ಕೋಟ: ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆಯ ಆಶ್ರಯದಲ್ಲಿ ಲಯನ್ಸ್ ಜಿಲ್ಲೆ 317C, ರೀಜನ್ ವಿ ಎರಡನೆ ಝೋನ್ ಅಡ್ವೆöಸರ್ ಹಾಗೂ ಸೋಷಿಯಲ್ ಕಾರ್ಯಕ್ರಮದಡಿ ಕಾರ್ಯಕ್ರಮ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ಇತ್ತೀಚಿಗೆ ಜರಗಿತು.
ಲಯನ್ಸ್ ವಲಯಾಧ್ಯಕ್ಷರಾದ ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರಿನ ಸಂತೋಷ್ ಕುಮಾರ್ ಶೆಟ್ಟಿ ಝೋನ್ ಅಡ್ವೆöಸರ್ ಹಾಗೂ ಸಾಮಾಜಿಕ ಕಾರ್ಯಕ್ರಮದಡಿ ಸಭೆಯನ್ನು ನೆರವೇರಿಸಿ ಮಾತನಾಡಿ ಒಳ್ಳೆಯ ಸದಸ್ಯರನ್ನು ಹೊಂದಿದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಸಾಕಸ್ಟು ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಕ್ಲಬ್ ಆಗಿ ಮೂಡಿ ಬಂದಿದ್ದು, ಈ ಕ್ಲಬ್ ಗೆ ಉತ್ತಮ ಭವಿಷ್ಯ ಇದೆ, ಇದೇ ರೀತಿಯ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊoಡು ಹೋಗಲಿ ಎಂದು ಝೋನ್ ಸೋಷಿಯಲ್ ಕಾರ್ಯಕ್ರಮದಲ್ಲಿ ಹೇಳಿದರು.
ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಬ್ರಹ್ಮಾವರ-ಬಾರ್ಕೂರಿನ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಹೆಗ್ಡೆ, ಲಯನ್ಸ್ ಕ್ಲಬ್ ತೆಕ್ಕಟ್ಟೆಯ ಅಧ್ಯಕ್ಷ ಕೆದೂರು ಸೀತಾರಾಮ್ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಕೋಟ-ಗಿಳಿಯಾರು ಇದರ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ಜಡ್ಡಾಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಬ್ರಹ್ಮಾವರದ ಕಾರ್ಯದರ್ಶಿ ಲಯನ್ ವಂಡಾರು ಪ್ರದೀಪ್ ಶೆಟ್ಟಿ, ಲಯನ್ಸ್ ತೆಕ್ಕಟ್ಟೆಯ ಕಾರ್ಯದರ್ಶಿ ಧರ್ಮರಾಜ್ ಮುದಲಿಯಾರ್, ಲಯನ್ಸ್ ಕ್ಲಬ್ ಕೋಟ ಗಿಳಿಯಾರು ಇದರ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆಯ ಕಾರ್ಯದರ್ಶಿ ಚಂದ್ರ ಶೆಟ್ಟಿ ಯಾಳಕ್ಲು ತಮ್ಮ ಕ್ಲಬ್ನ ವರದಿಯನ್ನು ವಾಚಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ವಿಸ್ತರ್ಣಾಧ್ಯಕ್ಷ ಕೋಟೇಶ್ವರ ಲಯನ್ಸ್ ಕ್ಲಬ್ನ ದಿನಕರ್ ಶೆಟ್ಟಿ ಎಮ್ ಶುಭಾಶಂಸನೆಗೈದರು. ಸೇವಾ ಕಾರ್ಯಕ್ರಮದ ಅಂಗವಾಗಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊತ್ತಾಡಿಯ ಒಬ್ಬರಿಗೆ ಆಸ್ಪತ್ರೆಯ ಖರ್ಚುವೆಚ್ಚದ ಕಿರು ಧನ ಸಹಾಯ ಮಾಡಲಾಯಿತು.
ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಕಲ್ಕಟ್ಟೆ ರಾಜಾರಾಮ್ ಶೆಟ್ಟಿ ಮುಖ್ಯ ಅತಿಥಿ ವಲಯಾಧ್ಯಕ್ಷ ಬಿ. ಸಂತೋಷ್ ಕುಮಾರ್ ಶೆಟ್ಟಿ ಯವರ ಪರಿಚಯ ವಾಚಿಸಿದರು. ನ್ಯಾಯವಾದಿ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಫ್ಲಾಗ್ ಸೆಲ್ಯುಟೇಷನ್ ವಾಚಿಸಿದರು. ಲಯನ್ ಕಾವಡಿ ಉಲ್ಲಾಸ್ ಶೆಟ್ಟಿ ಲಯನ್ ಕೋಡ್ ಆಫ್ ಕಂಡಕ್ಟ್ ವಾಚಿಸಿದರು. ಇದೇ ವೇಳೆ ಇತ್ತೀಚೆಗೆ ಲಯನ್ಸ್ ಜಿಲ್ಲಾ ಮಟ್ಟದಲ್ಲಿ ನಡೆದ ಲಯನ್ಸ್ ಜಿಲ್ಲಾ ಕ್ರೀಡಾಕೂಟದಲ್ಲಿ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಲಯನ್ಸ್ ಜಿಲ್ಲಾ ಚಾಂಪಿಯನ್ ಆಗಿ ಮೂಡಿ ಬರಲು ಕಾರಣೀಕರ್ತರಾದ ಎಲ್ಲಾ ಲಯನ್ಸ್ ಕ್ರೀಡಾಳುಗಳನ್ನು ಗುರುತಿಸಲಾಯಿತು.
ಇತ್ತೀಚೆಗೆ ನಡೆದ, ಬನ್ನಾಡಿ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಲಯನ್ಸ್ ಕ್ಲಬ್ ನ ಸದಸ್ಯರಾದ ಕೊತ್ತಾಡಿ ಅಜಿತ್ ಕುಮಾರ್ ಶೆಟ್ಟಿ ಯವರನ್ನು ಗೌರವಿಸಲಾಯಿತು. ರಾಜೀವ್ ಶೆಟ್ಟಿ ಅಚ್ಲಾಡಿ, ಶೇಖರ್ ಹೆಗ್ಡೆ ಕೂರಾಡಿ, ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಕಾವಡಿ ಉಲ್ಲಾಸ್ ಶೆಟ್ಟಿ ಹಾಗೂ ಸುದೇಶ್ ಶೆಟ್ಟಿ ಶಾನಾಡಿ ಕಾರ್ಯಕ್ರಮದ ಹೋಸ್ಟ್ ಗಳಾಗಿದ್ದರು.ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಕೋಶಾಧಿಕಾರಿ ನಿತೀಶ್ ಆಚಾರ್ ವಂದಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆಯ ಆಶ್ರಯದಲ್ಲಿ ಲಯನ್ಸ್ ಜಿಲ್ಲೆ 317C, ರೀಜನ್ ವಿ ಎರಡನೆ ಝೋನ್ ಅಡ್ವೆöÊಸರ್ ಹಾಗೂ ಸೋಷಿಯಲ್ ಕಾರ್ಯಕ್ರಮದಡಿ ಕಾರ್ಯಕ್ರಮ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ಇತ್ತೀಚಿಗೆ ಜರಗಿತು. ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ , ಲಯನ್ಸ್ ಕ್ಲಬ್ ಬ್ರಹ್ಮಾವರದ ಕಾರ್ಯದರ್ಶಿ ವಂಡಾರು ಪ್ರದೀಪ್ ಶೆಟ್ಟಿ, ಲಯನ್ಸ್ ತೆಕ್ಕಟ್ಟೆಯ ಕಾರ್ಯದರ್ಶಿ ಧರ್ಮರಾಜ್ ಮುದಲಿಯಾರ್, ಲಯನ್ಸ್ ಕ್ಲಬ್ ಕೋಟ ಗಿಳಿಯಾರು ಇದರ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ಇದ್ದರು.












Leave a Reply