ಕೋಟ:ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಇದೇ ಬರುವ ಮಾಚ್9 1.ರಂದು ಏಕಪವಿತ್ರ ನಾಗಮಂಡಲ ಉತ್ಸವ ಜರಗಲಿದ್ದು ಈ ಪ್ರಯುಕ್ತ ಇದರ ಪೂರ್ವಭಾವಿಸಭೆ ಕೋಟದ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಸೋಮವಾರ ಜರಗಿತು. ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಚರ್ಚೆಗಳು ಹಾಗೂ ಸಲಹೆಗಳು ಗ್ರಾಮಸ್ಥರಿಂದ ಸ್ವೀಕರಿಸಲಾಯಿತು.
ಧಾರ್ಮಿಕ ಸಭೆ , ಹದಿನಾಲ್ಕು ಗ್ರಾಮಗಳಿಂದ ಹೊರಕಾಣಿಕೆ ಸಮರ್ಪಣೆ ದಿನ ಫೆ.25,26,27ರಂದು ನಿಗದಿ ಮತ್ತು ಭೋಜನ ಶಾಲೆ ಸಿದ್ಧಪಡಿಸುವ ಕುರಿತು,ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಕೋಟ ಠಾಣಾ ಮೈದಾನ,ಮಾಂಗಲ್ಯ ಮಂದಿರ, ಶಾoಭವೀ ಶಾಲೆ ಮೈದಾನ ಉಪಯೋಗಿಸುವ ನಿರ್ಧಾರ ಕುರಿತು ವಿಸ್ತೃತ ಚರ್ಚೆ ನಡೆಸಿತು.
ದೇಗುಲದ ಟ್ರಸ್ಟ್ಗಳಾದ ಸುಭಾಷ್ ಶೆಟ್ಟಿ, ಶಿವ ಪೂಜಾರಿ, ಸುಧಾ ಪೂಜಾರಿ, ಜ್ಯೋತಿ ಡಿ ಕಾಂಚನ್, ಗಣೇಶ್ ನೆಲ್ಲಿಬೆಟ್ಟು, ಸುಬ್ರಾಯ ಜೋಗಿ, ರತನ್ ಐತಾಳ್ ಗ್ರಾಮದ ಪ್ರಮುಖರಾದ ಕೃಷ್ಣ ಕಾಂಚನ್, ಭುಜoಗ ಗುರಿಕಾರ, ಶಂಕರ್ ಕುಂದರ್, ಸತೀಶ್ ಎಚ್ ಕುಂದರ್, ಜ್ಯೋತಿ ಭರತ್ ಕುಮಾರ್ ಶೆಟ್ಟಿ, ರಮೇಶ್ ರಾವ್, ವಿಠ್ಠಲ್ ಪೂಜಾರಿ, ಮಹಾಬಲ ಹೇರ್ಳೆ ಹಾಗೂ ದೇಗುಲದ ಮಾಜಿ ಟ್ರಸ್ಟಿಗಳು , ಅರ್ಚಕ ಪ್ರತಿನಿಧಿಗಳು, ಸಿಬ್ಬಂದಿವರ್ಗ ಮತ್ತಿತರರು ಉಪಸ್ಥಿತರಿದ್ದರು. ಸಭೆಯನ್ನು ದೇಗುಲದ ಟ್ರಸ್ಟಿ ಚಂದ್ರ ಆಚಾರ್ ನಿರ್ವಹಿಸಿದರು. ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ವಂದಿಸಿದರು.
ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಇದೇ ಬರುವ ಮಾಚ್9 1.ರಂದು ಏಕಪವಿತ್ರ ನಾಗಮಂಡಲ ಉತ್ಸವದ ಇದರ ಪೂರ್ವಭಾವಿಸಭೆ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ಜರಗಿತು. ಸುಭಾಷ್ ಶೆಟ್ಟಿ, ಶಿವ ಪೂಜಾರಿ, ಸುಧಾ ಪೂಜಾರಿ, ಜ್ಯೋತಿ ಡಿ ಕಾಂಚನ್, ಗಣೇಶ್ ನೆಲ್ಲಿಬೆಟ್ಟು ಇದ್ದರು.












Leave a Reply