ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ ಟೋಲ್  ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ

ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯು ನಿವೃತ್ತ ಯೋಧರೊಂದಿಗೆ ಟೋಲ್ ವಸೂಲು ಮಾಡುವಾಗ ಅನುಚಿತವಾಗಿ ನಡೆದುಕೊಂಡಿರುವುದು ಅತ್ಯಂತ ಖೇದಕರವಾಗಿದೆ. ದೇಶದ ಘನತೆಯನ್ನು ಎತ್ತಿ ಹಿಡಿಯುವ ಯೋಧರೊಂದಿಗೆ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಬಲವಂತವಾಗಿ ಟೋಲ್ ವಸೂಲು ಮಾಡಲು ಹೊರಟಿರುವುದು ಎಲ್ಲ ದೇಶಪ್ರೇಮಿಗಳಿಗೂ ಮಾಡಿರುವ ಅವಮಾನವಾಗಿದೆ. ಟೋಲ್ ಸಿಬ್ಬಂದಿಗೆ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ಬಾರಿ ವಿಷಾದದ ಸಂಗತಿಯಾಗಿದೆ.

ಇನ್ನೂ ಮುಂದಾದರೂ ಟೋಲ್ ಸಿಬ್ಬಂದಿಗಳಿಗೆ ಗೌರವಾನ್ವಿತ ಸೈನಿಕರು ಹಾಗೂ ಇತರ ನಾಗರಿಕರೊಂದಿಗೆ ಹೇಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿಯನ್ನು ನೀಡಲಾಯಿತು. ತಾವು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನೀಡಿರುವ ದೂರನ್ನು ಪರಿಶೀಲಿಸಿ ಸದ್ರಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಅನ್ಸರ್ ಅಹ್ಮದ್  ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಸಿದ್ದಣ್ಣ  ಎಸ್ ಪೂಜಾರಿ , ಸವಿತಾ, ಆಶಾ. ಅನುಷ ಪಳ್ಳಿ.  ಆನಂದ್ ಶೆಟ್ಟಿ. ಶಬೀರ್. ಉಮೇಶ್. ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *