ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚೆಲ್ಲೆಮಕ್ಕಿ- ನಾಗಾರಾಧನೆಯಿಂದ ಗ್ರಾಮ ಸುಭಿಕ್ಷೆ- ಡಾ.ವಿದ್ವಾನ್ ವಿಜಯ್ ಮಂಜರ್
ಚೆಲ್ಲೆಮಕ್ಕಿ ನಾಗಬನ ವರ್ಧಂತ್ಯುತ್ಸವ ಆಮಂತ್ರಣ ಬಿಡುಗಡೆಗೊಳಿಸಿ ಹೇಳಿಕೆ

ಕೋಟ: ನಾಗಬನಗಳು ಪರಿಸರ ಸಂರಕ್ಷಣೆಯ ಜತೆಗೆ ಗ್ರಾಮದ ಸುಭಿಕ್ಷೆಯ ಪ್ರತೀಕವಾಗಿದೆ ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.

ಸಾಸ್ತಾನದ ಚೆಲ್ಲೆಮಕ್ಕಿ ನಾಗಬನ ಇದರ ಪುನರ್ ನಿರ್ಮಾಣ ಜೀರ್ಣೋದ್ಧಾರ ಹಾಗೂ ವರ್ಧಂತ್ಯುತ್ಸವ 17ನೇ ವರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಹಿಂದೂ ಧಾರ್ಮಿಕ ಆಚರಣೆಗಳು ಧರ್ಮದ ತಳಹದಿಯನ್ನು ಗಟ್ಟಿಗೊಳಿಸುತ್ತಿದ್ದು ಇದಕ್ಕೆ ನಾಗಾರಾಧನೆ ಕೂಡಾ ಹೊರತಾಗಿಲ್ಲ ಎಂದರಲ್ಲದೆ ಪ್ರತಿಯೊಬ್ಬರಲ್ಲೂ ಧಾರ್ಮಿಕ ಜಾಗೃತಿ ಗಟ್ಟಿಗೊಳ್ಳಲಿ ಹಬ್ಬಹರಿದಿನಗಳು ಮನುಕುಲದ ಸಮೃದ್ಧಿ ಜೀವನಕ್ಕೆ ನಾಂದಿಯಾಗಲಿ ಎಂದು ಹಾರಿಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಅಂದ ಮಕ್ಕಳಿಗೆ ಶೈಕ್ಷಣಿಕ ಗುರು ಜತೆಗೆ ಯೋಗಗುರುಕುಲದ ವಿದ್ಯಾರ್ಥಿ ಯುಮಿ ಕೆನೇಕು ಸೇರಿದಂತೆ ಇತರರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಪಾಂಡೇಶ್ವರ ಯೋಗಗುರುಕುಲದ ಭವ್ಯ ವಿಜಯ ಮಂಜರ್, ಸಾಸ್ತಾನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಪಾಂಡೇಶ್ವರ, ಐರೋಡಿ ಹಂಗಾರಕಟ್ಟೆ ಮಾಬುಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆನಂದ್ ಗಾಣಿಗ , ಚೆಲ್ಲೆಮಕ್ಕಿ ನಾಗಬನದ ಪ್ರಮುಖರಾದ ದಿನಕರ ವಿ ರಾವ್, ಪರಮೇಶ್ವರ ಗಾಣಿಗ, ಸುರೇಶ್ ಗಾಣಿಗ, ಶೀನ ನಾಯಕ್, ವಿವೇಕ, ರಾಘವೇಂದ್ರ ಸೇರ್ವೆಗಾರ, ಕಮಿಟಿಯ ಪದಾಧಿಕಾರಿಗಳು ಸರ್ವ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರು ,ಯೋಗಗುರುಕುಲದ ವಿದೇಶಿ ಯೋಗಬಂಧುಗಳು ಉಪಸ್ಥಿತರಿದ್ದರು. ಇದೇ ವೇಳೆ ನಾಗಬನದ ಸಂಕ್ರಾತಿ ಉತ್ಸವದ ಅಂಗವಾಗಿ ಅಜಿತ್ ತುಂಗ ಧಾರ್ಮಿಕ ಕಾರ್ಯಗಳನ್ನು ನೆರವೆರಿಸಿದರು. ನಾಗಬನದ ಪ್ರಮುಖರಾದ ಗಣೇಶ್ ಜಿ ಕಾರ್ಯಕ್ರಮ ನಿರ್ವಹಿಸಿದರು.

ಸಾಸ್ತಾನದ ಚೆಲ್ಲೆಮಕ್ಕಿ ನಾಗಬನ ಇದರ ಪುನರ್ ನಿರ್ಮಾಣ ಜೀರ್ಣೋದ್ಧಾರ ಹಾಗೂ ವರ್ಧಂತ್ಯುತ್ಸವ 17ನೇ ವರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ಬಿಡುಗಡೆಗೊಳಿಸಿದರು. ಪಾಂಡೇಶ್ವರ ಯೋಗಗುರುಕುಲದ ಭವ್ಯ ವಿಜಯ ಮಂಜರ್, ಸಾಸ್ತಾನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಪಾಂಡೇಶ್ವರ, ಐರೋಡಿ ಹಂಗಾರಕಟ್ಟೆ ಮಾಬುಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆನಂದ್ ಗಾಣಿಗ. ಗಣೇಶ್ ಜಿ ಇದ್ದರು.

Leave a Reply

Your email address will not be published. Required fields are marked *