ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷಗಾನ ಅನುಸಾಲ್ವ ಗರ್ವಭಂಗ

ಕೋಟ:  ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟತೆಯನ್ನು ಹೊಂದಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರಿಂದ ಜ.17 ರಂದು ಅನುಸಾಲ್ವ ಗರ್ವಭಂಗ ಎಂಬ ಯಕ್ಷಗಾನ ಅಮಾಸೆಬೈಲ್ ನಲ್ಲಿ ಪ್ರದರ್ಶಿತಗೊಳ್ಳಲಿದೆ.

ಸಮಾಜ ಸೇವೆಯಲ್ಲಿ ಬಹುಮಾನ್ಯತೆ ಪಡೆದಿರುವ ಗೀತಾ ಎಚ್.ಎಸ್.ಎನ್. ಫೌಂಡೇಶನ್  ಕೋಟೇಶ್ವರ ಇವರು ಅಮಾಸೆಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲ್‌ನ ಎ.ಜಿ.ಕೊಡ್ಗಿ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ ಸಪ್ತ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8ಕ್ಕೆ ರಾಜಶೇಖರ ಹೆಬ್ಬಾರ್ ನಿರ್ದೇಶನದಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸರ್ವಶ್ರೀಗಳಾದ ಗಜೇಂದ್ರ ಶೆಟ್ಟಿ ಆಜ್ರಿ, ಕೇಶವ ಆಚಾರ್ ನೀಲಾವರ, ಚಂದ್ರಯ್ಯ ಆಚಾರ್ ಹಾಲಾಡಿ, ರಾಮಬಾಯರಿ ಕೂರಾಡಿ, ಶ್ರೀಕಾಂತ ಭಟ್ಟ ವಡ್ಡರ್ಸೆ, ಪ್ರಶಾಂತ ಮಯ್ಯ, ಶಿವಕುಮಾರ ಅಳಗೋಡ್, ಪಾರಂಪಳ್ಳಿ ವೈಕುಂಠ ಹೇರ್ಳೆ, ಶಿರಿಯಾರ ಅಶೋಕ ಆಚಾರ್, ವಿನಯ ಹಟ್ಟಿಯಂಗಡಿ ಭಾಗವಹಿಸಲಿದ್ದಾರೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *