ಕೋಟ: ಹೊದ್ರಾಳಿ ಸುಬ್ಬಣ್ಣ ನಾಗರಾಜ್ ಹಾಗೂ ಧರ್ಮ ಪತ್ನಿ ಮೀನಾಕ್ಷಿ ನಾಗರಾಜ್ ದಂಪತಿಗಳಿoದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ನೂತನವಾಗಿ ಸಾಗುವಾನಿ ಮರದಿಂದ ನಿರ್ಮಿಸಲ್ಪಟ್ಟ ದಾರು ಶಿಲ್ಪವನ್ನು ಶ್ರೀ ದೇವರಿಗೆ ಸಮರ್ಪಣಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ದಾನಿಗಳಾದ ದಂಪತಿಗಳು ಸ್ಥಳೀಯ ಕೋಟೇಶ್ವರದ ಹೊದ್ರಾಳಿ ನಿವಾಸಿಗಳಾಗಿದ್ದು ಬೆಂಗಳೂರಿನಲ್ಲಿ ಆನೆಗುಡ್ಡೆ ಶ್ರೀ ವಿನಾಯಕನ ಅನುಗ್ರಹದಿಂದಲೇ ಎವಿಯೇಷನ್ ಟ್ರಾವೆಲ್ಸ್ ಎನ್ನುವ ಉದ್ಯಮವನ್ನು ನಡೆಸುತ್ತಿದ್ದು ಬಂದ ಲಾಭಾಂಶದಲ್ಲಿ ಶ್ರೀ ದೇವರಿಗೆ ಯತಾಶಕ್ತಿ ದೇಣಿಗೆಯನ್ನು ನೀಡುತ್ತಿರುವುದು ಗಮನಾರ್ಹ ಅಂಶವಾವಾಗಿದೆ. ದೇಗುಲ ಸಂದರ್ಶನದ 50ನೇ ವರ್ಷದ ನೆನಪಿಗಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಈ ದಾರು ಶಿಲ್ಪದ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನೀಡಿದ್ದಾರೆ.
ದೇವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯರು ಹೊದ್ರಾಳಿ ಸುಬ್ಬಣ್ಣ ನಾಗರಾಜ್ ಹಾಗೂ ಧರ್ಮ ಪತ್ನಿ ಮೀನಾಕ್ಷಿ ದಂಪತಿಗಳನ್ನು ಗೌರವಿಸಿ ಶ್ರೀ ದೇವರ ಅನುಗ್ರಹ ಪ್ರಸಾದ ಹಾಗೂ ವಿಶೇಷ ಸ್ಮರಣಿಕೆ ನೀಡಿದರು. ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಅವರ ಕಿರು ಪರಿಚಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಕಾಷ್ಟ ಶಿಲ್ಪಿ ಸುಕುಮಾರ ಗುಡಿಗಾರ ಹಾಗೂ ಕೃಷ್ಣ ಗುಡಿಗಾರ ಸಹೋದರರು ಹಾಗೂ ದೇವಳದ ಇಂಜಿನಿಯರ್ ಎಚ್.ಶ್ರೀಕಾಂತ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧರ್ಮದೇಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಸಹೋದರರು, ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೆ.ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ದಾರು ಶಿಲ್ಪ ಕೊಡುಗೆಯನ್ನು ನೀಡಿದ ಹೊದ್ರಾಳಿ ಸುಬ್ಬಣ್ಣ ನಾಗರಾಜ್ ಹಾಗೂ ಧರ್ಮ ಪತ್ನಿ ಮೀನಾಕ್ಷಿ ದಂಪತಿಗಳನ್ನು ದೇಗುಲದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯರು ಗೌರವಿಸಿದರು. ಧರ್ಮದೇಶಿಗಳಾದ ಕೆ.ನಿರಂಜನ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಸಹೋದರರು, ದೇವಳದ ಮ್ಯಾನೇಜರ್ ನಟೇಶ್ ಕಾರಂತ್ ಇದ್ದರು.












Leave a Reply