ್ಕಿಡುತ್ತೇವೆ. ಘಟಕ ನಿರ್ಮಿಸಲು ಬೇಡೆವು ಎಂದು ಆಕ್ರೋಶ ಘೋಷಣೆ ಕೂಗಿದ ಗ್ರಾಮಸ್ಥರು ಏಕಾಏಕಿ ಸ್ಥಳಕ್ಕಾಗಮಿಸಿ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟವರಾರು ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿ ಈ ಬಗ್ಗೆ ಪಂಚಾಯತ್ ಪ್ರತಿನಿಧಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.

ಕಾಮಗಾರಿ ಕೈಗೆತ್ತಿಕೊಂಡರೆ ಹೋರಾಟ
ಒಂದೊಮ್ಮೆ ಈ ಭಾಗದಲ್ಲಿ ಮಲತ್ಯಾಜ್ಯ ಘಟಕ ನಿರ್ಮಿಸಲು ಮುಂದಾದರೆ ಪಟ್ಟಣಪಂಚಾಯತ್ ಎದುರು ಧರಣಿ ಕೂರುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಈ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯ ಉದಯ ಕುಮಾರ್ ಶೆಟ್ಟಿ,  ಪ್ರಸಾದ್ ಮೆಂಡನ್, ಶರತ್ ರಾಮ್ ಶೆಟ್ಟಿ, ಮಹಾಬಲ ಪೂಜಾರಿ, ಗುರುರಾಜ್ ಕಾಂಚನ್, ಅನಿಲ್ ಕುಮಾರ್ ಶೆಟ್ಟಿ , ಜೀನ್ ಶೆಟ್ಟಿ, ಸುಕುಮಾರ್ ಶೆಟ್ಟಿ, ವಡ್ಡರ್ಸೆ ಗ್ರಾಮಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ, ಕುಶಲ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *