ಕೋಟ: ಇಂಡಿಕಾ ಕಲಾಬಳಗ ಗ್ರಾಮೀಣ ಕರಾವಳಿ ಭಾಗದ ಸಂತೋಷದ ಸಂಭ್ರಮವನ್ನು ನಿರಂತರಗೊಳಿಸಲಿ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ ಕುಂದರ್ ಹೇಳಿದರು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಮಂಗಳವಾರ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಇದರ ಇಂಡಿಕಾ ಸಂಭ್ರಮ 2026 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಸದಾ ಸಾಮಾಜಿಕ ಸಾಂಸ್ಕೃತಿಕ ಚಿಂತಕ ಸಂತೋಷ್ ಕುಮಾರ್ ಹುಟ್ಟುಹಾಕಿ ಎಲ್ಲರನ್ನು ಅಗಲಿದ್ದಾರೆ ಅವರ ಹೆಸರನ್ನು ಈ ಬಳಗದ ನಿರಂತರ ಸಾಮಾಜಿಕ ಕಾರ್ಯದ ಮೂಲಕ ಜೀವಂತವಾಗಿಸೋಣ ಎಂದು ಶುಭಹಾರೈಸಿದರು.
ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ,ಶಿವ ಪೂಜಾರಿ ಮಣೂರು, ಕೋಟ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ, ಸಾಮಾಜಿಕ ಚಿಂತಕ ಸೋಮಶೇಖರ್ ಕದ್ರಿಕಟ್ಟು, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಸಂತೋಷ್ ತಿಂಗಳಾಯ , ಪಂಚವರ್ಣ ಯುವಕಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಬಳಗದ ಪ್ರಮುಖರಾದ ನಾಗರಾಜ್ ಪಡುಕರೆ, ನಾಗೇಶ್ ಪಡುಕರೆ, ಪ್ರಶಾಂತ್ ಪಡುಕರೆ ಉಪಸ್ಥಿತರಿದ್ದರು. ಬಳಗದ ಪ್ರಮುಖರಾದ ಸಂತೋಷ್ ಮೇಸ್ಟ್ರು ವಂದಿಸಿದರು, ಸಂಚಾಲಕ ಪ್ರಭಾಕರ್ ಪಡುಕರೆ ಸ್ವಾಗತಿಸಿ ನಿರೂಪಿಸಿದರು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಮಂಗಳವಾರ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ ಇದರ ಇಂಡಿಕಾ ಸಂಭ್ರಮ 2026 ಕಾರ್ಯಕ್ರಮದ ಪೋಸ್ಟರ್‌ನ್ನು ಕೋಟದ ಧರ್ಮರತ್ನಾಕರ ಆನಂದ್ ಸಿ ಕುಂದರ್ ಬಿಡುಗಡೆಗೊಳಿಸಿದರು. ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಶಿವ ಪೂಜಾರಿ ಮಣೂರು, ಕೋಟ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ, ಸಾಮಾಜಿಕ ಚಿಂತಕ ಸೋಮಶೇಖರ್ ಕದ್ರಿಕಟ್ಟು , ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ ಇದ್ದರು.












Leave a Reply