ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರೀ ದೇಗುಲದ ವಾರ್ಷಿಕ ಗೆಂಡೋತ್ಸವ ಸಂಪನ್ನ

ಕೋಟ: ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಹಾಲು ಹಬ್ಬ ಗೆಂಡೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊoಡಿತು.
ದೇಗುಲದಲ್ಲಿ ನೆರದಿದ್ದ ಸಾವಿರಾರು ಭಕ್ತಾಧಿಗಳು ಹರಕೆ ರೂಪದಲ್ಲಿ ಗೆಂಡೋತ್ಸವ ಕಾರ್ಯದಲ್ಲಿ ಭಾಗಿಯಾದರು.
ದೇವಿ ಅಮೃತೇಶ್ವರೀ ಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ತಾಯಿಯನ್ನು ಸಂದರ್ಶಿಸಿ ಶ್ರೀನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿ ನಂತರ ಭಕ್ತಾಧಿಗಳು ಹರಕೆ ಸಂದಾಯಗೊಳಿಸಿಕೊoಡರು.

ದೇಗುಲದ ಅರ್ಚಕ ವರ್ಗ ಜೋಗಿ ಸಮುದಾಯ ಈ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಮoಡಳಿಯ ಸದಸ್ಯರಾದ ರತನ್ ಐತಾಳ್, ಸುಭಾಶ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ ಕಾಂಚನ್, ಸುಧಾ ಎ ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಮತ್ತು ಮಾಜಿ ಟ್ರಸ್ಟಿಗಳು, ಗ್ರಾಮದ ಪ್ರಮುಖರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊoಡಿತು.

ರಾತ್ರಿ ಮಹಾಅನ್ನಸಂತರ್ಪಣೆ ಸಾವಿರಾರು ಭಕ್ತಾಧಿಗಳು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.ವಿವಿಧ ಸಂಘ ಸoಸ್ಥೆಗಳು ಗೆಂಡೋತ್ಸವ ಸ್ವಯಂ ಸೇವಕರಾಗಿ ಪಾಲ್ಗೊಂಡರು. ಗೆoಡದ ಧಾರ್ಮಿಕ ಕಾರ್ಯವನ್ನು ಶಂಕರ್ ಆಚಾರ್, ನರಸಿಂಹ ಆಚಾರ್, ಬಾಬುರಾಯ ಆಚಾರ್, ಮಂಜುನಾಥ್ ಆಚಾರ್ ನೆರವೆರಿಸಿದರು.

Leave a Reply

Your email address will not be published. Required fields are marked *