ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ – ಸ್ನಾನ ಗೃಹ ಇಣುಕಿ ಎಸ್ಕೇಪ್ ಪ್ರಕರಣ

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೆಡಿಯೊರ್ವ ಸ್ನಾನಗೃಹ ಇಣುಕಿ ಎಸ್ಟೇಪ್ ಆದ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ.

ಇಲ್ಲಿನ ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದ ಸೋಮವಾರ ಒಂದು ಮನೆಯಲ್ಲಿ ಸಂಜೆ ಹೊತ್ತಿನಲ್ಲಿ ಒರ್ವಾಕೆ ಸ್ನಾನಗೈಯುತ್ತಿರುವ ಸಂದರ್ಭದಲ್ಲಿ ಸ್ನಾನಗೃಹದ ಹಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯುವ ಸಂದರ್ಭದಲ್ಲಿ ಆಕೆ ಕಿರುಚಿದ ಹಿನ್ನಲ್ಲೆಯಲ್ಲಿ ಆತ ಅಲ್ಲಿಂದ ಕಾಲ್ಕಿತ್ತಿದ್ದು ಪ್ರಕರಣ ಕೋಟ ಠಾಣೆ ಮೆಟ್ಟಿಲೆರಿದೆ ಅದಾದ ಬಳಿಕ ಮಂಗಳವಾರ ಪಾಂಡೇಶ್ವರ ಮುಖ್ಯ ರಸ್ತೆ  ಸಮೀಪವಿರುವ ಮನೆಯೊಂದರ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಕಿಟಕಿ ಇಣುಕಿ ಪರಾರಿಯಾಗಿದ್ದಾ‌ನೆ ಆತನಿಗಾಗಿ ಕೋಟ ಪೋಲಿಸರು ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ.

ಆತನನ್ನು ಹುಡುಕಿ ಬಂದಿಸಿ ಆಗ್ರಹ:
ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವನ್ನು ಕೋಟ ಪೋಲಿಸರು ಶೀಘ್ರದಲ್ಲಿ ಹಿಡಿದು ಬಂದಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಮನೆಯ ಸುತ್ತಮುತ್ತ ಭಯ ವಾತಾವರಣ ಸೃಷ್ಟಿಯಾಗಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಗಮನಕ್ಕೆ ಬಂದಿದೆ.
ಈ ಸಮಸ್ಯೆ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿ ಆತನಿಗಾಗಿ ಪೋಲಿಸ್ ಇಲಾಖೆ ಬಲೆ ಬಿಸಲಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *