ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಿರಿಯ ನಾಗರಿಕರ ಸಂಘ, ಬ್ರಹ್ಮಾವರ ತಾಲೂಕು ಇದರ ಅಧ್ಯಕ್ಷರಾಗಿ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಆಯ್ಕೆ

ಬ್ರಹ್ಮಾವರ: ಹಿರಿಯ ನಾಗರಿಕರ ಸಂಘ (ರಿ), ಬ್ರಹ್ಮಾವರ ತಾಲೂಕು ಇದರ ಮಹಾಸಭೆಯು ಶ್ರೀಯುತ  ಭಾಸ್ಕರ್ ಎಂ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾರೀಕು 23-12-25 ರಂದು ಹಿರಿಯ ನಾಗರಿಕರ ಸಂಘದ ಸಭಾಂಗಣದಲ್ಲಿ ಜರಗಿತು.

ಶ್ರೀಯುತ ವಸಂತ ಶೆಟ್ಟಿ ಬಳಗದವರಿಂದ ನಡೆದ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಸಹ ಕಾರ್ಯದರ್ಶಿಗಳಾದ ಶ್ರೀಯುತ ಭಾಸ್ಕರ್ ಶೆಟ್ಟಿ.ಸಿಯವರು ಸಭೆಯ ಸೂಚನಾ ಪತ್ರವನ್ನು ಓದಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. 2024-25ನೇ ಸಾಲಿನಲ್ಲಿ ನಿಧನರಾದ ಗೌರವಾನ್ವಿತ ಸದಸ್ಯರಿಗೆ ಶ್ರದ್ಧಾಂಜಲಿಯನ್ನ ಮೌನ ಪ್ರಾರ್ಥನೆಯೊಂದಿಗೆ ಅರ್ಪಿಸಲಾಯಿತು. ನಿಧನ ಹೊಂದಿದವರ ಪಟ್ಟಿಯನ್ನು ಉಪಾಧ್ಯಕ್ಷರಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ವಾಚಿಸಿದರು.

ಕಾರ್ಯದರ್ಶಿಗಳಾದ ಶ್ರೀಯುತ ಆಲ್ಪೋನ್ಸಸ್ ಡಿ’ ಸೋಜರವರು ವರದಿಯನ್ನ ವಾಚಿಸಿ ಖಜಾಂಜಿಗಳಾದ ಶ್ರೀಯುತ ಕೆ. ಭುಜಂಗ ಶೆಟ್ಟಿಯವರು ಲೆಕ್ಕಪತ್ರವನ್ನ ಮಂಡಿಸಿ ಸಭೆಯಿಂದ ಅನುಮೋದನೆಯನ್ನ ಪಡೆದುಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರುಗಳಾದ ಡಾಕ್ಟರ್ ಶಾಂತರಾಮ್ ಶೆಟ್ಟಿ, ಡಾಕ್ಟರ್ ರಾಘವೇಂದ್ರ ಭಟ್, ಶ್ರೀಯುತ ಎನ್. ತಾರಾನಾಥ ಶೆಟ್ಟಿ, ಶ್ರೀಯುತ  ವೈ . ದಯಾನಂದ ಶೆಟ್ಟಿ , ಶ್ರೀಯುತ ಮಾಧವ ಖಾರ್ವಿ ಮತ್ತು ಶ್ರೀ ಹರಿಶ್ಚಂದ್ರ  ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶ್ರೀಯುತ ವೈ ದಯಾನಂದ್ ಶೆಟ್ಟಿ, ಶ್ರೀಯುತ  ಎನ್. ತಾರಾನಾಥ ಶೆಟ್ಟಿಮತ್ತು ಡಾಕ್ಟರ್ ರಾಘವೇಂದ್ರ ಭಟ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಚುನಾವಣಾ ಅಧಿಕಾರಿಗಳಾದ ಶ್ರೀಯುತ ರಘುನಾಥ್ ಶೆಟ್ಟಿಯವರು 2025-27 ನೇ ಸಾಲಿಗೆ ಸರ್ವಾನು ಮತದಿಂದ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಸಭೆಯಲ್ಲಿ ಯಾಚಿಸಿದರು. 

ಗೌರವಾಧ್ಯಕ್ಷರಾಗಿ  ಶ್ರೀಯುತ ಟಿ.ಭಾಸ್ಕರ್  ರೈ , ಅಧ್ಯಕ್ಷರಾಗಿ ಮೇಜರ್.ಜಿ. ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀಯುತ ಆಲ್ಪೋನ್ಸಸ್ ಡಿ’ಸೋಜಾ, ಕಾರ್ಯದರ್ಶಿಗಳಾಗಿ ಶ್ರೀಯುತ ಸಂಕಯ್ಯ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಶ್ರೀಯುತ ಭಾಸ್ಕರ್ ಶೆಟ್ಟಿ ಸಿ,ಮತ್ತು ಖಜಾಂಜಿಗಳಾಗಿ ಶ್ರೀಯುತ ಕೆ. ಕೃಷ್ಣಮೂರ್ತಿ.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ: ಶ್ರೀ ಟಿ. ಕೃಷ್ಣಯ್ಯ ಶೆಟ್ಟಿ, ಶ್ರೀ ಟಿ .ಸುಧಾಕರ್ ಶೆಟ್ಟಿ, ಶ್ರೀ ಕೆ. ಜಯರಾಮ್ ಶೆಟ್ಟಿ, ಶ್ರೀ  ವಿ.ವರದಾನಂದ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ ಮತ್ತು ಶ್ರೀ ಎ. ಆನಂದ ಶೆಟ್ಟಿ. ಲೆಕ್ಕಪರಿಶೋಧಕರನ್ನಾಗಿ ಸಿ.ಎ ಪದ್ಮಾನಾಭ ಕಾಂಚನ್ ರವರನ್ನ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯು ಈ ಕೆಳಗಿನ ಸದಸ್ಯರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿಕೊಂಡಿತು. ಶ್ರೀ ಉದಯ್ ಕುಮಾರ್ ಶೆಟ್ಟಿ, ಶ್ರೀ ಭಾಸ್ಕರ್ ಎಂ. ಶೆಟ್ಟಿ,ಶ್ರೀ ನಿತ್ಯಾನಂದ ಶೆಟ್ಟಿ, ಶ್ರೀ ಹರಿಂದ್ರನಾಥ್ ಶೆಟ್ಟಿ, ಶ್ರೀ ಎ .ಬಿ. ಶೆಟ್ಟಿ, ಶ್ರೀ ಸುದರ್ಶನ್ ಶೆಟ್ಟಿ ಮತ್ತು ಶ್ರೀ ಬಿ.ಟಿ.ನಾಯಕ್ . ಹಿರಿಯ ಸದಸ್ಯರಾದ ಶೇಡಿಕೊಡ್ಲು ವಿಠಲ ಶೆಟ್ಟಿ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಶುಭಾಶಯವನ್ನು ಕೋರುತ್ತಾ ಹಿಂದಿನ ಅಧ್ಯಕ್ಷರ ಕಾರ್ಯವೈಕರಿಯನ್ನು ಶ್ಲಾಘಿಸಿದರು.

ಅಧ್ಯಕ್ಷರಾದ ಶ್ರೀ ಭಾಸ್ಕರ್ ಎಂ .ಶೆಟ್ಟಿ ಅವರು 2023-25ನೇ ಸಾಲಿನಲ್ಲಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಹಕರಿಸಿದ  ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಹಿರಿಯ ಸದಸ್ಯರಾದ ಶ್ರೀಯುತ ಹರಿಂದ್ರನಾಥ ಶೆಟ್ಟಿಯವರು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

Leave a Reply

Your email address will not be published. Required fields are marked *