ಕೋಟ: ಇಲ್ಲಿನ ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಇದರ ವತಿಯಿಂದ ಹೊಸ ವರ್ಷದ ಆರಂಭದಲ್ಲಿ ವಿವೇಕ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ವಾಲಿಬಾಲ್ ಮತ್ತು ತ್ರೋಬಾಲ್ಗಳ ಪಂದ್ಯಾಟಕೂಟವನ್ನು ಏರ್ಪಡಿಸಲಾಗಿತ್ತು.
ಸೌಹಾರ್ದ ಪಂದ್ಯಾಟಕೂಟವನ್ನು ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಮಹಾಬಲೇಶ್ವರ ಆಚಾರ್ಯ ಇವರು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಉಲ್ಲಾಸ ದೊರಕುತ್ತದೆ, ವಿದ್ಯಾರ್ಥಿಗಳು ಲವಲವಿಕೆಯಿಂದ ಇದ್ದು ಆರೋಗ್ಯ ದೊಂದಿಗೆ ತಮ್ಮ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಆದ್ದರಿಂದ ಕ್ರೀಡಾ ಸ್ಪೂರ್ತಿಯಿಂದ ಭಾಗ ವಹಿಸಬೇಕೆಂದು ಕರೆ ನೀಡಿದರು.
ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಪ್ರಸ್ತುತ ಅಧ್ಯಕ್ಷ ಚೆಂಪಿ ರಮಾನಂದ ಭಟ್ ಇವರು ಪರಿಚಯಿಸಿ ಸ್ವಾಗತಿಸಿದರು. ಕೋಟ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿ ಪಿ ಮಂಜುನಾಥ ಉಪಾಧ್ಯ ಉಪಸ್ಥಿತರಿದ್ದರು. ಹಿಂದಿನ ವಿದ್ಯಾರ್ಥಿ ಸಂಘದ
ಸoಘದ ಕಾರ್ಯದರ್ಶಿ ಸುಧಾಕರ್ ಪಿ, , ಶ್ರೀಪತಿ ಹೇರಳೆ, ವೈ ಸದಾ ರಾಮ ಹೇರಳೆ, ಕೆ ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ, ಮುಖ್ಯೋಪಾಧ್ಯಾಯರಾದ ಪ್ರೀತಿ ರೇಖಾ, ಪ್ರೇಮಾನಂದ ಉಪಸ್ಥಿತರಿದ್ದರು. ವೆಂಕಟೇಶ ಉಡುಪ ವಂದಿಸಿ, ನರೇಂದ್ರ ಕುಮಾರ್ ನಿರ್ವಹಿಸಿದರು. ಪಂದ್ಯಾಟದ ನಿರ್ಣಾಯಕರಾಗಿ ವಿಖ್ಯಾತ ಕಂಡ್ಲೂರು ಭಾಗವಹಿಸಿದ್ದರು.
ಬಾಲಕರಿಗಾಗಿ ಏರ್ಪಡಿಸಿದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು, ಬಾಲಕಿಯರಿಗಾಗಿ ಏರ್ಪಡಿಸಿದ ತ್ರೋಬಾಲ್ ಸ್ಪರ್ಧೆಯಲ್ಲಿ ಆಂಗ್ಲಮಾಧ್ಯಮದ ವಿದ್ಯಾರ್ಥಿಗಳು ವಿಜೇತರಾದರು . ಸಂಘದ ವತಿಯಿಂದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಇಲ್ಲಿನ ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಇದರ ವತಿಯಿಂದ ಹೊಸ ವರ್ಷದ ಆರಂಭದಲ್ಲಿ ವಿವೇಕ ವಿದ್ಯಾಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ವಾಲಿಬಾಲ್ ಮತ್ತು ತ್ರೋಬಾಲ್ಗಳ ಸೌಹಾರ್ದ ಪಂದ್ಯಾಟ ಕೂಟವನ್ನು ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಮಹಾಬಲೇಶ್ವರ ಆಚಾರ್ಯ ಇವರು ಉದ್ಘಾಟಿಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಪ್ರಸ್ತುತ ಅಧ್ಯಕ್ಷ ಚೆಂಪಿ ರಮಾನಂದ ಭಟ್, ಜೊತೆ ಕಾರ್ಯದರ್ಶಿ ಪಿ ಮಂಜುನಾಥ ಉಪಾಧ್ಯ ಉಪಸ್ಥಿತರಿದ್ದರು. ಹಿಂದಿನ ವಿದ್ಯಾರ್ಥಿ ಸಂಘದ
ಸoಘದ ಕಾರ್ಯದರ್ಶಿ ಸುಧಾಕರ್ ಪಿ, ಶ್ರೀಪತಿ ಹೇರಳೆ, ವೈ ಸದಾ ರಾಮ ಹೇರಳೆ, ಕೆ ತಾರಾನಾಥ ಹೊಳ್ಳ ಉಪಸ್ಥಿತರಿದ್ದರು.












Leave a Reply