ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ, ಪರಿಸರಸ್ನೇಹಿಯಾಗಿ ಬೆಳೆಸಿ ಸುಜಾತ ಬಾಯರಿ ಕರೆ
ಕೋಟ ಡಾ.ಶಿವರಾಮ ಕಾರಂತರು ಕಲಿತ ಶಾಲಾ ವಾರ್ಷಿಕೋತ್ಸವ ಸಂಭ್ರಮ ವಲ್ಲರಿ-2026

ಕೋಟ:  ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದರ ಜತೆಗೆ ಆರೋಗ್ಯವಂತ ಹಾಗೂ ಪರಿಸರಸ್ನೇಹಿಯಾಗಿ ಬೆಳೆಸಿ ಎಂದು  ಕೋಟ ಶಾಲೆಯ ಹಿಂದಿನ ವಿದ್ಯಾರ್ಥಿ ಸುಜಾತ ಬಾಯರಿ ಹೇಳಿದರು.

ಮಂಗಳವಾರ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಡಾ.ಕೆ.ಶಿವರಾಮ ಕಾರಂತ ಕಲಿತ ಶಾಲೆ) ಇಲ್ಲಿ ವಾರ್ಷಿಕೋತ್ಸವದ ವಲ್ಲರಿ 2026 ಕಾರ್ಯಕ್ರಮದಲ್ಲಿ ಸ್ವಸ್ತಿ ವಾಚನಗೈದು ಮಕ್ಕಳನ್ನು ಜಂಗ್ ಪುಡ್ ಗಳಿಂದ ರಕ್ಷಿಸಿ,ನಿಮ್ಮ ಮಕ್ಕಳ ಹುಟ್ಟುಹಬ್ಬವನ್ನು ಮನೆಯ ವಠಾರದಲ್ಲಿ ಗಿಡ ನೆಟ್ಟು ಬೆಳೆಸಿ ಆಗ ನೀವು ಈ ಪ್ರಕೃತಿಗೆ ಬಹುದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ, ಮೊಬೈಲ್ ನಿಂದ ಮಕ್ಕಳನ್ನು ರಕ್ಷಿಸಿ ವಿದ್ಯಾರ್ಥಿ ಜೀವವನ್ನು ಅರ್ಥಪೂರ್ಣವಾಗಿಸಿಕೊಳ್ಳಲು ಪೋಷಕರು ವಿಶೇಷ ಕಾಳಜಿ ವಹಿಸಲಿ ಎಂದು ಕರೆ ಕೊಟ್ಟರು.

ಸಭೆಯಲ್ಲಿಬಹುಮಾನ ವಿತರಣೆ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರಗಿದವು. ಶಾಲೆಯಿಂದ ವರ್ಗಾವಣೆಗೊಂಡ ಹಿರಿಯ ಶಿಕ್ಷಕಿ  ಪುಷ್ಭಲತಾ ಇವರನ್ನು ಗೌರವಿಸಲಾಯಿತು. ಶಾಲಾ ವಲರಿ ಹಸ್ತಪ್ರತಿಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಸ್ಥಳೀಯರಾದ ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ್ ಗಾಣಿಗ, ವಿದ್ಯಾರ್ಥಿ ಮುಖಂಡರಾದ ನಿತೀಶ್, ಅನುಜ್ಞಾ ಉಪಸ್ಥಿತರಿದ್ದರು. ದತ್ತಿನಿಧಿ ಗೌರವ ಶಿಕ್ಷಕಿ ಮಾನಸ, ಬಹುಮಾನ ಪಟ್ಟಿಯನ್ನು ಗೌರವ ಶಿಕ್ಷಕಿಯರಾದ ಶಾರದ ಸುಮಾ,ಶ್ರೀದೇವಿ ವಾಚಿಸಿದರು. ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ವರದಿ ವಾಚಿಸಿದರು.ಶಾಲಾ ಎಸ್ ಡಿ ಎಂಸಿ ಅಧ್ಯಕ್ಷೆ ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಾಲಾ ಹಿರಿಯ ಶಿಕ್ಷಕ ರೂಬಿ ಪಿಂಟೋ ನಿರೂಪಿಸಿದರು. ಸಹಶಿಕ್ಷಕಿ ವಿನಯ ವಂದಿಸಿದರು.

ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಡಾ.ಕೆ.ಶಿವರಾಮ ಕಾರಂತ ಕಲಿತ ಶಾಲೆ) ಇಲ್ಲಿ ವಾರ್ಷಿಕೋತ್ಸವದ ವಲ್ಲರಿ 2026 ಕಾರ್ಯಕ್ರಮದಲ್ಲಿ ಶಾಲಾ ವಲರಿ ಹಸ್ತಪ್ರತಿಯನ್ನು ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಭಟ್ ಬಿಡುಗಡೆಗೊಳಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಸ್ಥಳೀಯರಾದ ರಂಗಯ್ಯ ಅಡಿಗ, ಭಾರತಿ ಪೂಜಾರಿ, ಉದಯ್ ಗಾಣಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *