ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ,ಉಡುಪಿ ಜಿಲ್ಲೆ “ಊರ್ಮನಿ ಮಕ್ಳ್ ಓದಿಗೊಂದ್ ಸ್ಫೂರ್ತಿ,ಮಕ್ಳ್ ತರ್ಲಿ ನಮ್ಮೂರಿಗೊಂದ್ ಕೀರ್ತಿ ” ದೇಯ ವಾಕ್ಯದೊಂದಿಗೆ ಹಲವಾರು ಸೇವಾ ಕಾರ್ಯಕ್ರಮವನ್ನು ಮಾಡಿರುವ ತಂಡ 26/12/2025 ರಂದು, ಸ. ಹಿ. ಪ್ರಾ. ಶಾಲೆ ಟಿ. ಟಿ. ರಸ್ತೆ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನೆರವೇರಿತು ಮುಂದಿನ ಶೈಕ್ಷಣಿಕ ವರ್ಷಕ್ಕೂ ಕೂಡ ಸಹಕಾರ ಆಗುವಂತೆ ಮಕ್ಕಳಿಗೆ ಸಮವಸ್ತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಟೀಮ್ ನ ಸಂಸ್ಥಾಪಕರು, ಅಧ್ಯಕ್ಷರಾದ ಪುಂಡಲೀಕ ಮೊಗವೀರ, ದಾನಿಗಳಾದ ಮಹಿಳಾ ಗೌರವಾಧ್ಯಕ್ಷೆ ಸೌಮ್ಯ ಹಾಸನ ಹಾಗೂ ಜಯರಾಜ್ ಸಾಲಿಯಾನ್ ಪಡುಕೆರೆ, ಸುಧೀರ್ ಕುಂದಾಪುರ, ಸಂತೋಷ್ ಮಣೂರು, ನಯನ್ ಕುಮಾರ್, ಸಂತೋಷ್ ಮಾರ್ಕೋಡು, ಗಿರಿಜಾ ಸುವರ್ಣ, H.M.ಲೀಲಾವತಿ ಹಾಗೂ ಶಾಲಾ SDMC ಅಧ್ಯಕ್ಷರಾದ ಶ್ರೀಮತಿ ಸುಲೋಚನಾ, ಸವಿತಾ ಕುಂದಾಪುರ ಸಹ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು,ಅತಿಥಿ ಶಿಕ್ಷಕಿ ರಕ್ಷಿತಾ ವಂದಿಸಿದರು ಮತ್ತು ಮಕ್ಕಳ ಪೋಷಕರು ಸ್ಥಳೀಯರು ಉಪಸ್ಥಿತರಿದ್ದರು.

ಕುಮಾರಿ ಸೌಮ್ಯ ಹಾಸನ ಅವರನ್ನು ಗೌರವಿಸಲಾಯಿತು, ಟ್ರಸ್ಟ್ ನ ಜಯರಾಜ್ ಸಾಲಿಯಾನ್ ಮಕ್ಕಳಿಗೆ ಸಿಹಿ ಹಂಚಿದರು, ಈ ಹಿಂದೆ ಇಲ್ಲಿನ ಅಂಗನವಾಡಿ ಮಕ್ಕಳಿಗೆ ಜೈ ಕುಂದಾಪ್ರ ತಂಡ ಸಮವಸ್ತ್ರ ನೀಡಿರುತ್ತಾರೆ ಹಾಗೆ ಈ ಭಾಗದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜನೆ ಮಾಡಿ ಸಾರ್ವಜನಿಕರ ಸ್ಥಳಿಯರ ಪ್ರಶಂಸೆಗೆ ಪಾತ್ರವಾಗಿದೆ.












Leave a Reply