ಕೋಟ: ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲಾ ಸಮೃದ್ಧಿ ಇಕೋ-ಕ್ಲಬ್ ವತಿಯಿಂದ ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವಿನ್ಯತೆ – ವಿಚಾರ ಸಂಕೀರ್ಣ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ಜರಗಿತು.
ಐಐಟಿ ಖರಗ್‌ಪುರ ಇಲ್ಲಿನ ಬಾಹ್ಯಾಕಾಶ ವಿಭಾಗದ ಇಂಜಿನಿಯರ್ ಪ್ರಣಮ್ಯ ಜಿ. ಹೆಚ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಕಲಿಕಾ ಪ್ರಕ್ರಿಯೆಯಲ್ಲಿ ಪ್ರೌಢ ಶಿಕ್ಷಣ ಹಂತ ಆಸಕ್ತಿ ಆಧರಿಸಿ ಕ್ಷೇತ್ರ ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಅದರಲ್ಲಿ ವಿವಿಧ ವಿಭಾಗಗಳ ಆರಿಸಿಕೊಳ್ಳುವಲ್ಲಿ ಒಂದಿಷ್ಟು ಜ್ಞಾನ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣದೊಂದಿಗೆ ಮಾಹಿತಿ ಕಾರ್ಯಗಾರ ಪರಿಣಾಮಕಾರಿ, ಶಿಕ್ಷಣ ವಿಭಾಗದಲ್ಲಿ ವಿಜ್ಞಾನ ಮತ್ತು ನಾವಿನ್ಯತೆಯ ಕುರಿತಾಗಿ ವಿಚಾರ ಸಂಕೀರ್ಣ ನಡೆಯಿತು.
ಕೃತಕ ಬುದ್ಧಿ ಇವತ್ತು ಎಲ್ಲಾ ವಿಧಾನದಲ್ಲಿ ಆವರಿಸಿಕೊಂಡಿರುವ ಕ್ಷೇತ್ರವಾಗಿದೆ. ಪ್ರೌಢಹಂತದ ನಂತರ ಮುಂದಿನ ಹಂತದಲ್ಲಿ ವಿಷಯ ಆಯ್ಕೆಯ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮಾಹಿತಿ ಅಗತ್ಯ ಎಂದರಲ್ಲದೆ ಕಲಿಕೆ ಎನ್ನುವುದು ಆಸಕ್ತಿಯಿಂದ ನಡೆಯಬೇಕಾದರೆ ಗುರಿಯನ್ನು ಮುಂದಿಟ್ಟು ಶ್ರಮವಹಿಸಿ ಅಭ್ಯಾಸ ನಡೆಸಬೇಕು ಎನ್ನುವುದನ್ನು, ಭವಿಷ್ಯದ ಉದ್ದೇಶ ವಿದ್ಯಾರ್ಥಿಗಳಲ್ಲಿ ಏನಾಗಬೇಕು ಎನ್ನುವ ಪ್ರಶ್ನೆ ಕೇಳುವ ಮೂಲಕ ಉಪಯುಕ್ತ ಮಾಹಿತಿ ನೀಡಿದರು. ವಿಜ್ಞಾನ ಬದುಕಿನ ಅವಿಭಾಜ್ಯ ಅಂಗ ಹೊಸ ಹೊಸ ಕಲ್ಪನೆಗೆ ರೆಕ್ಕೆ ಕಟ್ಟಬಲ್ಲ ಕ್ಷೇತ್ರ ಹಾಗಾಗಿ ಶಾಲಾ ಹಂತದಲ್ಲಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕು ಎಂದು ಸಂವಾದ ಮತ್ತು ಚರ್ಚೆ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸಹಶಿಕ್ಷಕರಾದ ರಾಮ್ ದಾಸ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಇಕೋ-ಕ್ಲಬ್ ಅಧ್ಯಕ್ಷೆ ಶಮಿತಾ , ಶಿಕ್ಷಕರಾದ ಚಂದ್ರಶೇಖರ್ ಶೆಟ್ಟಿ , ರಾಜೀವ್, ರೂಪ ಇವರು ಉಪಸ್ಥಿತಿ ಇದ್ದರು. ಶಿಕ್ಷಕ ಹೆಸರಿಯ ಕಾರ್ಯಕ್ರಮ ನಿರೂಪಿಸಿದರು. ಇಕೋ-ಕ್ಲಬ್ ನೋಡೆಲ್ ಶಿಕ್ಷಕಿ ಅನುಪಮ ವಂದಿಸಿದದರು .
ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲಾ ಸಮೃದ್ಧಿ ಇಕೋ-ಕ್ಲಬ್ ವತಿಯಿಂದ ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವಿನ್ಯತೆ ವಿಚಾರ ಸಂಕೀರ್ಣ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಐಐಟಿ ಖರಗ್‌ಪುರ ಇಲ್ಲಿನ ಬಾಹ್ಯಾಕಾಶ ವಿಭಾಗದ ಇಂಜಿನಿಯರ್ ಪ್ರಣಮ್ಯ ಜಿ. ಹೆಚ್, ಸಂಸ್ಥೆಯ ಹಿರಿಯ ಸಹಶಿಕ್ಷಕರಾದ ರಾಮ್ ದಾಸ್ ನಾಯಕ್, ಇಕೋ-ಕ್ಲಬ್ ನೋಡೆಲ್ ಶಿಕ್ಷಕಿ ಅನುಪಮ ಇದ್ದರು.












Leave a Reply