ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಪ್ತಿ: ಶ್ರೀರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಹಳೆ ವಿದ್ಯಾರ್ಥಿ ಸಂಭ್ರಮ 2025

ಶಾಲಾ ವಾರ್ಷಿಕೋತ್ಸವ ಮತ್ತು ಹಳೆ ವಿದ್ಯಾರ್ಥಿ ಸಂಭ್ರಮ  2025ರ ಸಂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ಡಾಕ್ಟರ್ ಬಿ.ವೆಂಕಟರಾಮ ಉಡುಪ ಇವರು ತಮ್ಮ ಅಧ್ಯಕ್ಷೀಯ ಹಾಗೂ ಸನ್ಮಾನಿತ ಮಾತನಾಡುತ್ತಾ ಈ ಸನ್ಮಾನ  ನನ್ನ ಪಿತಾಶ್ರೀಗಳಿಗೆ ಅರ್ಪಿಸುತ್ತೇನೆ ಎಂದರು. ನನ್ನ ತಂದೆ ಕಟ್ಟಿದ ಶಾಲೆಯನ್ನು ಮುಂದುವರೆಸಿಕೊಂಡು ಬರಲು ಹಳೆ ವಿದ್ಯಾರ್ಥಿಗಳು ಮತ್ತು ಊರಿನವರ ಪೋಷಕರ ಸಹಕಾರವಿದೆ ಎಂದರು.

ನಮ್ಮ ಸಂಸ್ಥೆ 72 ವರ್ಷಗಳಿಂದ ಗಟ್ಟಿಯಾಗಿ ಮುಂದುವರೆಯಲು ಮಾಜಿ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಕಾರಣ ಎಂದು ಹೇಳಿದರು. ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಹೈಸ್ಕೂಲ್ನಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ರೆ ಪಿಯುಸಿ ಹಾಗೂ ಮುಂದಿನ ಹಂತದ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳುವ ಮೂಲಕ ಕನ್ನಡ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳ ಸಾಧನೆಗೆ ಯಾವುದೇ ರೀತಿಯಲ್ಲಿ ತೊಡಕು ಆಗೋದಿಲ್ಲ ಎಂದು ಹೇಳಿದರು. 

ದಿಕ್ಸೂಚಿ ಭಾಷಣವನ್ನು ಮಾಡಿದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆಯ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀ ಭಾಸ್ಕರ  ಉಡುಪ ಇವರು ಶಾಲೆಯ ಅಭಿವೃದ್ಧಿಗೆ ಶಾಲಾ ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ಹೇಳಿದರು. ಶಾಲೆ ಉಳಿಯಲು ಹಳೆ ವಿದ್ಯಾರ್ಥಿಗಳಿಗೆ ಎರಡು ಸೂತ್ರಗಳನ್ನು ತಿಳಿಸಿದರು ಒಂದನೆಯ ಸೂತ್ರ ಒಟಿಪಿ (ಒನ್ ಟೈಮ್ ಪೇಮೆಂಟ್)  ಇನ್ನೊಂದು ಸೂತ್ರ ಓ ಟಿ ಟಿ( ಒನ್ ಟೈಮ್ ಟ್ರಾನ್ಸ್ಫರ್) ಶಾಲೆಯನ್ನು ಉಳಿಸಲು ಹಳೆ ವಿದ್ಯಾರ್ಥಿಗಳ ಊರಿನವರ ವಿದ್ಯಾಭಿಮಾನಿಗಳ ಸಹಕಾರ ಅಗತ್ಯ ಎಂದು ಹೇಳಿದರು. ನಮ್ಮ ಶಾಲೆಯ 2000 ಹಳೆ ವಿದ್ಯಾರ್ಥಿಗಳು ಕೈಜೋಡಿಸಿದರೆ ನಮ್ಮ ಶಾಲೆಯ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು.

ವೇದಿಕೆ ಮೇಲಿರುವ ಎಲ್ಲಾ ಗಣ್ಯರು ಸೇರಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ತದನಂತರದಲ್ಲಿ ಶಾಸಕರನ್ನೊಳಗೊಂಡು ಎಲ್ಲಾ ಅತಿಥಿಗಣ್ಯರು ಹಳೆ ವಿದ್ಯಾರ್ಥಿಗಳು, ಊರಿನವರು ಹಾಗೂ ವಿದ್ಯಾ ಅಭಿಮಾನಿಗಳ ಪರವಾಗಿ ಶಾಲಾ ಸಂಚಾಲಕರಾದ ಡಾಕ್ಟರ್ ಬಿ. ವಿ ಉಡುಪರನ್ನು  ಸನ್ಮಾನಿಸಿದರು.

ನಂತರದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಧನೆಯ ಗುರುತಿಸಿ ಪ್ರಥಮ ಮತ್ತು ದ್ವಿತೀಯ ಬಹುಮಾನದ ಜೊತೆಗೆ ನಗದು ಬಹುಮಾನ ನೀಡಲಾಯಿತು. ಪ್ರಥಮ ಬಂದವರಿಗೆ ಬಾಬು ಶೆಟ್ಟಿ ಜಪ್ತಿ,ಮುಖ್ಯೋಪಾಧ್ಯಾಯರು ,ನೇತಾಜಿ ಸುಭಾಷ್ ಚಂದ್ರ ಬೋಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ದೇರಳಕಟ್ಟೆ ಹಾಗೂ ದ್ವಿತೀಯ ಬಂದ ಮಕ್ಕಳಿಗೆ ರಾಜೇಶ್ವರಿ ಗೋಪಾಲ ಮೊಗವೀರ ಶಿಕ್ಷಕಿ ಜಪ್ತಿ ಇವರು ನಗದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ನಂತರ ಪ್ರತಿಭಾ ಪುರಸ್ಕಾರ ಕಳೆದ ಸಾಲಿನ 7ನೇ ತರಗತಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಿದ ಬಳಿಕ ಎಸ್. ಎಸ್ .ಎಲ್.ಸಿ ,ಪಿ.ಯು.ಸಿ ಮತ್ತು ಡಿಗ್ರಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳ ಮತ್ತು ಹಳೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ಜ್ಞಾನ ದೀಪ ಶಿಕ್ಷಕಿ ಶಾಲಿನಿ ಎಸ್.ಕುಲಾಲ್ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಗೌರವ ಶಿಕ್ಷಕಿ ಕುಮಾರಿ ಚೇತನ ವಾಚಿಸಿದರು.

ಶಾಲಾ ಮುಖ್ಯೋಪಾಧ್ಯಯರಾದ ಜಯಪ್ಪ ಹಿತ್ತಲಮನಿ ಪ್ರಾಸ್ತಾವಿಕ ಮಾತಿನ ಜೊತೆಗೆ ವರದಿಯನ್ನು ಮಂಡಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರು ಚಂದ್ರ ಉಪನ್ಯಾಸಕರು ಸ್ವಾಗತಿಸಿದರು. ಶುಭಕರ, ಹಳೆ ವಿದ್ಯಾರ್ಥಿ ವಂದಿಸಿದರು ಹಾಗೂ ಗೌರವ ಶಿಕ್ಷಕರಾದ ಉದಯ ಕೊಠಾರಿ ಹಾಗೂ ಶ್ರೀಮತಿ ವಿಜಯ ರಾಘವೇಂದ್ರ ಕುಲಾಲ್ ನಿರೂಪಿಸಿದರು..

Leave a Reply

Your email address will not be published. Required fields are marked *