ಕೋಟ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಬಾಳ್ಕುದ್ರು ನಿವಾಸಿ ಶಂಕರ್ ಪೂಜಾರಿ ತೀವ್ರಗಾಯಗೊಂದು ಮೃತ ಪಟ್ಟಿದ್ದರು. ಮೃತರ ಪತ್ನಿ ಜಯಂತಿಯುವರು ಎಸ್ಸಿಡಿಸಿಸಿ ಬ್ಯಾಂಕ್‌ನ ನವೋದಯ ಸಂಫದ ಸಾಸ್ತಾನ ಶಾಖೆಯ ಮಾತ್ರಶ್ರೀ ಸಂಘದ ಸದಸ್ಯರಾಗಿದ್ದು ಸಂಘದ ನಿಯಮದಂತೆ ಮೃತರ ಪತ್ನಿಗೆ ಭವಿಷ್ಯದ ಹಿತದೃಷ್ಟಿಯಿಂದ ಒಂದು ಲಕ್ಷ ರೂಪಾಯಿ ಚೆಕ್‌ನ್ನು ಸಾಸ್ತಾನ ಎಸ್ಸಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಬ್ಯಾಂಕಿನ ಪ್ರಭಂದಕಿ ಗೀತಾ, ಮತ್ತು ಸುದರ್ಶನ್, ಜಗದೀಶ್, ಹಾಗೂ ಸಂಘದ ಅಧ್ಯಕ್ಷ ಪ್ರದೀಪ್, ಜ್ಯೋತಿ ಭಾಸ್ಕರ್ ಉಪಸ್ತಿತರಿದ್ದರು.
ಸಾಸ್ತಾನ- ಬೈಕ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಚೆಕ್ ಹಸ್ತಾಂತರ












Leave a Reply