ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರೀ ದೇಗುಲದಲ್ಲಿ ಢಕ್ಕೆ ಬಲಿ, ತುಲಾಭಾರ ಸೇವೆ

ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿದೇಗುಲದಲ್ಲಿ ವಾರ್ಷಿಕ ವರ್ಧಂತಿ ಉತ್ಸ ಹಾಗೂ ಜಾತ್ರೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ವೈಭವದಿಂದ ಸಂಪನ್ನಗೊoಡಿತು.

ಶನಿವಾರ ರಾತ್ರಿ ಹಾಲು ಹಬ್ಬ ಗೆಂಡೋತ್ಸವ ಪೂರ್ಣಗೊಳಿಸಿಕೊಂಡರೇ,ಭಾನುವಾರ ಪೂರ್ವಾಹ್ನ ಢಕ್ಕೆ ಬಲಿ ಹಾಗೂ ತುಲಾಭಾರ ಸೇವಾ  ಕಾರ್ಯಕ್ರಮಗಳು ಜರಗಿದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇಗುಲಕ್ಕೆ ಆಗಮಿಸಿಸರತಿ ಸಾಲಿನಲ್ಲಿ ಶ್ರೀದೇವಿಯ ದರ್ಶನ ಪಡೆದುಕೊಂಡರು. ದೇವಿಯನ್ನು ವಿಶೇಷ ಪುಷ್ಭಗಳಿಂದ ಶೃಂಗರಿಸಲಾಗಿತ್ತು. ದೇಗುಲದ ಸರತಿ ಅರ್ಚಕ ಕೃಷ್ಣ ಜೋಗಿ ಭಕ್ತರ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೆರಿಸಿದರು.

ತುಲಾಭಾರ ಸೇವೆಯ ಅಂಗವಾಗಿ ದೇಗುಲದಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಸಮ್ಮುಖದಲ್ಲಿ ವೇ.ಮೂ ಸುಬ್ರಹ್ಮಣ್ಯ ಅಡಿಗ ಧಾರ್ಮಿಕ ವಿಧಿವಿಧಾನಗಳಂತೆ ದರ್ಶನ ಪಾತ್ರಿಗಳಾದ ಕೋರ್ಗಿ ಸುರೇಶ್ ಜೋಗಿ, ಉದಯ ಜೋಗಿ ಕೋಟ ರಾಷ್ಟೀಯ ಹೆದ್ದಾರಿವರೆಗೆ ನೆರದಿದ್ದ ಭಕ್ತರೊಂದಿಗೆ ಸಂಚರಿಸಿ ಪುಷ್ಭ ಪ್ರಸಾದವನ್ನು ವಿವಿಧ ದಿಕ್ಕಿನಲ್ಲಿ ಇರಿಸಿದರು. ಸುಮಾರು ಮುನ್ನೂರಕ್ಕೂ ಅಧಿಕ ತುಲಾಭಾರ ಸೇವಾರ್ಥಿಗಳು ತಮ್ಮ ಹರಕೆಯನ್ನು ತಾಯಿಗೆ ಸಮರ್ಪಿಸಿದರು.

ದೇಗುಲದ ಟ್ರಸ್ಟಿಗಳಾದ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ಡಿ ಕಾಂಚನ್, ಚoದ್ರ ಆಚಾರ್, ಸುಬ್ರಾಯ ಜೋಗಿ , ರತನ್ ಐತಾಳ್, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ, ಸುಂದರ್ ಕಾರ್ಕಡ,bಸುಬ್ರಾಯ ಜೋಗಿ, ಸತೀಶ್ ಹೆಗ್ಡೆ, ಸುಶೀಲ ಸೋಮಶೇಖರ್, ಸ್ಥಳೀಯರಾದ ದೇವದಾಸ ಕಾಂಚನ್, ಭುಜoಗ ಗುರಿಕಾರ, ಶೇವಧಿ ಸುರೇಶ್ ಗಾಣಿಗ, ರವೀಂದ್ರ ಜೋಗಿ, ದೇಗುಲದ ಅರ್ಚಕರಾದ ರೂಪೇಶ್ ಜೋಗಿ, ಅಮೃತ್ ಜೋಗಿ, ದಾಮೋದರ ಜೋಗಿ, ಗಣೇಶ್ ಜೋಗಿ, ಸಂತೋಷ್ ಜೋಗಿ , ಅಶ್ವಥ್ ಜೋಗಿ  ಸೇರಿದಂತೆ ಹಲವರಾರು ಮಂದಿ ಉಪಸ್ಥಿತರಿದ್ದರು.ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಾರ್ಷಿಕ ವರ್ಧಂತಿ ಉತ್ಸ ಹಾಗೂ ಜಾತ್ರೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ವೈಭವದಿಂದ ಸಂಪನ್ನಗೊoಡಿತು. ದೇಗುಲದಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್, ದೇಗುಲದ ಟ್ರಸ್ಟಿಗಳಾದ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ಡಿ ಕಾಂಚನ್, ಚoದ್ರ ಆಚಾರ್, ಸುಬ್ರಾಯ ಜೋಗಿ , ರತನ್ ಐತಾಳ್, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ ಇದ್ದರು.

Leave a Reply

Your email address will not be published. Required fields are marked *