ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ಇಲಾಖೆಯಿಂದ ಸ್ಮಾರ್ಟ್ ಮೀಟರ್ ದರ ಏರಿಕೆಯ ಶಾಕ್ : ಕೆ.ವಿಕಾಸ್ ಹೆಗ್ಡೆ

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಮೆಸ್ಕಾಂ ಇಲಾಖೆ ಹೊಸ ವರ್ಷದಲ್ಲಿ ವಿದ್ಯುತ್ ಶಾಕ್ ನೀಡಿದೆ. ಈ ಹಿಂದೆ ಸಿಂಗಲ್ ಪೇಸ್ ಹಳೆಯ ಮೀಟರಿಗೆ 936 ರೂಪಾಯಿ ಇತ್ತು ಆದರೆ ಈಗ ಹೊಸ ಸ್ಮಾರ್ಟ್ ಮೀಟರ್ ನ್ನು ಖಾಸಗಿಯವರ ಮೂಲಕ ಖರೀದಿ ಮಾಡಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕಕ್ಕೆ ಬಳಸುವ ಸ್ಮಾರ್ಟ್ ಮೀಟರ್ ದರ 4,785 ರೂಪಾಯಿ. ಅದೇ ತ್ರೀ ಫೇಸ್ ವಿದ್ಯುತ್ ಸಂಪರ್ಕ ಪಡೆಯಲು ಹಿಂದೆ ಮೀಟರ್ ದರ 2300 ರೂಪಾಯಿ ಇತ್ತು ಅದೇ ಈಗ  ಹೊಸ ಸ್ಮಾರ್ಟ್ ಮೀಟರ್ ದರ 8400 ರೂಪಾಯಿ.

ಇದು  ತಾತ್ಕಾಲಿಕ ಸಂಪರ್ಕ ಪಡೆಯುವ ಹಾಗೂ ಹೊಸದಾಗಿ  ವಿದ್ಯುತ್ ಸಂಪರ್ಕ ಪಡೆಯುವ ರೈತರು ಹಾಗೂ ಜನಸಾಮಾನ್ಯರಿಗೆ ಅನಗತ್ಯ ಹೊರೆಯಾಗಲಿದೆ. ಈ ಸ್ಮಾರ್ಟ್ ಮೀಟರ್ ನ ಮುಂದುವರಿದ ಭಾಗವಾಗಿ ಮುಂದೆ ಮೆಸ್ಕಾಂ ಇಲಾಖೆ ಪ್ರಿಪೆಯ್ಡ್ ವ್ಯವಸ್ಥೆ ವಿದ್ಯುತ್ ಬಿಲ್ ಜಾರಿಗೆ ತಂದು ಇಂದು ಶಕ್ತಿ ಯೋಜನೆಯಡಿ ರೈತರ ಹತ್ತು ಅಶ್ವಶಕ್ತಿ ತನಕದ ಕೃಷಿ ಪಂಪು ಸೆಟ್ ಗಳ ಉಚಿತ ವಿದ್ಯುತ್ ಸಂಪರ್ಕವನ್ನು ಕಾಲಕ್ರಮೇಣ ನಿಲ್ಲಿಸುವ ಹುನ್ನಾರವನ್ನು ಕೂಡ ಮೆಸ್ಕಾಂ ಇಲಾಖೆ ಹೊಂದಿದೆ.

ಆದುದರಿಂದ ಸರ್ಕಾರ ಕೂಡಲೇ ಈ ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ವಿದ್ಯುತ್ ಗ್ರಾಹಕರಿಗೆ ಆಗುತ್ತಿರುವ ಅನಗತ್ಯ ಆರ್ಥಿಕ ನಷ್ಟವನ್ನು ತಪ್ಪಿಸಬೇಕು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *