ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಪೂಜ್ಯರಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮೀಜಿಗಳು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವ ಮೂಲಕ ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು. ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ ಎಂದು ಹೇಳಿ, ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರಿಶ್ಚಂದ್ರ ಹಾಗೂ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಅವರು ಕಾರ್ಯಕ್ರಮದ ಪರಿಚಯ ಭಾಷಣ ನೀಡಿ, ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್, ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗಡೆ, ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಧುಸೂಧನ ನಾಯಕ್, ಹಿರಿಯ ವೈದ್ಯರಾದ ಡಾ.ಚಂದ್ರಶೇಖರ್ ಅಡಿಗ, ಡಾ. ಆರ್.ಎನ್. ಭಟ್, ಡಾ.ಅಶೋಕ್ ಕುಮಾರ್ ವೈ.ಜಿ., ಹೃದಯ ರೋಗ ತಜ್ಞ ಡಾ. ವಿಷುಕುಮಾರ್, ಡಾ. ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಡಿಜಿಟಲ್ ದಾಖಲೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಡಿ-ಸ್ಕ್ರೈಬ್ ಸಾಫ್ಟ್ವೇರ್ನ ಸಹ ಸಂಸ್ಥಾಪಕರಾದ ಶ್ರೀ ಅಕ್ಷಯ ವಿ. ನಾಯಕ್ ಹಾಗೂ ಶ್ರೀ ಕಿರಣ್ ರಾವ್ ಅವರಿಗೆ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಹಿರಿಯರಾದ ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರೀ , ಶ್ರೀ ದಾಮೋದರ ಭಟ್ ರವರು ಹಾಗೂ ಉಡುಪಿಯ ರಾಘವೇಂದ್ರ ಮಠದ ವ್ಯವಸ್ಥಾಪಕ ಶ್ರೀ ಜಯತೀರ್ಥ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಯುತ ಯೂಸುಫ್ ರವರು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಜ್ಜುಗೊಳಿಸಿದರು. ಕರ್ತವ್ಯ ನಿರತ ವೈದ್ಯರು ಹಾಗೂ ರೋಗಿಗಳ ಬಂಧುಗಳು ಸಾಕ್ಷಿಯಾಗಿ ಕಂಡು ಸಂಭ್ರಮಿಸಿದರು.












Leave a Reply