ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಹಬ್ಬದ ಆಮಂತ್ರಣ ಪತ್ರಿಕೆಯ ಬಿಡುಗಡೆ

ಕೋಟ: ಕ್ಷೇತ್ರ ಸಾಲಿಗ್ರಾಮದ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವರ ಸನ್ನಿಧಿಯಲ್ಲಿ ಭಾನುವಾರ ಮಹಾಪೂಜೆಯ ಪ್ರಸನ್ನ ಕಾಲದಲ್ಲಿ ಸಾಲಿಗ್ರಾಮ ಹಬ್ಬದ 2026ರ ಆಮಂತ್ರಣ ಪತ್ರಿಕೆಯನ್ನು ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ದಂಪತಿಗಳು ಆಮಂತ್ರಣ ಪತ್ರಿಕೆಯನ್ನು ಶ್ರೀದೇವರಿಗೆ ಸಮರ್ಪಿಸಿ ಬಿಡುಗಡೆಗೊಳಿಸಿದರು. ಮಾತನಾಡಿದ ಡಾ.ಕಾರಂತರು ಪರಿಸರದಲ್ಲಿ ನಾಡ ಹಬ್ಬದ ರೀತಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಡುವ ಹಬ್ಬದ ರೂಪುರೇಷೆಗಳನ್ನು ಸ್ಕೂಲವಾಗಿ ವಿವರಿಸುತ್ತ ಆಸ್ತಿಕ ಬಂಧುಗಳು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಹ್ವಾನಿಸಿದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ, ಸದಸ್ಯ ಮತ್ತು ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಪಿ.ಸದಾಶಿವ ಐತಾಳ ಉಪಸ್ಥಿತರಿದ್ದರು. ಕ್ಷೇತ್ರ ಸಾಲಿಗ್ರಾಮದ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ದೇವರ ಸನ್ನಿಧಿಯಲ್ಲಿ ಭಾನುವಾರ ಮಹಾಪೂಜೆಯ ಪ್ರಸನ್ನ ಕಾಲದಲ್ಲಿ ಸಾಲಿಗ್ರಾಮ ಹಬ್ಬದ 2026ರ ಆಮಂತ್ರಣ ಪತ್ರಿಕೆಯನ್ನು ಸಾಮೂಹಿಕ ಫಲ ಪ್ರಾರ್ಥನೆಯೊಂದಿಗೆ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು.

Leave a Reply

Your email address will not be published. Required fields are marked *