ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆಪರೇಷನ್ ಪರಾಕ್ರಮ ಭಾಗಿಯಾದ ಸೈನಿಕ ಶ್ಯಾಮರಾಜ್ ಗೆ ಟೋಲ್ ಸಿಬ್ಬಂದಿ ಅವಮಾನ ಖಂಡನೀಯ- ಐರೋಡಿ ವಿಠ್ಠಲ್ ಪೂಜಾರಿ

ಕೋಟ: ಸಾಸ್ತಾನದ ಕೆ.ಕೆ ಆರ್ ಕಂಪನಿ ನಿರ್ವಹಣೆಯ ಟೋಲ್  ಪ್ಲಾಜಾದಲ್ಲಿ  ನಿವೃತ್ತ ಯೋಧ ಶ್ಯಾಮರಾಜ್ ರವರನ್ನು ಟೋಲ್ ನಲ್ಲಿ ತಡೆದು ಅವಮಾನಿಸಿದ ಘಟನೆ ಖಂಡನೀಯ ಇದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ.

ಆಪರೇಷನ್ ಪರಾಕ್ರಮ್ ಭಾಗಿಯಾದ ಯೋಧರಿಗೆ ಈ ರೀತಿ ರಾತ್ರಿ ಹೊತ್ತಿನಲ್ಲಿ ತಡೆದು ವಿಲ್ಹ್ ಚೇರ್ ಮೂಲಕ ಹೊರ ನಿಲ್ಲಿಸಿ ಗುಂಡಾಗಿರಿ ರೀತಿಯಲ್ಲಿ ವರ್ತಿಸಿ ಅಗೌರವ ತೊರಿದೆ. ಈ ಬಗ್ಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಟೋಲ್ನನ ಕೆ.ಕೆ ಆರ್ ಕಂಪನಿಯ ಜಗನ್ಮೋಹನ ರೆಡ್ಡಿ ಹಾಗೂ ಬಾಬು ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಕೈಗೊಳ್ಳಲಿದ್ದೇವೆ.

ಐರೋಡಿ ವಿಠ್ಠಲ್ ಪೂಜಾರಿ ಮಾಜಿ ಪ್ರಧಾನ ಕಾರ್ಯದರ್ಶಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ

Leave a Reply

Your email address will not be published. Required fields are marked *